ಮಾದನ ಹಿಪ್ಪರಗಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಅನುವಾದ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ಮತ್ತು ಕವಿಗೋಷ್ಠಿ ಜರಗಿತು

ಮಾದನ ಹಿಪ್ಪರಗಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಅನುವಾದ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ಮತ್ತು ಕವಿಗೋಷ್ಠಿ  ಜರಗಿತು

ಮಾದನ ಹಿಪ್ಪರಗಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಅನುವಾದ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ಮತ್ತು ಕವಿಗೋಷ್ಠಿ ಜರಗಿತು 

ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಿಗೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಇಂದು ಚಕೋರ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ಅನುವಾದ ಸಾಹಿತ್ಯ” ಕುರಿತು ವಿಶೇಷ ಉಪನ್ಯಾಸ ಹಾಗೂ ಕವಿಗೋಷ್ಠಿಯನ್ನು ಜರುಗಿಸಲಾಯಿತು. 

ಈ ಕಾರ್ಯಕ್ರಮದಲ್ಲಿ ಅನುವಾದ ಸಾಹಿತ್ಯದ ಮಹತ್ವದ ಕುರಿತು ಆಶಯ ನುಡಿ ಹಿರಿಯ ಲೇಖಕ ಹಾಗೂ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಸಿದ್ಧರಾಮ ಹೊನ್ಕಲ್ ಮಾತನಾಡಿ ನಂತರ ಅವರು ಒಂದು ಪ್ರೀತಿ ಪ್ರೇಮದ ಮಧುರ ಗಜಲ್ ಹಾಗೂ ಒಂದು ಸಮಾಜಮುಖಿ ಆಶಯದ ಗಜಲ್ ವಾಚಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿ, ಲೇಖಕ, ವಿಮರ್ಶಕ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಬಸವ ಪಾಟೀಲ ಜಾವಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ರಾಜಣ್ಣ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕ ಡಾ. ಸುಜಾತ ಸೂರ್ಯಕಾಂತ ಅವರು ಭಾಗವಹಿಸಿದ್ದರು.

ಕಾವ್ಯ ಗೋಷ್ಠಿಯಲ್ಲಿ ಸುಮಾರು ಹದಿನೈದು ವಿದ್ಯಾರ್ಥಿಗಳು ತಮ್ಮ ಕವಿತೆಗಳನ್ನು ಓದಿದ್ದು, ಅವರ ಪ್ರತಿಭೆಗೆ ಸಭೆಯಿಂದ ಭಾರಿ ಕವನಪ್ರಶಂಸೆ ಲಭಿಸಿತು. ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. 

ಸಾಹಿತ್ಯ ಪ್ರೀತಿಗೆ ಸಾಕ್ಷಿಯಾದ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು ಎಂಬ ಸಂತೋಷವನ್ನು ಆಯೋಜಕರು ವ್ಯಕ್ತಪಡಿಸಿದರು.