ಮಹಿಪಾಲರೆಡ್ಡಿ ಮುನ್ನೂರ ಅವರ ನಟನೆಯ `ತಮಟೆ’ ಸಿನಿಮಾ ನಾಳೆ ತೆರೆಯ ಮೇಲೆ
ಮಹಿಪಾಲರೆಡ್ಡಿ ಮುನ್ನೂರ ಅವರ ನಟನೆಯ `ತಮಟೆ’ ಸಿನಿಮಾ ನಾಳೆ ತೆರೆಯ ಮೇಲೆ
ಕಲಬುರಗಿ, ನ.28 - ಬೆಂಗಳೂರು ನಗರದ ಹಿರಿಯ ಚಿತ್ರನಟ ಮದನ್ ಪಟೇಲ್ ಅವರು ನಾಯಕ ನಟರಾಗಿರುವ ಕಾದಂಬರಿ ಆಧಾರಿತ `ತಮಟೆ’ ಸಿನಿಮಾ ನವೆಂಬರ್ 29 ರಂದು ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಪ್ರಖ್ಯಾತ ಸಿನಿಮಾ ನಾಯಕ ನಟ ಮಯೂರ್ ಪಟೇಲ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾವನ್ನು ವಂದನಾ ಎಂ. ನಿರ್ಮಾಣ ಮಾಡಿದ್ದು, ಸ್ವತಃ ಮದನ್ ಪಟೇಲ್ ಅವರೇ ಸಂಗೀತ ನಿರ್ದೇಶನ ಮಾಡಿದ್ದಾರೆ.
ಮೀಡಿಯಾ ಇಂಟರನ್ಯಾಷನಲ್ ಅರ್ಪಿಸುವ ಮತ್ತು ಶ್ರೀ ರೇಣುಕಾ ಯಲ್ಲಮ್ಮ ದೇವಿ ಕ್ರಿಯೇಷನ್ ರವರ `ತಮಟೆ’ ಸಿನಿಮಾವು ರಾಜ್ಯದ ಎಲ್ಲ ಜಿಲ್ಲೆಗಳ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆ ಆಗಲಿದೆ.
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಸಾಹಿತಿ, ಪತ್ರಕರ್ತ ಹಾಗೂ ರಂಗಭೂಮಿ ನಟ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮಟೆ ಸಿನಿಮಾದಲ್ಲಿ ನಟಿಸಿದ್ದಾರೆ. ಎಂಎಲ್‌ಎ ಅವರ ಅಣ್ಣನ ಪಾತ್ರದಲ್ಲಿ ಅಭಿನಯಿಸಿದ್ದು, ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದಾರೆ.
ಮದನ್ ಪಟೇಲ್ ನಾಯಕ ನಟರಾಗಿ ನಟಿಸಿದ್ದು, ವಾಣಿಶ್ರೀ, ವಿನಯಾ ಪ್ರಸಾದ್, ರಮೇಶ ಭಟ್, ಸುನಂದಾ ಶ್ರೀ ಗುಬ್ಬಿ, ಮಹಿಪಾಲರೆಡ್ಡಿ ಮುನ್ನೂರ್, ರಮೇಶ ಪಂಡಿತ್ ಸೇರಿದಂತೆ ಅನೇಕರು ತಾರಾಗಣದಲ್ಲಿದ್ದಾರೆ.
ಕಳೆದ ವಾರ ಬಿಡುಗಡೆಯಾದ ಡಾ.ಶಿವರಾಜಕುಮಾರ ಅಭಿನಯದ `ಭೈರತಿ ರಣಗಲ್’ ಸಿನಿಮಾದಲ್ಲಿ ನಟಿಸಿದ್ದರು. ಈ ವಾರ `ತಮಟೆ’ ಸಿನಿಮಾದಲ್ಲೂ ಕೂಡ ಅಭಿನಯಿಸಿದ್ದು, ಇದರಲ್ಲಿ ದೊಡ್ಡ ಪಾತ್ರವಿದೆ. ಇದೂವರೆಗೆ ಸುಮಾರು ಎಂಟು ಸಿನಿಮಾಗಳಲ್ಲಿ ಮಹಿಪಾಲರೆಡ್ಡಿ ನಟಿಸಿದ್ದು, ಕಲಬುರಗಿ ವಿಭಾಗದಿಂದ ಪತ್ರಕರ್ತ-ಸಾಹಿತಿಯೊಬ್ಬರು ಸಿನಿಮಾ ಕ್ಷೇತ್ರದಲ್ಲಿಯೂ ಸಹ ನಟಿಸುತ್ತಿರುವುದು ಹೆಮ್ಮೆಯ ಸಂಗತಿ. ಅವರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.