ಎನ್ ಪಿ ಎಸ್ ಪದವಿ ಪೂರ್ವ ಕಾಲೇಜಿಗೆ ಪ್ರತಿಶತ 98.12 ಫಲಿತಾಂಶ, ವಿಧ್ಯಾರ್ಥಿಗಳ ಸಾಧನೆಗೆ ಅಧ್ಯಕ್ಷ ಶಶೀಲ್ ಜಿ ನಮೋಶಿ ಹರ್ಷ

ಕಲಬುರ್ಗಿ:2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ.

 ನ್ಯಾಷನಲ್ ಪಬ್ಲಿಕ್ ವಿಜ್ಞಾನ ಪದವಿಪೂರ್ವ ಕಾಲೇಜ ಮತ್ತು ಧಾರವಾಡದ ಹಂಚಿನಮನಿ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿದೆ. 

2024-25ನೇ ಸಾಲಿನ ದ್ವಿತೀಯ ಪಿಯುಸಿ ಪ್ರಥಮ ಪರೀಕ್ಷೆಯಲ್ಲಿ ಕಾಲೇಜು ಉತ್ತಮ ಫಲಿತಾಂಶ ಗಳಿಸಿದ್ದು ಒಟ್ಟು 319 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 76 ವಿದ್ಯಾರ್ಥಿಗಳು (ಡಿಸ್ಟ್ರಿಂಕ್ಷನ್,) ಪ್ರಪ್ರಥಮ ಶ್ರೇಣಿಯಲ್ಲಿ, 217 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ . 20 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ ಒಟ್ಟಾರೆ ಕಾಲೇಜಿನ ಫಲಿತಾಂಶ ಒಟ್ಟು ಸರಾಸರಿ ಪ್ರತಿಶತ 98.12 ಆಗಿದೆ

1. ಆದಿತ್ಯ. ಪ್ರಭುಲಿಂಗಯ್ಯ ಹಿರೇಮಠ 577/600 ಪ್ರತಿಶತ 96.16

2. ಶೇಕ್ ಜೋಯಾ 576/600 ಪ್ರತಿಶತ 96

3. ಸಪ್ನಾ ಬಿರಾದರ 572/600 ಪ್ರತಿಶತ 95.3

ವಿದ್ಯಾರ್ಥಿಗಳ ಈ ಸಾಧನೆಗೆ ಹಾಗೂ ಇಂತಹ ಸಾಧನೆಗೆ ಕಾರಣರಾದ ಕಾಲೇಜಿನ ಬೋಧಕ ಸಿಬ್ಬಂದಿಗಳಿಗೆ ಕಾಲೇಜಿನ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ.ಜಿ.ನಮೋಶಿಯವರು ಹರ್ಷ ವ್ಯಕ್ತಪಡಿಸಿದ್ದಾರೆ. ಕಾರ್ಯದರ್ಶಿಗಳಾದ ಸುರೇಶ ಬುಲ್ ಬುಲೆಯವರು ವಿದ್ಯಾರ್ಥಿಗಳ ಈ ಸಾಧನೆಗೆ ಅಭಿನಂದಿಸಿದ್ದಾರೆ. ಇದೇ ರೀತಿ ಕಾಲೇಜಿನ ಆಡಳಿತ ಮಂಡಳಿಯವರು, ಪ್ರಾಚಾರ್ಯರು,ಬೋಧಕ, ಬೋಧಕೇತರ ಸಿಬ್ಬಂದಿಯವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.