20 ರಂದು ಕಲಬುರ್ಗಿಯಲ್ಲಿ ದಾಸ ವೈಭವ
20 ರಂದು ಕಲಬುರ್ಗಿಯಲ್ಲಿ ದಾಸ ವೈಭವ
ಕಲಬುರಗಿ : ಕಲಬುರಗಿ,ದಾಸ ಸಾಹಿತ್ಯ, ಸಾಂಸ್ಕೃತಿಕ ಪ್ರತಿಷ್ಠಾನದ ಅಡಿಯಲ್ಲಿ ಭೀಮಸೇನರಾವ್ ಕುಲಕರ್ಣಿ, ತಲೇಖಾನ್ ಸ್ಮರಣಾರ್ಥ ದತ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. 'ದಾಸ ವೈಭವ'ವನ್ನು ಅ.20 ರಂದು ಸಾಯಂಕಾಲ 5.30 ಕ್ಕೆ ಕಲಬುರಗಿಯ ಕರುಣೇಶ್ವರ ನಗರದ ಜೈ ವೀರ ಹನುಮಾನ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ನಾರಾಯಣ ಕುಲಕರ್ಣಿ ತಿಳಿಸಿದ್ದಾರೆ.
ನೂತನ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷರಾದ ಗೌತಮ ಆರ್.ಜಹಗೀರದಾರ ಉದ್ಘಾಟಿಸಲಿದ್ದಾರೆ. ಆರ್.ಜೆ. ಪಿಯು ಕಾಲೇಜಿನ ಪ್ರಾಚಾರ್ಯ ಪ್ರಹ್ಲಾದ ಬುರ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು, ಪ್ರತಿಷ್ಠಾನದ ಅಧ್ಯಕ್ಷ ಶ್ರೀನಿವಾಸ ಸಿರನೂರಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಚಂದ್ರಕಲಾ ಬಿದರಿ,
ಸಿದ್ದರಾಮ ಹೊನ್ಕಲ್ ಕಲಬುರಗಿ ,ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ, ಲೇಖಕರಾದ ಮಹಿಪಾಲರಡ್ಡಿ ಮುನ್ನೂರ,ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯ ಬಿ.ಎಚ್.ನಿರಗುಡಿ , ಸುರೇಶ ಜಾಧವ ಅವರನ್ನು ಸನ್ಮಾನಿಸಲಾಗುವುದು, ಸಂಗೀತಗಾರ ಮಹೇಶಕುಮಾರ ಈ.ಬಡಿಗೇರ ಅವರಿಂದ 'ದಾಸವಾಣಿ' ಮತ್ತು ಶುಭಾಂಗಿಯವರ ಓಂಕಾರ ನೃತ್ಯ ಸಾಧನಾ ತಂಡದ ಕಲಾವಿದರಿಂದ 'ನೃತ್ಯ ವೈಭವ', ಸುನಂದಾ ಸಾಲವಾಡಗಿ ಅವರ ಶಾರದಾ ಸಂಗೀತ ವಿದ್ಯಾಲಯದ ಸಂಗೀತ ಕಲಾವಿದರು ದಾಸರ ಹಾಡುಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ದತ್ತಿದಾನಿ ಸ್ವಾಮಿರಾವ ಕುಲಕರ್ಣಿ ಉಪಸ್ಥಿತರಿರುವರು ಎಂದು ಹೇಳಿದರು.