ಎಳ್ಳಮಾವಾಸ್ಯೆ ನಿಮಿತ್ಯ ಸ್ನೇಹ ಮಿಲನ ಹಾಗು ಕವಿಗೋಷ್ಠಿ ಕಾರ್ಯಕ್ರಮ.
ಎಳ್ಳಮಾವಾಸ್ಯೆ ನಿಮಿತ್ಯ ಸ್ನೇಹ ಮಿಲನ ಹಾಗು ಕವಿಗೋಷ್ಠಿ ಕಾರ್ಯಕ್ರಮ.
ಬೀದರ್ ತಾಲ್ಲೂಕಿನ ಕಂಗನಕೋಟ ಗ್ರಾಮದಲ್ಲಿ ಓಂಕಾರ್ ಉಪ್ಪಿ ರವರ ಹೊಲದಲ್ಲಿ
ಕನ್ನಡ ನಾಡಿನ ಸೌಹಾರ್ದ ತೆಯ ಹಬ್ಬವಾದ ಎಳ್ಳ ಆಮಾಸ್ಯೆಯು ಪ್ರಾಕೃತಿಕ ಹಬ್ಬವಾಗಿದ್ದು, ಈ ಸುಗ್ಗಿ ಯಲ್ಲಿ ಸಿಗುವ ದವಸ- ಧಾನ್ಯಗಳನ್ನು ಅವುಗಳಿಂದ ತಯಾರಿಸಲ್ಪಟ್ಟ ಸಜ್ಜಿ ರೊಟ್ಟಿ, ಕಾನುಲೆ, ಕಡಬು, ಅಂಬಲಿ ಬಗೆ ಬಗೆಯ ಪದಾರ್ಥಗಳನ್ನು ಭೂಮಿ ತಾಯಿಗೆ ನೈವೇದ್ಯವನ್ನು ಕೊಟ್ಟು, ಚರಗ ಚೆಲ್ಲುವ ಸಂಪ್ರದಾಯದೊಂದಿಗೆ ಜಾತಿ ಭೇದವನ್ನು ಮರೆತು ಒಂದಾಗಿ, ಭಾವೈ ಕ್ಯತೆಯ ಸಂಕೇತವುಳ್ಳ ಎಳ್ಳಮಾವಾಸ್ಯೆ ಹಬ್ಬವು ರೈತರ ಅತ್ಯಂತ ಸಂಭ್ರಮದ ಹಬ್ಬವಾಗಿರುತ್ತದೆ ಎಂದು ಹಿರಿಯ ಸಾಹಿತಿ ಡಾ.ಎಂ. ಜಿ.ದೇಶಪಾಂಡೆ ಯವರು ಅಭಿಪ್ರಾಯ ಪಟ್ಟರು. ಅವರು ಇಂದು ಬೀದರ್ ತಾಲೂಕಿನ ಕಂಗನಕೋಟ ಗ್ರಾಮದ ಉಪ್ಪೆ ಪರಿವಾರ ದ ಹೊಲ ದಲ್ಲಿ ಆಚರಿಸ ಲಾದ ಎಳ್ಳಮಾವಾಸ್ಯೆ ನಿಮಿತ್ಯ ಆಯೋಜಿಸಿದ್ದ ಕವಿ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡು ತ್ತಿದ್ದರು. ಮುಂದುವರೆದು ಮಾತ ನಾಡಿ, ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲಾ ಕವಿಗಳು, ಪ್ರಾಕೃತಿಕ ಹಬ್ಬದ ಕುರಿತು ಕವನಗಳನ್ನು ವಾಚಿಸಿರುವುದು ಶ್ಲ್ಯಾಘ ನೀಯವಾಗಿದೆ ಎಂದು ನುಡಿದರು. ಮಕ್ಕಳ ಸಾಹಿ ತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಗಳಾದ ಓಂಕಾರ್ ಪಾಟೀಲರವರು ಮಾತನಾಡಿ, ಕಳೆದ ಐದು ವರ್ಷಗಳಿಂದ ಎಳ್ಳಅಮಾ ವಾಸ್ಯೆ ನಿಮಿತ್ಯ ಕವಿಗೋಷ್ಠಿ ಸಂದರ್ಭದಲ್ಲಿ ಕೃಷಿ ಕ್ಷೇತ್ರ ದಲ್ಲಿ ಉತ್ತಮ ಸಾಧನೆಗೈದ ರೈತರಿಗೆ ಗೌರವಿಸುತ್ತಿರು ವುದು