ನಿರಾಶ್ರಿತರಿಗೆ ಅನ್ನದಾಸೋಹ: ಶರಣ ಕುಮಾರ ಮೋದಿ ಜನ್ಮದಿನದ ಅಂಗವಾಗಿ ಸೇವಾ ಕಾರ್ಯಕ್ರಮ

ನಿರಾಶ್ರಿತರಿಗೆ ಅನ್ನದಾಸೋಹ: ಶರಣ ಕುಮಾರ ಮೋದಿ ಜನ್ಮದಿನದ ಅಂಗವಾಗಿ ಸೇವಾ ಕಾರ್ಯಕ್ರಮ

ನಿರಾಶ್ರಿತರಿಗೆ ಅನ್ನದಾಸೋಹ: ಶರಣ ಕುಮಾರ ಮೋದಿ ಜನ್ಮದಿನದ ಅಂಗವಾಗಿ ಸೇವಾ ಕಾರ್ಯಕ್ರಮ

ಕಲಬುರಗಿ : ಬಿದ್ದಾಪೂರ ಕಾಲೋನಿಯಲ್ಲಿರುವ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ಇತ್ತೀಚೆಗೆ ಹೃದಯ ಸ್ಪರ್ಶಿ ಸೇವಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈಶ್ವರ ಖಂಡ್ರೆ ಸಾಬ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ದಶವಂತ ಕಣಮಸಕರ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು ಮಾಜಿ ಮೇಯರ್ ಹಾಗೂ ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷರಾದ ಶರಣ ಕುಮಾರ ಮೋದಿ ಅವರ ಜನ್ಮದಿನದ ವಿಶೇಷ ಅಂಗವಾಗಿ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ನಿರಾಶ್ರಿತರಿಗೆ ಅನ್ನದಾಸೋಹ ಮಾಡಲಾಗಿದ್ದು, ಭಾಗವಹಿಸಿದ ಪ್ರತಿಯೊಬ್ಬರು ಮಾನವೀಯತೆ ಮತ್ತು ಸಮಾಜ ಸೇವೆಯ ಮಹತ್ವವನ್ನು ಪುನರುಚ್ಛರಿಸಿದ್ದಾರೆ. 

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ತಾರಫೈಲ, ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಆನಂದ್ ಪಾಟೀಲ, ಮುಖಂಡರಾದ ಸೋಮಶೇಖರ್ ಹಿರೇಮಠ, ಸತೀಶ್ ಸಾವು, ತಾಲೂಕು ಪಂಚಾಯತ್ ಸದಸ್ಯ ಬಲರಾಮ್ ಪೂಜಾರಿ, ಬಾಬು ಬೀಳಗಿ, ಶರಣು ನಾಯ್ಕೋಡಿ, ಮಂಜು, ಚಂದಪ್ಪ ಗಾಯಕವಾಡ, ಸಾಯಿಬಣ್ಣ, ಹಾಗೂ ಕೇಂದ್ರದ ಸಿಬ್ಬಂದಿಗಳಾದ ರಾಕೇಶ ಕಾಂಬಳೆ ಮತ್ತು ವೀರೇಶ ಶಹಾಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ನಾಯಕರು, ಶರಣ ಕುಮಾರ ಮೋದಿ ಅವರ ಸಾಮಾಜಿಕ ಬದ್ಧತೆ ಮತ್ತು ಸಮಾಜಮುಖಿ ಚಟುವಟಿಕೆಗಳನ್ನು ಶ್ಲಾಘಿಸಿದರು. ಕಾರ್ಯಕ್ರಮವು ಶ್ರದ್ಧಾ ಮತ್ತು ಸೇವಾಭಾವನೆಗೆ ಸಾಕ್ಷಿಯಾಗಿ, ಇತರರಿಗೂ ಪ್ರೇರಣೆಯಾಗುವಂತಿದೆ.