ಕಲ್ಲೂರ ಚೆಟ್ಟಿನಾಡ ಸಿಮೆಂಟ್ ಕಂಪನಿಯಲ್ಲಿ ಕಾರ್ಮಿಕ ದಿನ ಆಚರಣೆ

ಕಲ್ಲೂರ ಚೆಟ್ಟಿನಾಡ ಸಿಮೆಂಟ್ ಕಂಪನಿಯಲ್ಲಿ ಕಾರ್ಮಿಕ ದಿನ ಆಚರಣೆ

ಕಲ್ಲೂರ ಚೆಟ್ಟಿನಾಡ ಸಿಮೆಂಟ್ ಕಂಪನಿಯಲ್ಲಿ ಕಾರ್ಮಿಕ ದಿನ ಆಚರಣೆ 

ಚಿಂಚೋಳಿ : 

ದುಡಿಯುವ ಶ್ರಮಿಕ ವರ್ಗಕ್ಕೆ ಪ್ರೋತ್ಸಾಹಿಸುವುದಕ್ಕಾಗಿ ಕಾರ್ಮಿಕ ದಿನ ಆಚರಣೆ ಮಾಡಲಾಗುತ್ತಿದೆ. ಕಾರ್ಮಿಕರನ್ನು ಕಾರ್ಖಾನೆ ಕುಟುಂಬದಂತೆ ನೋಡಿಕೊಳ್ಳುತ್ತಿದೆ. ಕಾರ್ಮಿಕರ ಕಷ್ಟ ಸುಖದಲ್ಲಿ ಕಂಪನಿ ಜೊತೆಗೆ ಇರುತ್ತದೆ ಎಂದು ಕಲ್ಲೂರ ಚೆಟ್ಟಿನಾಡ್ ಸಿಮೆಂಟ್ ಕಾರ್ಖಾನೆಯ ಆಡಳಿತ ಮುಖ್ಯಸ್ಥ ಶೇಖರ ಬಾಬು ಅವರು ಹೇಳಿದರು. 

ಕಾರ್ಖಾನೆಯಲ್ಲಿ ಕಾರ್ಮಿಕ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಮಿಕರ ಸುರಕ್ಷತೆಗಾಗಿ ಸರಕಾರಗಳು ಹಲವು ಕಾಯ್ದೆಗಳು ರೂಪಿಸಿ ಕಾರ್ಮಿಕರಿಗೆ ಸುರಕ್ಷತೆ ನೀಡುತ್ತಿವೆ.

ಕಂಪನಿ ಮುಂದೆ ಸಾಗಬೇಕಾದರೆ ಕಾರ್ಮಿಕರ ಅವಶ್ಯಕತೆ ಮುಖ್ಯವಾಗಿದೆ. ಶ್ರಮಿಕ ಕಾರ್ಮಿಕರು ಇಲ್ಲದೆ ಕಂಪನಿ ಮುಂದುವರೆಯಲು ಸಾಧ್ಯವಿಲ್ಲ. ಕಾರ್ಮಿಕರೇ ಕಂಪನಿಗೆ ಭದ್ರ ಭೂನಾದಿ ಆಗಿದ್ದು, ಕಾರ್ಖಾನೆ ಕಾರ್ಮಿಕ ಕಾಯ್ದೆಗಳಂತೆ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಿ ನೀಡಲಾಗುತ್ತಿದೆ. 

ಕಾರ್ಮಿಕರು ಸುರಕ್ಷತೆ ಕ್ರಮಗಳನ್ನು ಅನುಸರಿಸಿ ನಿರ್ಭಯವಾಗಿ ಕೆಲಸ ನಿರ್ವಹಿಸಿ, ಕುಟುಂಬಕ್ಕೆ ಧೈರ್ಯವಾಗಿ ಇಡಿ. ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕ ವರ್ಗ ಕಂಪನಿ ನನ್ನದೆಂದು ಅರೆತು ಕೆಲಸ ನಿರ್ವಹಿಸಿದಲ್ಲಿ ಕಾರ್ಖಾನೆಗೆ ಉತ್ತಮ ರೀತಿಯಲ್ಲಿ ಸಾಗಲಿದ್ದು, ಕಾರ್ಮಿಕರು ಕಂಪನಿ ಪ್ರೀತಿಗೆ ಪಾತ್ರರಾಗಬೇಕೆಂದರು. 

ಕಾರ್ಮಿಕರಾದ ಗೋಪಾಲ ಯಾದವ, ಮಹೇಬೂಬ್, ಮಲ್ಲು ಪೂಜಾರಿ ಅವರು ಮಾತನಾಡಿ ತಮ್ಮ ಅನಿಸಿಕೆಗಳು ವ್ಯಕ್ತಪಡಿಸಿದರು. ಕಾರ್ಮಿಕರ ದಿನಾಚರಣೆ ಅಂಗವಾಗಿ ವಿವಿಧ ಕ್ರೀಡೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಂಪನಿ ಆಡಳಿತ ವಿಭಾಗಗಳ ಮುಖ್ಯಸ್ಥರಾದ ಗಣೇಶ, ಬಾಲು, ಆರ್. ಆರ್.ನರಸಿಂಹರಾವ, ಗಣೇಶ, ಸರ್ವಾನಂದ, ಕಾಶಿನಾಥ, ಪ್ರಭಾಕರ ರೆಡ್ಡಿ ಅವರು ಉಪಸ್ಥಿತರಿದ್ದರು.