ಸಾಹಿತಿ ಡಾ. ಚಿ.ಸಿ. ನಿಂಗಣ್ಣ ಅವರಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯಿಂದ ಸನ್ಮಾನ
ಸಾಹಿತಿ ಡಾ. ಚಿ.ಸಿ. ನಿಂಗಣ್ಣ ಅವರಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯಿಂದ ಸನ್ಮಾನ
ಕಲಬುರಗಿ, ಅ.8 : ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ (ಮಹಾಸಂಸ್ಥಾನ) ಕಲಬುರಗಿ ಯ ಚೇರ್ ಪರ್ಸನ್ ಪೂಜ್ಯ ಡಾ. ದಾಕ್ಷಾಯಿಣಿ ಎಸ್. ಅವ್ವಾಜಿ ಅವರ ಸಾನ್ನಿಧ್ಯದಲ್ಲಿ ಪ್ರಸಿದ್ಧ ಸಾಹಿತಿ ಡಾ. ಚಿ.ಸಿ. ನಿಂಗಣ್ಣ ಅವರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಡಾ. ನಿಂಗಣ್ಣ ಅವರು ರಚಿಸಿದ "ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ" ಕೃತಿಯನ್ನು ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಅವರಿಗೆ ಅರ್ಪಿಸಿ ಗೌರವಿಸಿದರು. ಪ್ರತಿಯಾಗಿ ಸಂಸ್ಥಾನದ ವತಿಯಿಂದ ಪೂಜ್ಯರು ಡಾ. ನಿಂಗಣ್ಣ ಅವರನ್ನು ಅಭಿನಂದಿಸಿ ಸನ್ಮಾನಿಸಿ, “ನಾಡಿನ ಶ್ರೇಷ್ಠ ಸಾಹಿತಿಯಾಗಿ ಅವರು ಇನ್ನಷ್ಟು ಶ್ರೇಷ್ಠ ಕೃತಿಗಳನ್ನು ನೀಡಲಿ” ಎಂದು ಆಶೀರ್ವಾದ ಮಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ ಅಣ್ಣಾ, ವಿ.ವಿ. ಕುಲಪತಿ ಡಾ. ಅನಿಲಕುಮಾರ್ ಬಿಡವೆ, ಕುಲಸಚಿವ ಪ್ರೊ. ಡೊಳ್ಳೆಗೌಡ, ಡೀನ್ ಡಾ. ಲಕ್ಷ್ಮೀ ಮಾಕಾ ಪಾಟೀಲ, ಬಿ.ಎಚ್. ನಿರಗುಡಿ, ಶಿವಾನಂದ ಖಜೂರಿ, ದೇವಿದಾಸ್ ಪವಾರ್, ವಿಜಯಕುಮಾರ್ ರೋಣದ, ಶಂಕರಗೌಡ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ. ನಿಂಗಣ್ಣ ಅವರು ಸ್ವತಃ ರಚಿಸಿದ "ಕನ್ನಡ ಸಾಹಿತ್ಯ ಸಾಂಸ್ಕೃತಿ ಕೋಶ" ಹಾಗೂ "ಕಲಬುರಗಿ ಜಿಲ್ಲೆಯ ಜಾತ್ರೆಗಳು" ಕೃತಿಗಳನ್ನು ಕೂಡ ನೀಡಿದರು.
ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ಡಾ. ನಿಂಗಣ್ಣ ಅವರ ಸಾಹಿತ್ಯ ಸೇವೆಯನ್ನು ಶ್ಲಾಘಿಸಿ, ಅವರ ಸಾಧನೆಗೆ ಸಂತೋಷ ವ್ಯಕ್ತಪಡಿಸಿದರು.