ಕೋಡ್ಲಿ ಬನಶಂಕರಿ ಗುಡಿ – ದೇವಾಂಗ ಸಮಾಜದ ಭಕ್ತಿಯ ಖಣಿ– ಶಿವರಾಜ ಅಂಡಗಿ ಅಭಿಪ್ರಾಯ

ಕೋಡ್ಲಿ ಬನಶಂಕರಿ ಗುಡಿ – ದೇವಾಂಗ ಸಮಾಜದ ಭಕ್ತಿಯ ಖಣಿ– ಶಿವರಾಜ ಅಂಡಗಿ ಅಭಿಪ್ರಾಯ

ಕೋಡ್ಲಿ ಬನಶಂಕರಿ ಗುಡಿ – ದೇವಾಂಗ ಸಮಾಜದ ಭಕ್ತಿಯ ಖಣಿ– ಶಿವರಾಜ ಅಂಡಗಿ ಅಭಿಪ್ರಾಯ

ಕಲಬುರಗಿ : ಯಂತ್ರದಂತೆ ಸಾಗುತ್ತಿರುವ ಆಧುನಿಕ ಜೀವನದಲ್ಲಿ ಹಬ್ಬ-ಹರಿದಿನಗಳು, ಜಾತ್ರೆಗಳು ಧಾರ್ಮಿಕ ನಂಬಿಕೆಗಳೊಂದಿಗೆ ಜನರಲ್ಲಿ ಭಕ್ತಿ, ಸಾಮಾಜಿಕ ಸಾಮರಸ್ಯ ಮತ್ತು ಕೋಮು ಸೌಹಾರ್ದತೆಯನ್ನು ಬೆಳೆಸುವ ಮಹತ್ವದ ಪ್ರೇರಕ ಶಕ್ತಿಗಳಾಗಿವೆ ಎಂದು ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಹೇಳಿದರು.

 05-01-2026 ರಂದು ರಾತ್ರಿ 8 ಗಂಟೆಗೆ ಕೋಡ್ಲಿ ಗ್ರಾಮದ ಬನಶಂಕರಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಂಸ್ಕೃತಿಕ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಾಮಾನ್ಯವಾಗಿ ಜಾತ್ರೆಗಳಲ್ಲಿ ಒಂದೇ ದಿನ ಪಲಕ್ಕಿ ಉತ್ಸವ ನಡೆಯುತ್ತದೆ. ಆದರೆ ಕೋಡ್ಲಿ ಗ್ರಾಮದ ಬನಶಂಕರಿ ದೇವಿ ಜಾತ್ರೆಯಲ್ಲಿ ಐದು ದಿನಗಳ ಪಲಕ್ಕಿ ಉತ್ಸವ ನಡೆಯುವುದು ಅಪರೂಪದ ಹಾಗೂ ವಿಶಿಷ್ಟ ಆಚರಣೆ ಎಂದು ಪ್ರಶಂಸಿಸಿದರು. ಯಾವುದೇ ಸರ್ಕಾರಿ ಸೌಲಭ್ಯವಿಲ್ಲದೆ ಗ್ರಾಮದ ಭಕ್ತರು ತಮ್ಮ ಶಕ್ತಿ–ಶ್ರಮದಿಂದ ನಿರ್ಮಿಸಿದ ಈ ಭವ್ಯ ದೇವಸ್ಥಾನ ದೇವಾಂಗ ಸಮಾಜದ ಭಕ್ತಿಯ ಖಣಿಯಾಗಿದೆ ಎಂದರು.

ಕಾರ್ಯಕ್ರಮವನ್ನು ಕೊಡ್ಲಿ ರೇವಣಸಿದ್ದೇಶ್ವರ ಹಿರೇಮಠದ ಪೂಜ್ಯರಾದ ಬಸವಲಿಂಗ ಶಿವಾಚಾರ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಹಾಸ್ಯ ಕವಿ ರೇವಣಸಿದ್ದಪ್ಪ ದುಕಾನ ಅವರು ಹಾಸ್ಯದ ಚಟಕೆಗಳ ಮೂಲಕ ಮಹಿಳೆಯರು ಹಾಗೂ ಮಕ್ಕಳಿಗೆ ಧಾರ್ಮಿಕ ಆಚರಣೆಗಳ ಮಹತ್ವವನ್ನು ಮನೋರಂಜನೆಯೊಂದಿಗೆ ವಿವರಿಸಿದರು.

ಕಾಳಗಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಂತೋಷ ಕೊಡ್ಲಿ ಮಾತನಾಡಿ, ಮಕ್ಕಳಿಗೆ ಭಾಷೆ, ನಾಡು-ನುಡಿ, ನೆಲ-ಜಲದ ಅರಿವು ಮೂಡಿಸುವಂತಹ ಸಂಸ್ಕೃತಿಕ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.

ನೇಕಾರ ಸಮಾಜದ ಪ್ರಮುಖರಾದ ವಿನೋದಕುಮಾರ ಜನೆವರಿ ಮಾತನಾಡಿ, 20 ವರ್ಷಗಳ ಹಿಂದೆ ದೇವಾಂಗ ಸಮಾಜದ ಸಂಘಟನೆ ಹಾಗೂ ದೇವಸ್ಥಾನ ಅಭಿವೃದ್ಧಿಗಾಗಿ ಆರಂಭವಾದ ಪ್ರಯತ್ನ ಇಂದು ಭವ್ಯ ದೇವಸ್ಥಾನವಾಗಿ ರೂಪುಗೊಂಡಿರುವುದು ಸಮಾಜದ ಹಿರಿಯರು–ಕಿರಿಯರ ಸಮರ್ಪಣೆಯ ಫಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾಳಗಿ ತಾಲೂಕಿನ ನೌಕರರ ಸಂಘದ ಅಧ್ಯಕ್ಷ ಅನಿಲ್ ಗುತ್ತೇದಾರ, ವೇದಮೂರ್ತಿ ಶಂಕ್ರಯ್ಯ ಸ್ವಾಮಿ ಯಲ್ಮಾಮಡಿ, ಹಿರಿಯರಾದ ರಾಮಣ್ಣ ಪಾಟೀಲ್, ಶಿವು ಕಣ್ಣಿ, ಶ್ರೀಮಂತ ಗಂಜ್ಜಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದೇವಾಂಗ ಜಿಣೋದ್ಧಾರ ಟ್ರಸ್ಟ್ ಕಮಿಟಿ ಅಧ್ಯಕ್ಷ ಹಣಮಂತರಾವ ಹಳ್ಳಿ, ಪದಾಧಿಕಾರಿಗಳಾದ ಸಿದ್ರಾಮಪ್ಪ ಹಳ್ಳಿ, ಬಂಡಪ್ಪ ಕಿಟ್ಟ, ಶಂಕರ ಹಳ್ಳಿ, ಭೀಮರಾವ ಪಾಟೀಲ್, ವಿಠಲ ಅಡಕಿ, ಮಲ್ಲಿಕಾರ್ಜುನ ಹಳ್ಳಿ, ಚಂದ್ರಶೇಖರ ಪಾಟೀಲ್, ಮಲ್ಲಿಕಾರ್ಜುನ ಉಚ್ಚಟ್ಟಿ, ಅಶೋಕ ದಪೂರ, ನವೀನ ಅಡಕಿ, ರೇವಣಸಿದ್ದಯ್ಯ ಸ್ವಾಮಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

-