ಸಂತಸ ತಂದಿದೆ ಎಂದರು. ಅತಿಥಿಯಾಗಿ ಆಗಮಿಸಿದ ಪಶು ವೈದ್ಯಕೀ ಯ ವಿಶ್ವ ವಿದ್ಯಾಲಯದ ನಿವೃತ್ತ ಅಧಿಕಾರಿ ವೀರಭದ್ರ ಪ್ಪ ಉಪ್ಪಿನರವರು ಮಾತ ನಾಡಿ, ಪಿಜ್ಜಾ, ಬರ್ಗರ್, ಬೇಕರಿ ವಸ್ತುಗಳ ಬಳಕೆ ಕಡಿಮೆ ಮಾಡಿ, ಪ್ರೋಟಿನ ಹಾಗೂ ವಿಟಮಿನ್ ಯುಕ್ತ ಸಾಂಪ್ರದಾಯಿಕ ಆಹಾರ ಸೇವನೆಯ ಕಡೆಗೆ ಹೆಚ್ಚಿನ ಗಮನ ನೀಡಬೇಕೆಂದು ಅವರು ಜನತೆಗೆ ಕರೆ ನೀಡಿ ದರು. ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ಧ, ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾದ ಅರವಿಂದ ಕುಲಕರ್ಣಿ ಅವರು ಮಾತನಾಡಿ, ಎಳ್ಳ ಮಾವಾಸ್ಯೆಯು ಧಾರ್ಮಿಕ ಹಾಗೂ ವೈಜ್ಞಾನಿಕ ಆಧಾರ ದ ಮೇಲೆ ಆಚರಿಸುತ್ತಿರುವ ಹಬ್ಬ ವಾಗಿದೆ. ಸತ್ವಪರಿತ ಮತ್ತು ಪೌಷ್ಟಿ ಕಾಂಶವುಳ್ಳ ಆಹಾರ ಪದಾರ್ಥಗಳನ್ನು ಜೀವನ ದಲ್ಲಿ ಅಳವಡಿಸಿ ಕೊಂಡಾಗ ಉತ್ತಮ ಆರೋಗ್ಯವನ್ನು ಪಡೆಯಬ ಹುದು ಎಂದು ಅಭಿಪ್ರಾಯ ಪಟ್ಟರು. ಪ್ರಶಸ್ತಿ ಪುರಸ್ಕೃತ ಯುವ ಸಾಹಿತಿ ಸಂಗಮೇಶ ಜಾಂತೆಯವರು ಮಾತ ನಾಡಿ, ದೇಶದ ಬೆನ್ನೆಲು ಬಾದ ರೈತನು ತಾನು ಬೆಳೆದ ಬೆಳೆಗೆ ವೈಜ್ಞಾನಿಕವಾದ ಬೆಲೆ ದೊರಕದಿರುವುದ ರಿಂದ ಆತ್ಮ ಹತ್ಯೆಗಳಿಗೆ ಶರಣಾಗುತ್ತಿರುವುದು ಖೇದಕರವಾಗಿದೆ ಎಂದು ನುಡಿದರು. ಡಾ ಯಶಪಾಲ ಮಹೇಂದ್ರಕರ ರವರು ಮಾತನಾಡಿ, ಎಂದಿನ ಆಧುನಿಕ ಯುಗ ದಲ್ಲಿ ರೈತರು ಹೊಸ ತಂತ್ರ ಜ್ಞಾನವನ್ನು ಅಳವಡಿಸಿ ಕೊಂಡು, ವೈಜ್ಞಾನಿಕ ಬೆಲೆ ದೊರೆಯುವಂತಹ ಹಣ್ಣು ತರಕಾರಿ ಹೂವು ಮುಂತಾದ ಬೆಳೆಗಳನ್ನು ಕೃಷಿ ಮಾಡುವುದನ್ನು ರೂಢಿಸಿ ಕೊಳ್ಳಬೇಕು. ಈಗಾಗಲೇ ಬೆಲೆ ಏರಿಕೆ ಆಗಿರುವ ಸಿರಿಧಾನ್ಯಗಳ ಉತ್ಪಾದನೆಯನ್ನು ಹೆಚ್ಚು ಮಾಡಬೇಕೆಂದು ರೈತರಿಗೆ ಕಿವಿಮಾತು ಹೇಳಿದರು. ಡಾ ಶ್ರೇಯಾ ಮಹೇoದ್ರಕರ ತಮ್ಮ ಕವನದ ಮೂಲಕ, ಪ್ರಕೃತಿ ಮಾತೆಯ ಮಹಿಮೆ ