ಗುಯಿಲಿನ್ ಬಾರಿ ಸಿಂಡ್ರೋಮ್ (ಜಿಬಿಎಸ್) ರೋಗಿಯನ್ನು ಸಂಪೂರ್ಣ ಗುಣಪಡಿಸಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

ಗುಯಿಲಿನ್ ಬಾರಿ ಸಿಂಡ್ರೋಮ್ (ಜಿಬಿಎಸ್) ರೋಗಿಯನ್ನು ಸಂಪೂರ್ಣ ಗುಣಪಡಿಸಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು
ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಗುಯಿಲಿನ್ ಬಾರಿ ಸಿಂಡ್ರೋಮ್ ಎಂಬ ನರರೋಗಿಗೆ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ರೋಗ ಗುಣಪಡಿಸಿ ಸಾಧನೆ ಮಾಡಿದ್ದಾರೆ.
ಗುಯಿಲಿನ್-ಬಾರ್ರೆ ಸಿಂಡ್ರೋಮ್ ಅನ್ನು ಸಾಮಾನ್ಯವಾಗಿ ಜಿಬಿಎಸ್ ಎಂದು ಕರೆಯಲಾಗುತ್ತದೆ, ಇದು ಬಾಹ್ಯ ನರಮಂಡಲದ ಮೇಲೆ ಪರಿಣಾಮ ಬೀರುವ ಸ್ವಯಂ ನಿರೋಧಕ ಅಸ್ವಸ್ಥತೆಯಾಗಿದೆ. ಇದು ಹಠಾತ್ತನೆ ಪ್ರಕಟವಾಗಬಹುದು ಮತ್ತು ವೇಗವಾಗಿ ಉಲ್ಬಣಗೊಳ್ಳಬಹುದು, ಆರಂಭಿಕ ರೋಗ ಗುರುತಿಸಿ ಮತ್ತು ಅಗತ್ಯ ಚಿಕಿತ್ಸೆಯನ್ನು ನೀಡಿ ಈ ರೋಗ ಗುಣ ಪಡಿಸಬಹುದು. ಸ್ನಾಯು ದೌರ್ಬಲ್ಯ, ಮರಗಟ್ಟುವಿಕೆ, ಮತ್ತು ಪಾರ್ಶ್ವವಾಯು ಕೂಡ ಈ ರೋಗದಿಂದ ಆಗಬಹುದು. ಇದು ಇತ್ತೀಚೆಗೆ ಭಾರತದಲ್ಲಿ ಬಹಳಷ್ಟು ಹರಡುತ್ತಿದೆ ಮಹಾರಾಷ್ಟ್ರದ ಪುಣೆಯ ಸುತ್ತಲೂ 180 ರೋಗಿಗಳನ್ನು ಇತ್ತಿಚೆಗೆ ಪತ್ತೆ ಹಚ್ಚಲಾಗಿದ್ದು ಇದು ಮಾರಣಾಂತಿಕ ಖಾಯಿಲೆ ಆಗಿದೆ. ಇಂತಹ ಮಾರಣಾಂತಿಕ ಖಾಯಿಲೆ ಹೊಂದಿದ್ದ ಪುಣೆ ಮೂಲದ ಸೋಮಶೇಖರ್ ಎಂಬ 63 ವರ್ಷದ ರೋಗಿಯ ನಿರ್ಣಾಯಕ ಹೋರಾಟ ಎದುರಿಸಿ ಕೊನೆಗೆ ಬಸವೇಶ್ವರ ಆಸ್ಪತ್ರೆಯಲ್ಲಿ ದಾಖಲಾದರು ಮೆಕ್ಯಾನಿಕಲ್ ವೆಂಟಿಲೇಟರ್ ಮುಖಾಂತರ ಟ್ರಾಕಿಯೊಸ್ಟೊಮಿ ಮತ್ತು ಆಧಾರವಾಗಿರುವ COPD ಮತ್ತು ವೆಂಟಿಲೇಟರ್-ಸಂಬಂಧಿತ ನ್ಯುಮೋನಿಯಾಕ್ಕೆ ದ್ವಿತೀಯಕ ಎಂಫಿಸೆಮ್ಯಾಟಸ್ ಬುಲ್ಲೆಯಂತಹ ತೊಡಕುಗಳಿಗೆ ಚಿಕಿತ್ಸೆಯ ಅಗತ್ಯವಿರುವದನ್ನು ಪತ್ತೆ ಹಚ್ಚಿದ ವೈದ್ಯರು.
ಒಂದು ತಿಂಗಳ ತೀವ್ರ ನಿಗಾವಹಿಸಿ ಮತ್ತು ಇಮ್ಯುನೊಗ್ಲಾಬ್ಯುಲಿನ್ ಚಿಕಿತ್ಸೆಯ ನೀಡಲಾಯಿತು ನಂತರ, ಅವರ ಸ್ಥಿತಿ ಸ್ಥಿರವಾಯಿತು ಮತ್ತು ಅವರು ಸಂಪೂರ್ಣವಾಗಿ ಚೇತರಿಸಿಕೊಂಡು ಆರೋಗ್ಯವಾಗಿ ಮನೆ ಸೇರಿದರು ಇಂತಹ ಸೂಕ್ಷ್ಮ ರೋಗಕ್ಕೆ ಚಿಕಿತ್ಸೆ ನೀಡಿದ ವೈದ್ಯರ ತಂಡದಲ್ಲಿ ಡಾ. ಬಸವರಾಜ್ ಮಂಗ್ಶೆಟ್ಟಿ, ಡಾ. ನಾಗರಾಜ್ ಕೋಟ್ಲಿ ಮತ್ತು ನರರೋಗ ತಜ್ಞ ಡಾ. ಅವಿನಾಶ್ ಅಲಶೆಟ್ಟಿ ಅವರಿದ್ದರು. ಜೊತೆಗೆ ತೀವ್ರ ನಿಗಾವಹಿಸಿದ ಡಾ. ಸೊಹೈಲ್, ಡಾ. ಸತೀಶ್, ಡಾ ಪ್ರತೀಕ ಮತ್ತು ಎಲ್ಲಾ ಸ್ನಾತಕೋತ್ತರ ಪದವೀಧರರು ಮತ್ತು ಬಸವೇಶ್ವರ ಬೋಧನೆ ಮತ್ತು ಜನರಲ್ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ವೆಂಟಿಲೇಟರ್ ನಿಂದ ಆರೋಗ್ಯವಾಗಿ ಮನೆ ಕಡೆಗೆ ಹೋಗುವಂತಾಯಿತು. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ ನಮೋಶಿ ಹಾಗೂ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ ಹಾಗೂ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಆಸ್ಪತ್ರೆಯ ಸಂಚಾಲಕರಾದ ಡಾ ಕಿರಣ್ ದೇಶಮುಖ್ ಹಾಗೂ ಎಲ್ಲ ಆಡಳಿತ ಮಂಡಳಿ ಸದಸ್ಯರು ವೈದ್ಯಕೀಯ ಅಧೀಕ್ಷಕರಾದ ಡಾ ಆನಂದ ಗಾರಂಪಳ್ಳಿ ಅವರ ಸದಾ ಬೆಂಬಲದೋಂದಿಗೆ ಆಸ್ಪತ್ರೆಯು ಆರೋಗ್ಯ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಡಾ ಸೋಹೈಲ್ ತಿಳಿಸಿದ್ದಾರೆ