ದಿ.ಗಂಗನಪಳ್ಳಿ ಕಾವ್ಯ ಪ್ರಶಸ್ತಿಗೆ ಡಾ.ಗವಿಸಿದ್ಧಪ್ಪ. ಅಯ್ಕೆu

ದಿ.ಗಂಗನಪಳ್ಳಿ ಕಾವ್ಯ ಪ್ರಶಸ್ತಿಗೆ ಡಾ.ಗವಿಸಿದ್ಧಪ್ಪ. ಅಯ್ಕೆ
ಬೀದರ : ಜಿಲ್ಲೆಯ ಹಿರಿಯ ಸಾಹಿತಿ, ಸಾನೆಟ್ ಕವಿ ದಿ.ಎಂ.ಜಿ.ಗಂಗನಪಳ್ಳಿ ಅವರ ಹೆಸರಲ್ಲಿ ಪ್ರಥಮವಾಗಿ ಕೊಡಲ್ಪಡುವ ಎಂ.ಜಿ.ಗಂಗನಪಳ್ಳಿ ಕಾವ್ಯ ಪ್ರಶಸ್ತಿಗೆ ಕವಿ ಹಿರಿಯ ಸಾಹಿತಿ, ಸೃಜನಶೀಲ ಲೇಖಕರಾದ ಕಲಬುರಗಿಯ ಡಾ.ಗವಿಸಿದ್ಧಪ್ಪ ಎಚ್.ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆಯೆಂದು ಗಂಗನಪಳ್ಳಿ ಪರಿವಾರದ ವಿಶ್ರಾಂತ ಕೃಷಿ ನಿರ್ದೇಶಕ ಜಾಲಿಂದರ್ ಗಂಗನಪಳ್ಳಿ ಮತ್ತು ಅತಿವಾಳೆ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಂಜುಕುಮಾರ ಅತಿವಾಳೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಾ.ಗವಿಸಿದ್ಧಪ್ಪ ಎಚ್. ಪಾಟೀಲ ಅವರು ನೂರಕ್ಕೂ ಹೆಚ್ವು ಕೃತಿಗಳನ್ನು ವಿವಿಧ ಪ್ರಕಾರದಲ್ಲಿ ಪ್ರಕಟಿಸಿದ್ದಾರೆ. ನಲವತ್ತಕ್ಕೂ ಹೆಚ್ಚು ಪ್ರಶಸ್ತಿ ಗೌರವ ಪಡೆದವರು. ಗಂಗನಪಳ್ಳಿ ಅವರನ್ನು ನಾಡಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ. ಅವರ ಜೀವನ ಸಾಧನೆ ಕಾವ್ಯ ಕ್ಷೇತ್ರದಲ್ಲಿ ಕೊಡುಗೆ ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.