ಶಿವ ಪಾರ್ವತಿಯರ ಕಲ್ಯಾಣ ಮಹೋತ್ಸವ ಕಾರ್ಯಕ್ರಮ

ಶಿವ ಪಾರ್ವತಿಯರ ಕಲ್ಯಾಣ ಮಹೋತ್ಸವ ಕಾರ್ಯಕ್ರಮ

ಶಿವ ಪಾರ್ವತಿಯರ ಕಲ್ಯಾಣ ಮಹೋತ್ಸವ ಕಾರ್ಯಕ್ರಮ

ಕಮಲನಗರ: ತಾಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ಮಹಾದೇವ ವಾಡಿಯಲ್ಲಿ ಶ್ರೀ ಮಹಾದೇವ ಮಂದಿರದಲ್ಲಿ ಮುಂಜಾನೆ ವೀರಭದ್ರ ಸ್ವಾಮಿ ಮತ್ತು ಶಿವರುದ್ರಸ್ವಾಮಿ ಶಿವಲಿಂಗಕ್ಕೆ ರುದ್ರಾಭಿಷೇಕ ಪೂಜೆ ನೆರವೇರಿಸುವ ಮೂಲಕ ಚಾಲನೆ ಸಿಕ್ಕಿತು.

 ಬೆಳಗ್ಗೆಯಿಂದ ದಿನವಿಡಿ ಮಹಾದೇವರಿಗೆ ಪೂಜೆ ಸಲ್ಲಿಸುವ ಮೂಲಕ ತೆಂಗು ಕರ್ಪೂರ ನೈವೇದ್ಯ ಭಕ್ತರು ಅರ್ಪಿಸಿದರು.

  ಗ್ರಾಮಸ್ಥರಿಂದ ಚಂದಾ ಪಟ್ಟಿ ಮಾಡಿ ಭಕ್ತಿ ದಾಸೋಹ ನೇರವೇರಿಸಿದರು.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ.ಅನ್ನ , ಹುಗ್ಗಿ ಸಾರು, ಅಂಬಲಿ, ಖಿಚಡಿ ಜೋಳಬಾಣ ಪ್ರಸಾದ್ ಸ್ವೀಕರಿಸಿದರು.

ಸಾಯಂಕಾಲ ಗ್ರಾಮದ ಶಿವಾಜಿ ರಾವ್ ಪಾಟೀಲ್ ಹಾಗೂ ಶಂಕರ ಪೂಜಾರಿ ಮನೆಯವರಿಂದ ಕಾವಡಿ ತೆಗೆದು ಕೊಂಡು ಬಾಜಾ ಭಜಂತ್ರಿಯೊಂದಿಗೆ ಭವ್ಯ ಮೆರವಣಿಗೆ ಸಾಗಿ ಬಂದಿತ್ತು. ಮಹಾದೇವ ಮಂದಿರದ ಆವರಣದಲ್ಲಿ ಭಕ್ತರೊಂದಿಗೆ ಸೇರಿಕೊಂಡು ವಡು ಹೇಳಿ ಭಕ್ತರ ಸಮ್ಮುಖದಲ್ಲಿ ಕುಣಿದು ಕುಪ್ಪಳಿಸಿದರು.

ನಂತರ ಶಿವ ಮತ್ತು ಪಾರ್ವತಿ ಇವರಿಬ್ಬರ ಮದುವೆ ನೇರವೇರಿತು.ಪ್ರತಿ ವರ್ಷ ಚೈತ್ರ ಮಾಸದ ದ್ವಾದಶಿಯಂದು ಶಿವ ಪಾರ್ವತಿ ಕಲ್ಯಾಣ ಮಹೋತ್ಸವ ನಡೆಯುತ್ತದೆ.

ಈ ಕಾರ್ಯಕ್ರಮದ ಸಂಭ್ರಮಕ್ಕೆ ಭಾರ್ಷಿ ದಿನ ಎನ್ನುತ್ತಾರೆ. ಹಿಂದು ಸಂಪ್ರದಾಯದಂತೆ ಇಂದಿನಿಂದ ಮದುವೆ ಮುಂಜಿ ಕಾರ್ಯಕ್ರಮಗಳು ಪ್ರಾರಂಭಗೊಳುತ್ತವೆ ಎಂದು ಊರಿನ ಹಿರಿಯರು ಹೇಳುತ್ತಾರೆ.

ಈ ಸಂದರ್ಭದಲ್ಲಿ ಮಹಾದೇವ ಮಂದಿರದ ಕಮಿಟಿ ಅಧ್ಯಕ್ಷರಾದ ಸೋಪಾನ ಶಿಂಧೆ ಸಂತೋಷ್ ಎರೋಳೆ, ಭೀಮ್ ಹಂಗರಗೆ,ಗೋಪಾಲರಾವ್ ಪಾಟೀಲ್, ಮಾರುತಿ ಅಳಂದೆ, ರಾಹುಲ್ ಪಾಟೀಲ್, ರಾಮ್ ಕದಮ್, ಶಿವಪ್ಪ ಬೆಣ್ಣೆ, ಚಂದ್ರಕಾಂತ್ ಪುಲಾರಿ ಸುಧಾಕರ್ ಮೂಗಳೆ ಸೂರ್ಯಕಾಂತ್ ಕಾಡೊದೆ, ಶಂಕರ್ ವಡಗಾಂವೆ, ಬಸವ ಚಿಂದೆ ಯುವಕರು ಯುವತಿಯರು ಚಿಕ್ಕ ಮಕ್ಕಳು ಮುದುಕರು ವೃದ್ಧರು ಹಾಗೂ ಗ್ರಾಮಸ್ಥರು,ಭಕ್ತ ಸಮೂಹವೆ ಶಿವ ಪಾರ್ವತಿಯರ ಕಲ್ಯಾಣ ಮಹೋತ್ಸವಕ್ಕೆ ಸಾಕ್ಷಿಯಾಗಿದರು.