ಸಾಮರಸ್ಯದ ಸಂಕೇತ ಇಫ್ತಾರ ಕೂಟ- ಡಾ.ಗವಿಸಿದ್ಧಪ್ಪ

ಸಾಮರಸ್ಯದ ಸಂಕೇತ ಇಫ್ತಾರ ಕೂಟ- ಡಾ.ಗವಿಸಿದ್ಧಪ್ಪ

ಉರಿಲಿಂಗಪೆದ್ದಿ ಶಾಖಾ ಮಠದಲ್ಲಿ ಇಫ್ತಾರ ಕೂಟ 

ಸಾಮರಸ್ಯದ ಸಂಕೇತ ಇಫ್ತಾರ ಕೂಟ- ಡಾ.ಗವಿಸಿದ್ಧಪ್ಪ

ಬಸವಕಲ್ಯಾಣ: ಪ್ರತಿಯೊಂದು ಧರ್ಮಗಳು ಒಳ್ಳೆಯ ವಿಚಾರ ಬೋಧಿಸುತ್ತವೆ.ಇಸ್ಲಾಂ ಧರ್ಮದ ಪ್ರವಾದಿ ಮಹ್ಮದ ಪೈಗಂಬರ್ ಅವರು ಸೌಹಾರ್ದ ಬೆಸೆಯುವ ಕಾರ್ಯ ಮಾಡಿದ್ದಾರೆ.ರಂಜಾನ್ ಒಂದು ತಿಂಗಳು ಶಾಂತಿ ಯ ಪ್ರತೀಕ ಇಫ್ತಾರ ಕೂಟದಿಂದ ಎಲ್ಲರೂ ಒಂದಾಗಿ ಸಹೋದರತೆ,ಸಮಾನತೆ,ಭಾತೃತ್ವ,ಭಾವೈಕ್ಯತೆ,ಸಮಾನತೆ,ಮನುಷ್ಯ ಪ್ರಜ್ಞೆ ಬೆಳೆಸುವ ಸಾರಸ್ಯದ ಸಂಕೇತ ಇಫ್ತಾರ ಕೂಟ ಎಂದು ಹಿರಿಯ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಅಭಿಮತಪಟ್ಟರು.

     ಬೇಲೂರು ಉರಿಲಿಂಗಪೆದ್ದಿ ಮಠದ ಶಾಖಾ ಮಠದಲ್ಲಿ

ಏರ್ಪಡಿಸಿದ ಸಾಮೂಹಿಕ ಇಫ್ತಾರ ಕೂಟ ಮತ್ತು ಸೌಹಾರ್ದ ಪಥಿಕ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ ಇಂತಹ ಕೆಲಸ ಮಠಮಾನ್ಯ ಇತರ ಧರ್ಮೀ ಯರು ಮಾಡಬೇಕು.ಉರಿಲಿಂಗಪೆದ್ದಿ ಮಠದ ಪೂಜ್ಯಶ್ರೀ ಪಂಚಾಕ್ಷರಿ ಸ್ವಾಮಿಗಳು ಜಾತ್ಯಾತೀತವಾಗಿ ಎಲ್ಲರನ್ನೂ ಒಟ್ಟಾಗಿ ತಗೆದುಕೊಂಡು,ಸಾಮಾಜಿಕ, ಧಾರ್ಮಿಕ, ಸಾಹಿತ್ಯಿ ಕ ಸಾಂಸ್ಕೃತಿಕ ವಾಗಿ ಯಗೆದುಕೊಂಡು ಹೋಗುತ್ತಿದ್ದಾರೆ ಇಂತವರಿಗೆ ಬೆಂಬಲ ಸಹಕಾರ ಜನರು,ಸಮುದಾಯ, ಸರಕಾರ ನೀಡಬೇಕಾಗಿದೆ ಎಂದರು.

ಪೂಜ್ಯಶ್ರೀ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ ನಮ್ಮ‌ಮಠ ಗರೀಬರ ಮಠ ನಮ್ಮ ಕೈಲಾದ ಕೆಲಸ ಮಾಡಿದ್ದೇವರ.ಎಲ್ಲ ರ ಜೊತೆ ಸೇರಿ ಒಂದಾದರೆ ಒಗ್ಗಟ್ಟು ಬರುತ್ತದೆ.ಬಸವಾದಿ ಶರಣರು,ಉರಿಲಿಂಗಪೆದ್ದಿ ಕೂಡಾ ಇದೇ ಕಾರ್ಯ ಮಾಡುತ್ತಾ ಬಂದವರು.ಕೋಮು ದ್ವೇಷ ಬೆಳೆಸದೇ ಕೋಮು ಸಾಮರಸ್ಯ ಬೆಳೆಸುಬ ಉದ್ದೇಶವಾಗಿದೆ ಎಂದರು

ಇಸ್ಲಾಂ ಧರ್ಮ ಇವತ್ತು ಬಸವಣ್ಣ ಮೊದಲಾದ ಶರಣರ,ಸಂತ,ಸೂಫಿ ಗಳು ಒಂದುಗೂಡಿಸಿದ ತತ್ವ, ಸಿದ್ಧಾಂತ ಅಳವಡಿಸಿಕೊಂಡು ಬಂದರೆ ಮಾನವೀಯತೆ ಬೆಳೆಯಲು ಸಾಧ್ಯ ಮನುಷ್ಯ ಹುಟ್ಟಿದ ಮೇಲೆ ಸಾವು ಖಚಿತ ಆ ಬದುಕಿನ ಅವಧಿಯಲ್ಲಿ ಸೌಹಾರ್ದತೆ ಬೆಸೆಯುವುದು ಅಗ್ಯತ್ಯವೆಂದು ಅಬ್ದಲ್ ಖಾದರ ಮಾತನಾಡಿದರು.

ಇದೇ ಸಂದರ್ಭದಲ್ಲಿ ಪಿಎಸ್ಐ ಚಂದ್ರಕಾತ ನಾರಾಯಣಪುರೆ,ಹಿಂದುಳಿದ ವರ್ಗಗಳ ಇಲಾಖೆ ಭಾಲ್ಕಿ ಕಲ್ಯಾಣಾಧಿಕಾರಿ ರವೀಂದ್ರ ಮೇತ್ರೆ, ನೊಬೆಲ್ ಪಬ್ಲಿಕ್ ಸ್ಕೂಲ್ ಸಂಸ್ಥಾಪಕ ಅಬ್ದುಲ್ ಖಲೀಲ ಗೊಬರೆ ಅವರಿಗೆ ಸೌಹಾರ್ದ ಪಥಿಕ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಪ್ರಶಸ್ತಿ ಪುರಸ್ಕೃತರಾದ ಪಿಎಸ್ಐ ಚಂದ್ರಕಾಂತ ನಾಯಾರಣಪುರ ಮಾತನಾಡಿ ಇಂತಹ ಕೂಟದಿಂದ ಸಾಮರಸ್ಯ ತರಲು ಸಾಧ್ಯ. ನಮ್ಮ ಸೇವೆ ಗುರುತಿಸಿದ್ದಕ್ಕೆ ಧನ್ಯವಾದ ಅರ್ಪಿಸಿದರು.

ವಿಜಯಸಿಂಗ್ ಮಾಜಿ ವಿಧಾನ ಪರಿಷತ್ ಸದಸ್ಯರು ಬೀದರ, ಅಕ್ಷರ ದಾಸೋಹದ ಸಂಜುಕುಮಾರ್ ಕಾಂಗೆ,

ಸಂಜೀವ ಜಾದವ, ನಾಗನಾಥ ಚಾಮ್ಮಲ್ಲೆ,

ಡಾ ಜಭಿಯಾ, ಎಂ,ಡಿ ಮಸ್ತಾಪ, ನೂರ ಸರ್, ಇಮಾಮುದ್ದಿನ,ಡಾ ಬಾಲಕೃಷ್ಣ ರಾಠೋಡ, ಅನ್ನಪೂರ್ಣ ಅಂಬಾರಾಯ ಸಂಗೋಳಕರ, ನಿತ್ಯಾನಂದ ಮಂಠಾಳಕರ್, ಗೌತಮ್ ವಾಗ್ಮರೆ, ಶಿವಕುಮಾರ ಕಾಂಗೆ , ಅಶೋಕ ಗುಪ್ತಾ, ನಾಗಪ್ಪ ನಿಣ್ಣೆ, ಭಿಮಶಾ ವಾಘಮಾರೆ, ದೀಪಕ ಸಿಂಗೆ, ವಿಜಯ ಲಕ್ಷ್ಮಿ ರಾಧು, ಸರಸ್ವತಿ ಗಾಯಕವಾಡ, ಅನುಸಯ್ಯಾ ಮಂಠಾಳಕರ್,ಸಿದ್ದು ಕೋಣೆಗಳು,ಈಶ್ವರ ತಡೋಳಾ,ಕಲ್ಲಪ್ಪ ಬೇಲೂರು ಶ್ರೀಪತಿ ಸಖರಾಮ,ಮೊದಲಾದವರಿದ್ದರು.

ಮಹಾಲಿಂಗ ದೇವರು ಸ್ವಾಗತಿಸಿದರು. ಮಹ್ಮದ ಮುಸ್ತಾನ ನಿರೂಪಿಸಿದರು..ಸಂಜುಕುಮಾರ ಖೇಲೆ ವಕೀಲರು ವಂದಿಸಿದರು.