ಜಿಲ್ಲಾ ಯುವ ಸಾಹಿತ್ಯ ಸಮ್ಮೇಳನಕ್ಕೆ ಕಾರ್ಯಧ್ಯಕ್ಷರಾಗಿ ಮಲ್ಲಿನಾಥ್ ನಾಗನಹಳ್ಳಿ ನೇಮಕ

ಜಿಲ್ಲಾ ಯುವ ಸಾಹಿತ್ಯ ಸಮ್ಮೇಳನಕ್ಕೆ ಕಾರ್ಯಧ್ಯಕ್ಷರಾಗಿ ಮಲ್ಲಿನಾಥ್ ನಾಗನಹಳ್ಳಿ ನೇಮಕ
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಆಶ್ರಯದಲ್ಲಿ ಜುಲೈ 27ರಂದು ನಡೆಯಲಿರುವ ಜಿಲ್ಲಾ 2ನೇ ಯುವ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಧ್ಯಕ್ಷರಾಗಿ ಮಲ್ಲಿನಾಥ್ ನಾಗನಹಳ್ಳಿ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅವರು ತಿಳಿಸಿದ್ದಾರೆ.
ಮಲ್ಲಿನಾಥ್ ನಾಗನಹಳ್ಳಿ ಅವರು ಕೋಟನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದು, ಗ್ರಾಮೀಣ ಮಟ್ಟದಲ್ಲಿ ಸಾಂಸ್ಕೃತಿಕ ಹಾಗೂ ಸಹಕಾರ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರವಹಿಸಿಕೊಂಡಿದ್ದಾರೆ. ಅವರ ನೇಮಕದಿಂದ ಸಮ್ಮೇಳನದ ಯಶಸ್ಸಿಗೆ ಉತ್ತಮ ಸಹಕಾರ ಸಿಗಲಿದೆ ಎಂದು ಕಸಾಪ ವಿಶ್ವಾಸ ವ್ಯಕ್ತಪಡಿಸಿದೆ
.