ರಂಜಾನ್ ಹಬ್ಬದ ಪ್ರಯುಕ್ತ, ಮಾಜಿ ಸಚಿವ ದಿ. ವೈಜಿನಾಥ ಪಾಟೀಲ್ ಅವರ ಕುಟುಂಬದ ವತಿಯಿಂದ ಮುಸ್ಲಿಂ ಬಾಂಧವರಿಗೆ ಇಫ್ತಾಯಾರ ಕೂಟ ಆಯೋಜನೆ,
ರಂಜಾನ್ ಹಬ್ಬದ ಪ್ರಯುಕ್ತ, ಮಾಜಿ ಸಚಿವ ದಿ. ವೈಜಿನಾಥ ಪಾಟೀಲ್ ಅವರ ಕುಟುಂಬದ ವತಿಯಿಂದ ಮುಸ್ಲಿಂ ಬಾಂಧವರಿಗೆ ಇಫ್ತಾಯಾರ ಕೂಟ ಆಯೋಜನೆ,
ಧರ್ಮ ಮರೆತು ಪ್ರೀತಿ ಪ್ರೇಮದಿಂದ ಇರಲು ಸಂದೇಶ ನೀಡುವ ಹಬ್ಬ ರಂಜಾನ್ ಹಬ್ಬ : ಡಾ.ವಿಕ್ರಂ ಪಾಟೀಲ್
ಚಿಂಚೋಳಿ : ರಂಜಾನ್ ಹಬ್ಬದ ಪ್ರಯುಕ್ತ ಮಾಜಿ ಸಚಿವ ದಿ. ವೈಜಿನಾಥ ಪಾಟೀಲ್ ಅವರ ಕುಟುಂಬದ ವತಿಯಿಂದ ಪಟ್ಟಣದ ಗಡಿ ಏರಿಯಾ ಗಡಿ ಮಜೀದ್ ನಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾಯಾರ ಕೂಟ ಏರ್ಪಡಿಸಿದರು.
ಬಳಿಕ ಮಾತನಾಡಿದ ಮಾಜಿ ಎಂ ಎಸ್ ಐ ಎಲ್ ಅಧ್ಯಕ್ಷ ಡಾ. ವಿಕ್ರಮ್ ವೈಜಿನಾಥ ಪಾಟೀಲ್ ಅವರು, ಚಿಂಚೋಳಿ ತಾಲೂಕಿನಲ್ಲಿ ಯಾವುದೇ ಜಾತಿ ಭೇದವನ್ನು ತೋರದೆ ಹಿಂದು- ಮುಸ್ಲಿಂ ಬಾಂಧವರು ಅಣ್ಣ ತಮ್ಮಂದಿರ ತರಹ ಬೆರತು ಹಬ್ಬಗಳನ್ನು ಆಚರಣೆ ಮಾಡುತ್ತಾ ಬರುತ್ತಾರೆ. ನಮ್ಮ ತಂದೆ ದಿ. ವೈಜಿನಾಥ ಪಾಟೀಲರು ಪ್ರತಿ ವರ್ಷ ರಂಜಾನ್ ಹಬ್ಬದಂದು ಉಪವಾಸದಲ್ಲಿ ತೊಡಗಿಕೊಂಡಿರುವ ಮುಸ್ಲಿಂ ಅಣ್ಣ ತಮ್ಮಂದಿರುಗಳಿಗೆ ಕುಟುಂಬದಿಂದ ಇಫ್ತಾಯಾರ ಕೂಟ ಏರ್ಪಡಿಸಲಾಗುತ್ತಿದೆ. ಈ ಹಬ್ಬ ಎಲ್ಲರೊಂದಿಗೆ ಬೆರೆತು ಪ್ರೀತಿ ಪ್ರೇಮದಿಂದ ಇರಲು ಸಂದೇಶ ನೀಡುವ ಹಬ್ಬವಾಗಿದೆ ಎಂದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗೌತಮ್ ವೈಜಿನಾಥ ಪಾಟೀಲ್ ಮಾತನಾಡಿ, ಚಿಂಚೋಳಿಯಲ್ಲಿ ಹಿಂದು ಮುಸ್ಲಿಂ ಎಂಬ ಭೇದವನ್ನು ಮರೆತು ಜೀವನ ನಡೆಸಲಾಗುತ್ತಿದೆ. ಚಿಂಚೋಳಿ ಇತಿಹಾಸ ಪುಟಗಳನ್ನು ತೆರೆದು ನೋಡಿದಾಗ ಮುಸ್ಲಿಂ ಹಿಂದು ಭೇದ ತೋರಿದೆ ಇಲ್ಲ. ಇಫ್ತಾಯಾರ ಕೂಟ ವನ್ನು ಎಲ್ಲರೂ ಕೂಡಿ ಬೆರೆತು ಅಣ್ಣ ತಮ್ಮಂದಿರ ತರಹ ಇರಲು ಒಂದಾಗಿಸುತ್ತದೆ. ಮೇಲಿರುವ ಭಗವಂತನು ಕೂಡ ಯುಗಾದಿ ಮತ್ತು ರಂಜಾನ್ ಹಬ್ಬ ಆಚರಣೆ ಮಾಡಲು ಏಕ ಕಾಲಕ್ಕೆ ನೀಡಿದ್ದಾನೆ. ಇದ್ದರಿಂದ ಭಗವಂತನು ಕೂಡ ಎರಡು ಧರ್ಮ ಒಂದೇ ಎಂದು ಸಂದೇಶ ನೀಡಿದ್ದಾನೆ ಎಂದರು.
ಬಡಿದರ್ಗಾದ ಅಕ್ಬರ್ ಹುಸೇನಿ ಸಾಹೇಬ್, ಪುರಸಭೆ ಅಧ್ಯಕ್ಷ ಆನಂದ ಟೈಗರ್, ಡಾ. ಬಸವೇಶ ವೈಜಿನಾಥ ಪಾಟೀಲ್, ಮಾಜಿ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಗಡಂತಿ, ಉಮೇಶ ಪಾಟೀಲ್, ಮಲ್ಲಿಕಾರ್ಜುನ್ ಪಾಲಾಮೂರ, ಜಗನಾಥ ಗುತ್ತೇದಾರ, ಡಾ. ಗಫಾರ, ಅಬ್ದುಲ್ ಬಾಶೀದ್, ಕೆ. ಎಂ. ಬಾರಿ, ಅಬ್ದುಲ್ ಸತ್ತಾರ, ಹಫಿಜ್ ಇಬ್ರಾಹಿಂ ಸಾಹೇಬ್, ಸಿರಾಜ್ ಸೌದಾಗಾರ, ಮಸೂದ್ ಸೌದಾಗಾರ, ಮತೀನ್ ಸೌದಾಗಾರ, ಶಾಣಪ್ಪ ಹಲಚೇರಿ, ಶ್ರೀಕಾಂತ ಜಾನಕಿ, ಶ್ರೀನಿವಾಸ ಚಿಂಚೋಳಿಕರ್, ಹಣಮಂತ ಪೂಜಾರಿ, ಗುಂಡಯ್ಯ ಸ್ವಾಮಿ, ನೀಲಕಂಠ ಸಿಳ್ಳಿನ,ಸಂಜು ಪಾಟೀಲ್, ಗೌತಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು.