ಕಲ್ಬುರ್ಗಿ ಉತ್ತರ ತಾಲ್ಲೂಕು ಕನ್ನಡ ಜಾನಪದ ಪರಿಷತ್ ಘಟಕಕ್ಕೆ ನೂತನ ಅಧ್ಯಕ್ಷರ ಪಟ್ಟಣಕಾರ್ ನೇಮಕ

ಕಲ್ಬುರ್ಗಿ ಉತ್ತರ ತಾಲ್ಲೂಕು ಕನ್ನಡ ಜಾನಪದ ಪರಿಷತ್ ಘಟಕಕ್ಕೆ ನೂತನ ಅಧ್ಯಕ್ಷರ ಪಟ್ಟಣಕಾರ್ ನೇಮಕ

ಕಲ್ಬುರ್ಗಿ ಉತ್ತರ ತಾಲ್ಲೂಕು ಕನ್ನಡ ಜಾನಪದ ಪರಿಷತ್ ಘಟಕಕ್ಕೆ ನೂತನ ಅಧ್ಯಕ್ಷರ ಪಟ್ಟಣಕಾರ್ ನೇಮಕ 

ಕಲ್ಬುರ್ಗಿ: ಕನ್ನಡ ಜಾನಪದ ಪರಿಷತ್‌ ವತಿಯಿಂದ ಕಲ್ಬುರ್ಗಿ ಉತ್ತರ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಶ್ರೀ .ಪ್ರಭಾವ್ ಪಟ್ಟಣಕಾರ್, ಶಾಂತಿನಗರ, ಕಲ್ಬುರ್ಗಿ (585103) ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ನೀಡಿರುವ ಮಾಹಿತಿಯ ಅನುಸಾರ, ಕರ್ನಾಟಕ ರಾಜ್ಯಾದ್ಯಂತ ಜಾನಪದ ಕಲೆಗಳ ಕ್ಷೇತ್ರಕಾರ್ಯ, ದಾಖಲೀಕರಣ, ವಸ್ತುಸಂಗ್ರಹ, ಧ್ವನಿಮುದ್ರಣ, ತರಬೇತಿ, ಜಾನಪದ ಕಲಾವಿದರಿಗೆ ಮಾನ–ಸನ್ಮಾನ ಪ್ರಶಸ್ತಿ ಪ್ರಧಾನ ಸೇರಿದಂತೆ ಹಲವು ಪ್ರಮುಖ ಚಟುವಟಿಕೆಗಳನ್ನು ಪರಿಷತ್ತು ನಡೆಸುತ್ತಿದೆ. ಜಾನಪದ ಪರಂಪರೆಯ ಸಂರಕ್ಷಣೆ ಹಾಗೂ ಪ್ರಸಾರಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ಚಟುವಟಿಕೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಈ ನೇಮಕ ಮಾಡಲಾಗಿದೆ.

ಕಲ್ಬುರ್ಗಿ ಜಿಲ್ಲಾ ಅಧ್ಯಕ್ಷರ ಶಿಫಾರಸಿನ ಮೇರೆಗೆ ಮಾಡಲಾದ ಈ ನೇಮಕಾತಿ ಇಂದಿನಿಂದ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ. ನೇಮಕಗೊಂಡ ಅಧ್ಯಕ್ಷರು 15 ದಿನಗಳೊಳಗಾಗಿ ತಾಲ್ಲೂಕು ಸಮಿತಿಯನ್ನು ರಚಿಸಿ, ಅದರ ಪಟ್ಟಿಯನ್ನು ಜಿಲ್ಲಾಧ್ಯಕ್ಷರ ಮೂಲಕ ರಾಜ್ಯ ಕಛೇರಿಗೆ ಅನುಮೋದನೆಗೆ ಕಳುಹಿಸಲು ನಿರ್ದೇಶಿಸಲಾಗಿದೆ.

ಈ ನೇಮಕದ ಮೂಲಕ ತಾಲ್ಲೂಕು ಮಟ್ಟದಲ್ಲಿ ಜಾನಪದ ಕಲೆಗಳ ಸಂರಕ್ಷಣೆ, ಪ್ರೋತ್ಸಾಹ ಮತ್ತು ಜಾನಪದ ಕಲಾವಿದರ ಚಟುವಟಿಕೆಗಳಿಗೆ ಹೊಸ ಚೈತನ್ಯ ಸಿಗಲಿದೆ ಎಂದು ಪರಿಷತ್ ವಿಶ್ವಾಸ ವ್ಯಕ್ತಪಡಿಸಿದೆ ಎಂದು ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ.