ಗೋನಾಲ ಹಾಗೂ ಶಿವಪುರ ಗ್ರಾಮಗಳ ಪಹಣಿ ಸಮಸ್ಯೆ ಬಗೆಹರಿಸುವವರೆಗೆ ಕರ್ನಾಟಕ ರಕ್ಷಣಾ ವೇದಿಕೆಯವತಿಯಿಂದ ಉಪವಾಸ ಸತ್ಯಾಗ್ರಹ

ಗೋನಾಲ ಹಾಗೂ ಶಿವಪುರ ಗ್ರಾಮಗಳ ಪಹಣಿ ಸಮಸ್ಯೆ ಬಗೆಹರಿಸುವವರೆಗೆ ಕರ್ನಾಟಕ ರಕ್ಷಣಾ ವೇದಿಕೆಯವತಿಯಿಂದ ಉಪವಾಸ ಸತ್ಯಾಗ್ರಹ

(ವಡಗೇರಾ ತಾಲೂಕ ವರದಿಗಾರರು ಮಹಾದೇವಪ್ಪ ಗಂಗಣ್ಣೂರ) 

 ಗೋನಾಲ ಹಾಗೂ ಶಿವಪುರ ಗ್ರಾಮಗಳ ಪಹಣಿ ಸಮಸ್ಯೆ ಬಗೆಹರಿಸುವವರೆಗೆ ಕರ್ನಾಟಕ ರಕ್ಷಣಾ ವೇದಿಕೆಯವತಿಯಿಂದ ಉಪವಾಸ ಸತ್ಯಾಗ್ರಹ

ಯಾದಗಿರ/ವಡಗೇರಾ : ತಾಲೂಕಿನ ಗೋನಾಲ ಮತ್ತು ಶಿವಪುರ ಗ್ರಾಮಗಳ ಪಹಣಿ ಹಾಗೂ ವಿವಿಧ ಬೇಡಿಕೆಗಳಿಗಾಗಿ ದಿನಾಂಕ 02/10/2024 ರಂದು ಉಪವಾಸ ಸತ್ಯಾಗ್ರಹ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಸಂಘಟನೆ ಹಾಗೂ ಜಿಲ್ಲಾ ಸಂಘಟನೆ ತೀರ್ಮಾನಿಸಿದೆ. ವಡಗೇರಾ ತಾಲೂಕು ಆಗಿ ಸುಮಾರು 8 ವರ್ಷ ಕಳೆದರೂ ಇನ್ನು ಅಭಿವೃದ್ಧಿ ಕಂಡಿಲ. ಹಲವು ಕಚೇರಿಗಳು ಪ್ರಾರಂಭಿಸಿಲ್ಲ ಎಲ್ಲ ಕಚೇರಿಗಳು ಪ್ರಾರಂಭಿಸಿ ವಡಗೇರಾ ತಾಲೂಕಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಬೇಕು ಹಾಗೂ ತಾಲೂಕಿನ ಸಮಸ್ಯೆಗಳನ್ನು ಅತಿ ಶೀಘ್ರದಲ್ಲಿ ಬಗೆಹರಿಸಬೇಕೆಂದು ವಡಗೇರಾ ತಾಲೂಕ ಸಂಘಟನೆ ಹಾಗೂ ಜಿಲ್ಲಾ ಸಂಘಟನೆಯ ವತಿಯಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ಚೌಡಯ್ಯ ಬಾವೂರ ತಿಳಿಸಿದರು.