ನಾಳೆ ಶ್ರೀಶೈಲಂನಲ್ಲಿ ಸಮುಚ್ಛಯ ಹಾಗೂ ಬಯಲು ಗ್ರಂಥಾಲಯ ಲೋಕಾರ್ಪಣೆ:ಜಗದ್ಗುರು ಡಾ ಶ್ರೀ ಶ್ರೀ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ

ನಾಳೆ ಶ್ರೀಶೈಲಂನಲ್ಲಿ ಸಮುಚ್ಛಯ ಹಾಗೂ ಬಯಲು ಗ್ರಂಥಾಲಯ ಲೋಕಾರ್ಪಣೆ : ಡಾ ಸಾರಂಗಧರ ದೇಶಿಕೇಂದ್ರ ಶ್ರೀ
: ಕಲಬುರಗಿ: ೩೧ನೇ ಜುಲೈ, ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಶ್ರೀಶೈಲಂನ ಜಗದ್ಗುರು ಸಾರಂಗಮಠದಲ್ಲಿ ಆ. ೧ರಂದು ಮುಂಜಾನೆ ೧೦ ಗಂಟೆಗೆ ಗುರುವಂದನೆ, ವಸತಿ ಸಮುಚ್ಛಯ ಹಾಗೂ ಬಯಲು ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀಶೈಲಂ ಹಾಗೂ ಸುಲಫಲ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಜಗದ್ಗುರು ಡಾ ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ತಿಳಿಸಿದ್ದಾರೆ.
ನಿಡುಮಾಮಿಡಿ ಜಗದ್ಗುರು ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಮಹಾಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಲಾಗುವುದು. ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು, ಜಗದ್ಗುರು ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಸಿದ್ಧಮಲ್ಲ ಶಿವಾಚಾರ್ಯ, ಶಿವಾನಂದ ಮಹಾಸ್ವಾಮೀಜಿ, ಸಿದ್ಧಲಿಂಗ ಮಹಾಸ್ವಾಮೀಜಿ, ಮಹಾಂತ ಮಹಾಸ್ವಾಮೀಜಿ, ಸೋಮಶೇಖರ ಶಿವಾಚಾರ್ಯರು, ಅಭಿನವ ಬಸವಲಿಂಗ ಮಹಾಸ್ವಾಮೀಜಿ, ಸಿದ್ಧಲಿಂಗ ಶಿವಾಚಾರ್ಯರು ಪಾಲ್ಗೊಳ್ಳಲಿದ್ದಾರೆ. ಮಾಜಿ ಸಚಿವ ರಾಜಶೇಖರ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ಎಚ್‌ಕೆಇ ನಿರ್ದೇಶಕ ಅರುಣಕುಮಾರ ಎಂ.ವೈ.ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೇಂಗಟಿ, ಉದ್ಯಮಿ ಎಸ್.ವೈ.ಪಾಟೀಲ್ ಸೇರಿದಂತೆ ಅನೇಕರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಮಧ್ಯಾಹ್ನ ೧೨ ಗಂಟೆಗೆ ದೇವಿಂದ್ರಪ್ಪಗೌಡ ಗೌಡಗೇರ ವಸತಿ ಸಮುಚ್ಛಯ ಹಾಗೂ ಬಯಲು ಗ್ರಂಥಾಲಯ ಉದ್ಘಾಟನಾ ಸಮಾರಂಭ ನಡೆಯಲಿದೆ.
ಜಗದ್ಗುರು ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಜಗದ್ಗುರು ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ.
ಸಚಿವ ಶರಣಬಸಪ್ಪ ದರ್ಶನಾಪುರ ವಸತಿ ಸಮುಚ್ಛಯ ಉದ್ಘಾಟನೆ ಮಾಡಲಿದ್ದು ,ಕೆಕೆಆರ್‌ಡಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯಸಿಂಗ್ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಬಯಲು ಗ್ರಂಥಾಲಯ ಉದ್ಘಾಟನೆ ಮಾಡಲಿದ್ದಾರೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ಪ್ರಥಮ ದರ್ಜೆ ಗುತ್ತಿಗೆದಾರ ದೇವೀಂದ್ರಪ್ಪಗೌಡ ಗೌಡಗೇರ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುವುದು ಎಂದು ಜಗದ್ಗುರು ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.