ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಜಿಲ್ಲಾ ಸಮಿತಿ ವತಿಯಿಂದ ಅನಿರ್ದಿಷ್ಣಾ ಧರಣಿ ಸತ್ಯಾಗ್ರಹ

ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಜಿಲ್ಲಾ ಸಮಿತಿ ವತಿಯಿಂದ ಅನಿರ್ದಿಷ್ಣಾ ಧರಣಿ ಸತ್ಯಾಗ್ರಹ

ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಜಿಲ್ಲಾ ಸಮಿತಿ ವತಿಯಿಂದ ಅನಿರ್ದಿಷ್ಣಾ ಧರಣಿ ಸತ್ಯಾಗ್ರಹ

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಜಿಲ್ಲಾ ಸಮಿತಿ ವತಿಯಿಂದ ಸರಕಾರಿ ಹಾಸ್ಟೆಲ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರು ತಮ್ಮ ನ್ಯಾಯಯುತ ಬೇಡಿಕೆಗಳಿಗೆ ಒತ್ತಾಯಿಸಿ ಕಳೆದ 16 ದಿನಗಳಿಂದ ಜಿಲ್ಲಾಧಿಕಾರಿಗಳ ಕಛೇರಿ ಎದುರುಗಡೆ ದಿನಾಂಕ : 20-01-2025 ರಿಂದ ಅನಿರ್ದಿಷ್ಣಾ ಧರಣಿ ಸತ್ಯಾಗ್ರಹ ಮುಂದುವರೆದಿದೆ. 

ಆದರೆ ಜಿಲ್ಲಾಡಳಿತ ಕುಂಟು ನೆಪ ಒಡ್ಡಿ ಸಮಸ್ಯೆಗಳಿಗೆ ಸ್ಪಂದಿಸದೇ ಕಾಲಹರಣ ಮಾಡುತ್ತಿದ್ದಾರೆ. ಈ ಹಿಂದೆ ಅಕ್ಟೋಬರ್ 16 ರಂದು ಹಾಸ್ಟೆಲ್ ನೌಕರರ ವಿಭಾಗ ಮಟ್ಟದ ಹೋರಾಟ ನಡೆದಾಗ ಅಂದು ಮಾನ್ಯ ಪ್ರಾದೇಶಿಕ ಆಯುಕ್ತರಾದ ಕೃಷ್ಣ ಬಾಜಪೇಯಿ ಯವರು ನವೆಂಬರ್ 5 ರಂದು ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸುವುದಾಗಿ ಅಶ್ವಾಸನೇ ನಿಡಿ ನಾಲ್ಕು ತಿಂಗಳಾದರೂ ಸಭೆ ಕರೆಯಲಿಲ್ಲಾ. ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯಶ್ರೀ ಪ್ರಿಯಾಂಕ ಖರ್ಗೆರವರಿಗೆ ಮತ್ತು ಸಚಿವರಾದ ಡಾ| ಶರಣಪ್ರಕಾಶ ಪಾಟೀಲ್ ಅವರಿಗೆ ಮ್ಯಾನಪವಾರ್ ಎಜೇನ್ಸಿಗಳ ಶೋಷಣೆ ತಪ್ಪಿಸಲು ಮನವಿ ಮಾಡಲಾಗಿದೆ. ಅಲ್ಲದೇ 31-01-2025 ರಂದು ಮಾನ್ಯ ಜಿಲ್ಲಾಧಿಕಾರಿಗಳು 03-02-2025 ರಂದು ಸಭೆ ನಡೆಸುವುದಾಗಿ ಭರವಸೆ ನೀಡಿದ್ದರು.

ಹಾಸ್ಟೇಲ್ ನೌಕರರ ಬೇಡಿಕೆಗಳು ನ್ಯಾಯುತವಾಗಿದ್ದರೂ ಕೂಡ ಜಿಲ್ಲಾಡಳಿತ ಗಮನಹರಿಸದೇ ಪೂರ್ತಿ ಕಡೆಗಣಿಸುತ್ತಿದ್ದರಿಂದ ಸಮಸ್ಯೆಗಳು ಹೆಚ್ಚುತ್ತಲೇ ನಡೆದಿವೆ. ಕನೀಷ್ಠ 31 ಸಾವಿರ ವೇತನ ಕೊಡಬೇಕು ಮತ್ತು ಬೀದರ ಮಾದರಿಯಲಿ ಸಹಕಾರಿ ಸಂಘದ ಮೂಲಕ ವೇತನ ಪಾವತಿಸಬೇಕು. ಸಿಬ್ಬಂದಿ ಕಡಿತ ಮಾಡಿದ ಆದೇಶ ವಾಪಸ ಪಡೆಯಬೇಕೆಂದು ಪ್ರಮುಖ ಬೇಡಿಕೆಗಳು ಇಡೇರಿಸುವ ವರೆಗೆ ಇಂದಿನಿಂದ ಸರದಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ. ಕಾರಣ ಸರಕಾರ ಕೂಡಲೇ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಈ ಮೂಲಕ ಸರಕಾರಕ್ಕೆ ಮನವಿಯಲ್ಲಿ ಒತ್ತಾಯಿಸಿದ್ದಾರೆ. ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಜಿಲ್ಲಾಧ್ಯಕ್ಷ ಪರಶುರಾಮ ಹಡಲಗಿ, ಕಾಶಿನಾಥ ಬಂಡಿ, ಅಲ್ಲಾ ಪಟೇಲ್ ವಾಡಿ, ನರಸಮ್ಮ ಚಂದನಕೇರಾ, ಸಂಜುಕುಮಾರ ಮೇತ್ರಿ ಸೇರಿದಂತೆ ಇತರರು ಇದ್ದರು.