ಡಾ.ಬಿ.ಆರ್. ಅಂಬೇಡ್ಕರ ಅವರ ಜೀವನ ಮತ್ತು ಅವರ ಸಾಧನೆ ಬಗ್ಗೆ ಪ್ರಬಂಧ ಸ್ಪರ್ಧೆ ಜರುಗಿತು

ಡಾ.ಬಿ.ಆರ್. ಅಂಬೇಡ್ಕರ ಅವರ ಜೀವನ ಮತ್ತು ಅವರ ಸಾಧನೆ ಬಗ್ಗೆ ಪ್ರಬಂಧ ಸ್ಪರ್ಧೆ ಜರುಗಿತು
ಕಲಬುರಗಿ: ಕನ್ನಡ ಭವನದಲ್ಲಿ ಡಾ|| ಬಿ.ಆರ್. ಅಂಬೇಡ್ಕರ ನೇ 134 ಜನ್ಮ ದಿನದ ನಿಮಿತ್ಯ ಜಿಲ್ಲಾ ಜಯಂತ್ಯೋತ್ಸವ ಸಮಿತಿ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ ಅವರ ಜೀವನ ಮತ್ತು ಅವರ ಸಾಧನೆ ಬಗ್ಗೆ ಪ್ರಬಂಧ ಸ್ಪರ್ಧೆ ನಡೆಯಿತು. ಈ ಸಂದರ್ಭದಲ್ಲಿ ಸಲಹೆಗಾರ ಹಣಮಂತ ಜಿ. ಯಳಸಂಗಿ, ಗೌರವ ಅಧ್ಯಕ್ಷ ಲಕ್ಷ್ಮಣ ಮೂಲಭಾರತಿ, ಜಿಲ್ಲಾ ಜಯಂತ್ಯೋದ ಅಧ್ಯಕ್ಷ ಮಹೇಶ ತೇಲ್ಲೂರಕರ್, ಮಾಜಿ ಅಧ್ಯಕ್ಷರಾದ ಅರವಿಂದ ಕಮಲಾಪೂರ, ಮಂಜುನಾಥ ಭಂಡಾರಿ, ಪ್ರಚಾರ ಸಮಿತಿ ಅಧ್ಯಕ್ಷ ವಿನೋದ ಕಾಂಬಳೆ, ಖಜಾಂಚಿ ಸಮಿತಿ ಅಧ್ಯಕ್ಷ ನಾಗರಾಜ ಹೊಸಮನಿ, ಸತೀಶಕುಮಾರ ಪರತಾಬಾದ ಸೇರಿದಂತೆ ಇತರರು ಇದ್ದರು. ನಂತರ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತಿರಿಸಲಾಯಿತು.