ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಶಕ್ತಿ ರಂಗಭೂಮಿಗಿದೆ: ಶಿವ ಅಷ್ಠಗಿ

ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಶಕ್ತಿ ರಂಗಭೂಮಿಗಿದೆ: ಶಿವ ಅಷ್ಠಗಿ

ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಶಕ್ತಿ ರಂಗಭೂಮಿಗಿದೆ: ಶಿವ ಅಷ್ಠಗಿ

ರಂಗಭೂಮಿ ನಾಟಕಗಳು ಕೇವಲ ಮನೋರಂಜನೆಯ ವೇದಿಕೆಗಳಲ್ಲ, ಅವು ಸಾಹಿತ್ಯವನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಬಹುದಾದ ಮತ್ತು ಪರಿಣಾಮಕಾರಿಯಾಗಿ ಪ್ರಭಾವ ಬೀರುವ ಪ್ರಮುಖ ವೇದಿಕೆಗಳಾಗಿವೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ, ಯುವ ಮುಖಂಡ ಶಿವ ಅಷ್ಠಗಿ ಹೇಳಿದರು.

ಅವರು ಕಲಬುರಗಿ ತಾಲ್ಲೂಕಿನ ಬಬಲಾದ ಎಸ್ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ೬೧ನೇ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಆಯೋಜಿಸಿದ್ದ ಸುಂದರ ಸಾಮಾಜಿಕ ನಾಟಕ ಒಡಹುಟ್ಟಿದವರು ಉದ್ಘಾಟಿಸಿ ಮಾತನಾಡುತ್ತಿದ್ದರು.

ಆಧುನಿಕ ಕಾಲದಲ್ಲಿ ಮೊಬೈಲ್ ಟಿವಿಗಳ ಅತಿಯಾದ ಪ್ರಭಾವದಿಂದಾಗಿ ರಂಗಭೂಮಿ ವೇದಿಕೆಗಳು ಕ್ಷೀಣಿಸುತ್ತಿವೆ ಆದರೆ ಪುರಾತನ ಕಾಲದಿಂದಲೂ ಸಾಹಿತ್ಯವನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುತ್ತಿದ್ದ ಶ್ರೇಯಸ್ಸು ರಂಗಭೂಮಿಯದಾಗಿತ್ತು ಎಂದರು.

ಎಲೆಮರೆ ಕಾಯಿಯಂತೆ ಇರುವ ರಂಗಭೂಮಿ ಪ್ರತಿಭೆಗಳಿಗೆ ಬೆಳಕು ನೀಡುವ ನಿಟ್ಟಿನಲ್ಲಿ ಇಂತಹ ವೇದಿಕೆಗಳು ಸಹಕಾರಿಯಾಗಿದೆ. ಪ್ರಸಕ್ತ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯತ್ತ ಒಲವು ತೋರುವ ಮಂದಿ ಹೆಚ್ಚಾಗುತ್ತಿದ್ದಾರೆ. ಅಂತಹ ಮಂದಿಗೆ ನಾಡು, ನುಡಿ, ಸಂಸ್ಕೃತಿ ಹಾಗೂ ಪೌರಾಣಿಕ ನಾಟಕಗಳ ಬಗ್ಗೆ ಒಲವು ಬೆಳೆಸಬೇಕಾದ ಅವಶ್ಯಕತೆ ಇದೆ ಎಂದರು.

ಶ್ರೀಮಠದ ಷ. ಬ್ರ. ಶ್ರೀ ಶಿವಮೂರ್ತಿ ಶಿವಾಚಾರ್ಯರು ಸಾನಿಧ್ಯ ವಹಿಸಿ ಮಾತನಾಡಿ ಧರ್ಮದ ಮಾರ್ಗದಲ್ಲಿ ನಡೆದಾಗ ಮಾನವ ಕಲ್ಯಾಣವಾಗುತ್ತದೆ. ಇಂದು ಮನುಷ್ಯರ ನಡುವಿನ ಸಂಬಂಧ ತೆಳುವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಮಠಗಳು ಮನುಷ್ಯರ ನಡುವಿನ ಸಾಮರಸ್ಯ, ಬಾಂಧವ್ಯವನ್ನು ಬೆಳೆಸುವಂತಹ ಮಹತ್ತರವಾದ ಕಾರ್ಯವನ್ನು ನಡೆಸುತ್ತಿದೆ. ಈ ಭಾಗದಲ್ಲಿ ಜನಸಾಮಾನ್ಯರ ಕಲ್ಯಾಣಕ್ಕಾಗಿ ಲಿಂಗೈಕ್ಯ ಸಿದ್ದಲಿಂಗ ಶ್ರೀಗಳು ಸಾಕಷ್ಟು ಜನಪರ ಕೆಲಸವನ್ನು ಮಾಡಿದ್ದರು, ಅವರ ಪರಂಪರೆಯನ್ನು ಮತ್ತಷ್ಟು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದುವರೆಸಿಕೊಂಡು ಹೋಗಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಉದ್ಯಮಿ ಮಂಜುನಾಥ ಕಾಳೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಪಟ್ಟಣ ಗ್ರಾ.ಪಂ ಅಧ್ಯಕ್ಷ ಅರುಣಕುಮಾರ್ ಓಗೆ, ತಾ.ಪಂ ಮಾಜಿ ಸದಸ್ಯ ಮಡಿವಾಳಪ್ಪ ಮಡಿವಾಳ, ಮುಖಂಡರಾದ ರೂತನ್ ಪಾಟೀಲ್, ಬಸವರಾಜ್ ಮಂಗಲಗಿ, ಬಸವರಾಜ್ ವಾಲಿ, ಮಹಾದೇವ ಮೋಘಾ, ಲಿಂಗರಾಜ ಧೂಳಗೊಂಡ, ಶಿವಲಿಂಗ ಪಾಟೀಲ್, ಶ್ರವಣಕುಮಾರ ಪರಸ್ತಿ, ಸಲೀಂ ಶಾಹ, ಪಂಡಿತ ನಡಗೇರಿ, 

ಗ್ರಾಮ ಪಂಚಾಯತಿ ಸದಸ್ಯರಾದ ಚಂದ್ರಕಾಂತ ವಾಲಿ, ಅರವಿಂದ ಪೋಲಿಸ್ ಪಾಟೀಲ್, ರಾಘವೇಂದ್ರ ಕಾಳೆ, ಬಿರಣ್ಣ ಆಂದೇಲಿ, ಗ್ರಾಮದ ಮುಖಂಡರಾದ ಬಸವರಾಜ್ ವಾಲಿ, ಶಾಂತಕುಮಾರ್ ಪೋಲಿಸ್ ಪಾಟೀಲ್, ರಾಮಚಂದ್ರಪ್ಪಗೌಡ, ಅಮೃತ ಜ್ಯೋತಿಕರ್, ಶಿವಕುಮಾರ್ ಕಾಳೆ, ನಿಂಗಣ್ಣ ಆಂದೇಲಿ, ರವಿ ಮಾಲಿಪಾಟೀಲ್, ಅಶೋಕ್ ವಾರದ, ಈರಣ್ಣ ಕಾಳೆ, ಶಿವು ಮಾಲಿಪಾಟೀಲ್, ಲಿಂಗರಾಜ ವಾಲಿ, ಸಂತೋಷ ಜಾನೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಬರಗಾಲಸಿದ್ದ ಆಂದೇಲಿ ನಿರೂಪಿಸಿದರು.