ನಾಯಿ ಕಡಿತ ಪ್ರಕರಣ : ಪರಿಹಾರದ ಚೆಕ್ ವಿತರಣೆ :..

ನಾಯಿ ಕಡಿತ ಪ್ರಕರಣ : ಪರಿಹಾರದ ಚೆಕ್ ವಿತರಣೆ :..

ನಾಯಿ ಕಡಿತ ಪ್ರಕರಣ : ಪರಿಹಾರದ ಚೆಕ್ ವಿತರಣೆ :.. 

ಶಹಾಬಾದ : - ನಗರ ಸಭೆಯ ವ್ಯಾಪ್ತಿಯಲ್ಲಿ ನಾಯಿಗಳ ದಾಳಿಯಿಂದ ಚಿಕಿತ್ಸೆ ಪಡೆದ 30 ಜನ ಸಂತ್ರಸ್ತರಿಗೆ ಅಧ್ಯಕ್ಷೆ ಚಂಪಾಬಾಯಿ ರಾಜು ಮೇಸ್ತ್ರಿ ಮತ್ತು ಎಇಇ ಶರಣು ಪೂಜಾರ ರವರ ನೇತೃತ್ವದಲ್ಲಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣೆ ಮಾಡಿದರು. 

ಕಳೆದ 2-3 ತಿಂಗಳ ಹಿಂದೆ ನಗರದಲ್ಲಿ ಬೀದಿ ನಾಯಿಗಳ ದಾಳಿಯಿಂದ ಹಲವಾರು ಮಕ್ಕಳು ಮತ್ತು ವೃದ್ಧರಿಗೆ ನಾಯಿ ಕಚ್ಚಿ ಗಾಯಗೊಳಿಸಿದ್ದವು, ದಾಳಿಗೊಳಗಾದ ಸಂತ್ರಸ್ತರು ತಮ್ಮ ಚಿಕಿತ್ಸೆಯನ್ನು ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮಾಡಿಕೊಂಡಿದ್ದಾರೆ. 

ಸಂತ್ರಸ್ತರ ಪರವಾಗಿ ಜೆಡಿಎಸ್ ಪಕ್ಷದ ಅಬ್ದುಲ್ ಘನಿ ಸಾಬೀರ, ಎಐಡಿವೈಓ ಜಗನ್ನಾಥ ಎಸ ಎಚ, ಕರವೆ ಯಲ್ಲಾಲಿಂಗ ಹೈಯಾಳಕರ, ಬಿಎಸ್ಪಿ ಗೋವಾ ಬಾಬು, ಎಸಡಿಪಿಐ, ಡಿಎಸ್ಎಸ್ ವತಿಯಿಂದ ಹೋರಾಟ ಮಾಡಿ ಸಂತ್ರಸ್ತರಿಗೆ ಪರಿಹಾರದ ಹಣ ನೀಡಬೇಕೆಂದು ಒತ್ತಾಯಿಸಿದ್ದರು. 

ಪರಿಣಾಮವಾಗಿ ನಗರ ಸಭೆಯ ಪೌರಾಯುಕ್ತರಾದ ಡಾ. ಗುರುಲಿಂಗಪ್ಪ ಹಾಗೂ ಸಿಬ್ಬಂದಿಗಳ ಸಮಿತಿ ರಚನೆ ಮಾಡಿ ಬೀದಿ ನಾಯಿ ಗಳಿಂದ ಗಾಯಗೊಂಡ ಸಂತ್ರಸ್ತರಿಗೆ ಪರಿಹಾರದ ರೂಪದಲ್ಲಿ ಪ್ರತಿಯೊಬ್ಬರಿಗೆ 5 ಸಾವಿರ ರೂ. ಗಳಂತೆ ಚೆಕ್ ವಿತರಣೆ ಮಾಡಿದರು ಹಾಗೂ ನೂರಾರು ಸಂಖ್ಯೆಯಲ್ಲಿ ಬೀದಿ ನಾಯಿಗಳನ್ನು ಹಿಡಿದು ಸ್ಥಳಾಂತರಿಸಿ, ನಾಯಿ ಹಾವಳಿ ನಿಯಂತ್ರಿಸುವಲ್ಲಿ ನಗರಸಭೆ ಕಾರ್ಯಾಲಯ ಯಶಸ್ವಿಯಾಗಿದೆ.

ಈ ಸಂಧರ್ಭದಲ್ಲಿ ನಗರ ಸಭೆಯ ವ್ಯವಸ್ಥಾಪಕ ಶರಣಗೌಡ, ನೈರ್ಮಲ್ಯ ನಿರೀಕ್ಷಕ ಮೈನೋದ್ದಿನ, ಮಾಜಿ ಸದಸ್ಯ ರಾಜು ಮೇಸ್ತ್ರಿ, ಶರಣು ಪಗಲಾಪುರ, ಮಹ್ಮದ ಬಾಕ್ರೋದ್ದಿನ, 

ಜೆಡಿಎಸ್ ಪಕ್ಷದ ಅಧ್ಯಕ್ಷ ಅಬ್ದುಲ್ ಘನಿ ಸಾಬೀರ, ಗೋವಾ ಬಾಬು, ನಾಗಪ್ಪ ರಾಯಚೂರಕರ, ಶ್ರೀಧರ ಕೊಲ್ಲೂರ, ಮಹೇಬೂಬ ಗೋಗಿ, ಹೀರಾಲಾಲ ಪವಾರ ಸೇರಿದಂತೆ ಅನೇಕರು ಇದ್ದರು.