ಜಾನಪದ ಲೋಕ‌ ಪ್ರಶಸ್ತಿಗೆ ಕಲಬುಗಿಯಿಂದ ಇಬ್ಬರು ಆಯ್ಕೆ

ಜಾನಪದ ಲೋಕ‌ ಪ್ರಶಸ್ತಿಗೆ ಕಲಬುಗಿಯಿಂದ ಇಬ್ಬರು ಆಯ್ಕೆ

ಜಾನಪದ ಲೋಕ‌ ಪ್ರಶಸ್ತಿಗೆ ಕಲಬುಗಿಯಿಂದ ಇಬ್ಬರು ಆಯ್ಕೆ

ಕಲಬುರಗಿ : ಕರ್ನಾಟಕ ಜಾನಪದ ಪರಿಷತ್ತನಿಂದ ಪ್ರತಿ ವರ್ಷ ಕೊಡಮಾಡುವ ರಾಜ್ಯಮಟ್ಟದ 2025 ನೇ ಸಾಲಿನ ಜಾನಪದ ಲೋಕ ಗೌರವ ಪ್ರಶಸ್ತಿಗೆ ಮಕ್ಕಳ ಸಾಹಿತಿ, ಜಾನಪದ ತಜ್ಞರಾದ ಶ್ರೀ ಎ. ಕೆ.ರಾಮೇಶ್ವರ ಅವರನ್ನು ಆಯ್ಕೆ ಮಾಡಲಾಗಿದೆ ಪ್ರಶಸ್ತಿ ಮತ್ತು ಹತ್ತು ಸಾವಿರ ರೂಪಾಯಿಗಳು,ನೆನಪಿನ ಕಾಣಿಕೆ ಹಾಗೂ ಶಾಲು ಸನ್ಮಾನವಿದೆ,ಇನ್ನೋರ್ವರಾದ ಚಿತ್ತಾಪೂರ ತಾಲೂಕಿನ ರಾಮತೀರ್ಥ ಗ್ರಾಮದ ಬುಡಕಟ್ಟು ಜನಾಂಗದ ಶ್ರೀಮತಿ ಬಸ್ಸಮ್ಮ ಇವರನ್ನು *ಲಕ್ಷ್ಮಮ್ಮ ನಾಗೇಗೌಡ* ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ, ಪ್ರಶಸ್ತಿ ಹದಿನೈದು ಸಾವಿರ ರೂಪಾಯಿಗಳು ನೆನಪಿನ ಕಾಣಿಕೆ ಮತ್ತು ಶಾಲು ಸನ್ಮಾನವಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ‌ ರಾಜ್ಯಾಧ್ಯಕ್ಷರಾದ ಪ್ರೊ.ಹಿ.ಚಿ.ಬೋರಲಿಂಗಯ್ಯ ನವರು ಆಯ್ಕೆ ಮಾಡಿ,ಪತ್ರದ ಮುಖಾಂತರ ತಿಳಿಸಿದ್ದಾರೆ. ಬೆಂಗಳೂರಿನ ರಾಮನಗರದ ಬಳಿ‌ ಇರುವ ಜಾನಪದ ಲೋಕದಲ್ಲಿ ಫೆಬ್ರುವರಿ 8 ಮತ್ತು 9 ರಂದು ಎರಡು ದಿನಗಳ ಕಾಲ ನಡೆಯುವ ಮಹಿಳಾ ಜಾನಪದ ಲೋಕೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.        

ಹರ್ಷ

 ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀ ಸಿ.ಎಸ್.ಮಾಲಿ ಪಾಟೀಲ ಚಿತ್ತಾಪೂರ ತಾಲೂಕಿನ ಅಧ್ಯಕ್ಷರಾದ ಶ್ರೀ ನಾಗಯ್ಯಸ್ವಾಮಿ ಅಲ್ಲೂರ ಹಾಗೂ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ ಎಂದು ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಡಿ.ಪಿ.ಸಜ್ಜನ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.