ತೋನಸನಹಳ್ಳಿ : ಏ. 6 ರಿಂದ 9 ವರೆಗೆ ಜಾತ್ರಾ ಮಹೋತ್ಸವ :..

ತೋನಸನಹಳ್ಳಿ : ಏ. 6 ರಿಂದ 9 ವರೆಗೆ ಜಾತ್ರಾ ಮಹೋತ್ಸವ :..

ತೋನಸನಹಳ್ಳಿ : ಏ. 6 ರಿಂದ 9 ವರೆಗೆ ಜಾತ್ರಾ ಮಹೋತ್ಸವ :.. 

ಶಹಾಬಾದ : - ತಾಲ್ಲೂಕಿನ ತೋನಸನಹಳ್ಳಿ ಗ್ರಾಮದ ಹಿಂದೂ-ಮುಸ್ಲಿಂಮರ ಭಾವೈಕ್ಯತೆಯ ಕೇಂದ್ರವಾಗಿರುವ ಸದ್ಗುರು ಮಲ್ಲಣಪ್ಪ ಮಹಾರಾಜರು, ಅಲ್ಲಮಪ್ರಭು ಹಾಗೂ ಸುಲ್ತಾನ ಅಹ್ಮದ ಶಾಹವಲಿ ಯವರ ಜಾತ್ರಾ ಮಹೋತ್ಸವ ಏ. 6 ರಿಂದ 9ರ ವರೆಗೆ ವೈಭವದಿಂದ ಜರುಗಲಿದೆ ಎಂದು ಅಲ್ಲಮಪ್ರಭು ಸಂಸ್ಥಾನ ಮಠದ ಪೂಜ್ಯರಾದ ಧರ್ಮರತ್ನ ಡಾ. ಮಲ್ಲಣಪ್ಪ ಮಹಾಸ್ವಾಮಿಗಳು ಹೇಳಿದರು. 

ಅವರು ತೋನಸನಹಳ್ಳಿ ಅಲ್ಲಮಪ್ರಭು ಸಂಸ್ಥಾನದ ಮಠದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿ ಹೇಳಿದರು. 

ಏ. 6 ರಂದು ರವಿವಾರ ರಾತ್ರಿ 10:30 ಗಂಟೆಗೆ ಗಂಧೋತ್ಸವ ಕಾರ್ಯಕ್ರಮ ಜರುಗುವದು. 

ಏ. 7 ರಂದು ಸಾಯಂಕಾಲ 6:30 ಗಂಟೆಗೆ ಭವ್ಯವಾದ ರಥೋತ್ಸವ ಸಾಗುವುದು, 7:30 ಗಂಟೆಗೆ ಸರ್ವ ಧರ್ಮಗಳ ಧರ್ಮ ಸಭೆ ನಡೆಯುವದು. 

ಧರ್ಮ ಸಭೆಯ ದಿವ್ಯಾ ಸಾನಿಧ್ಯ ವನ್ನು ಸೋನ್ನದ ವಿರಕ್ತ ಮಠದ ಡಾ. ಶಿವಾನಂದ ಮಹಾಸ್ವಾಮಿಗಳು, ಚಿತ್ತಾಪುರ ದ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರ ರ ಜೊತೆ ಅನೇಕ ಮಠಾಧೀಶರು ಉಪಸ್ಥಿತರಿರುವರು. 

ಸಭೆ ಯನ್ನು ರಾಜ್ಯ ಸರಕಾರದ ವೈದ್ಯಕೀಯ ಸಚಿವರಾದ ಶರಣಪ್ರಕಾಶ ಪಾಟೀಲ ಮತ್ತು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮಡು ರವರು ಉದ್ಘಾಟಿಸುವರು. 

ಕೆಕೆಆರಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ. ಅಜಯಸಿಂಗ ಮತ್ತು ರಾಷ್ಟ್ರೀಯ ಕೋಲಿ ಮಹಾ ಸಂಘದ ಅಧ್ಯಕ್ಷರಾದ ರಮೇಶ ದಾದಾ ಪಾಟೀಲ ಕ್ಯಾಲೆಂಡರ್ ಬಿಡುಗಡೆ ಮಾಡುವರು. 

ಧರ್ಮ ಸಭೆಯ ಅಧ್ಯಕ್ಷತೆಯನ್ನು ಎಂಎಲ್ಸಿ ತಿಪ್ಪಣಪ್ಪ ಕಮಕನೂರ ವಹಿಸಿಕೊಳ್ಳುವರು. 

ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಿಜಿ ಪಾಟೀಲ, ತೆಲಂಗಾಣ ಶಾಸಕ ವಾಕಟಿ ಶ್ರೀಹರಿ, ದೊಡ್ಡಪ್ಪ ಗೌಡ ಪಾಟೀಲ ನರಿಬೋಳ, ಭೀಮಣ್ಣ ಸಾಲಿ ಉಪಸ್ಥಿತರಿರುವರು ಎಂದರು. 

ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಜನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. 

ಏ. 8ರ ಮಂಗಳವಾರ ದಂದು ಕುಸ್ತಿಗಳು ಜರುಗುವವು, ಏ. 9ರ ಬುಧವಾರ ದಂದು ದೇವರನ್ನು ಮಹಾ ಮನೆಗೆ ಬರಮಾಡಿಕೊಳ್ಳುವ ಕಾರ್ಯಕ್ರಮ ವಿರುತ್ತದೆ ಎಂದು ವಿವರಿಸಿದರು. 

ಪತ್ರಿಕಾ ಗೋಷ್ಠಿಯಲ್ಲಿ ನಿಂಗಣ್ಣಗೌಡ ಪೋಲಿಸಪಾಟೀಲ, ಮಹಾದೇವ ಬಂದಳ್ಳಿ, ಬಸವರಾಜ ಗೋಳೆದ, ಮಹಾಲಿಂಗ ಪೂಜಾರಿ, ಬಸವರಾಜ ಮದ್ರಕಿ, ಮಂಜುನಾಥ ಇಟಗಾ, ಮಲ್ಲಿಕಾರ್ಜುನ ನಾಟೀಕಾರ, ಬಸವರಾಜ ಬುಟ್ನಾಳ ಉಪಸ್ಥಿತರಿದ್ದರು.

ಶಹಾಬಾದ ವರದಿ ನಾಗರಾಜ್ ದಂಡಾವತಿ