RMSA ಶಿಕ್ಷಕರ ಹೋರಾಟಕ್ಕೆ ಸಂದ ಜಯ ಶಶೀಲ್ ಜಿ ನಮೋಶಿ
ಕಲಬುರಗಿ : ಕಳೆದ ಎರಡು ವರ್ಷಗಳಿಂದ ಹೊಸದಾಗಿ ರಚನೆಯಾದ ತಾಲೂಕುಗಳ RMSA ಪ್ರೌಢ ಶಾಲೆ ಸಿಬ್ಬಂದಿಗಳ ವೇತನ 4-5 ತಿಂಗಳು ವಿಳಂಬವಾಗಿ ಪಾವತಿಯಾಗುತ್ತಿದ್ದನ್ನು ಖಂಡಿಸಿ ಮೊನ್ನೆ ಆ ಶಿಕ್ಷಕರು ಹಾಗೂ ಸಿಬ್ಬಂದಿಗಳು ಅಪರ ಆಯುಕ್ತರ ಕಚೇರಿಯಲ್ಲಿ ಪ್ರತಿಭಟನೆಯಲ್ಲಿ ನಾನು ಸಹ ಭಾಗವಹಿಸಿದ್ದಕ್ಕೆ ಇಂದು ಜಯಸಿಕ್ಕಿದೆ ಎಂದು ನಮೋಸಿ ಹೇಳಿದರು .
ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಸೂಚಿಸಿದ್ದೆ ಅಂದು ಸ್ಥಳಕ್ಕೆ ಆಗಮಿಸಿದ ಅಪರ ಆಯುಕ್ತರು ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ನಂತರ ನಾನು ವಿಧಾನ ಪರಿಷತ್ ಕಲಾಪದಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ಗಮನಸೆಳೆದಿದ್ದೆ ಅದರಂತೆ ಇಂದು ಸರ್ಕಾರ ಶಿಕ್ಷಕರ ವೇತನ ಬಿಡುಗಡೆಗೆ ಹಣ ಬಿಡುಗಡೆ ಮಾಡಿದೆ. ಆದರೆ ಹೊಸ ತಾಲೂಕುಗಳ ಡಿ ಡಿ ಓ ಕೋಡ್ ಏ 2 ದಲ್ಲಿ ರಿಮ್ಯಾಪಿಂಗ್ ಆಗಬೇಕಾಗಿದೆ. ಆದ್ದರಿಂದ ನಾನು ಇಂದು ಕಲಬುರ್ಗಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಶ್ರೀ ಸೂರ್ಯಕಾಂತ ಮದಾನೆ ಇವರೊಂದಿಗೆ ಮಾತನಾಡಿದ್ದೆನೆ. ಅವರು ಸಂಭಂದಿಸಿದ ಹೊಸ ತಾಲೂಕುಗಳ ಬಿ ಇ ಓ ಗಳ ಜೋತೆ ಮಾತನಾಡಿದ್ದು ಇನ್ನು ಮೂರ್ನಾಲ್ಕು ದಿನಗಳಲ್ಲಿ ರಿ ಮ್ಯಾಪಿಂಗ್ ಮಾಡಿ ಎಚ್ ಆರ್ ಎಂ ಎಸ್ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದಾರೆ. ಈ ವಾರದಲ್ಲಿ ಎಲ್ಲ ಶಿಕ್ಷಕರ ವೇತನ ಸಮಸ್ಯೆ ಬಗೆಹರಿಯುತ್ತದೆ ಎಂದು ಪತ್ರಿಕೆಯಲ್ಲಿ ತಿಳಿಸಿದ್ದಾರೆ.