ಜೀವನ
ಜೀವನ
ಜೀವನ ಮುದ್ರಿತ ಪುಸ್ತಕವಲ್ಲ
ಕೈಬರಹದ ಲೇಖನ
ಲೋಕದಲ್ಲಿ ಪ್ರತಿಯೊಬ್ಬರ ಬರಹ
ಭಿನ್ನ ಭಿನ್ನ ಭಿನ್ನ .
ಕೆಲವಕ್ಷರಗಳು ಬರೆದವರಿಗೂ
ಓದಲು ಬರುವುದಿಲ್ಲ
ವಾಕ್ಯಗಳಿಗೆ ಪೂರ್ಣ ವಿರಾಮವೇ ?
ಅಲ್ಲಿ ಇರುವುದಿಲ್ಲ .
ನವರಸಗಳಲ್ಲಿ ಶೃಂಗಾರ, ಹಾಸ್ಯ,
ಕರುಣಾರಸ ಪ್ರಧಾನ
ಷಡ್ಗುಣಗಳ ಖಣಿ ಮಾನವನೆದೆ
ಭವಿತವ್ಯದ ಜೀವನ.
ರೂಪ ರಸ ಗುಣ ಪ್ರಪಂಚದಾದ್ಯಂತ
ಭಿನ್ನಾಭಿನ್ನ ಭಿನ್ನ
ವೈವಿಧ್ಯತೆ ಸುರಸುಂದರ ಸುಮಧುರ
ಮಂಜುಳ ಗಾನ.
ಜೀವನ ಮುದ್ರಿತ ಪುಸ್ತಕವಲ್ಲ
ಕೈಬರಹದ ಲೇಖನ
ಓದಲು ಬಂದರೆ ಸಾರ್ಥಕ ಲೇಖನ
ಆನಂದದ ವನ !
ಲಿಂಗಾರೆಡ್ಡಿ ಶೇರಿ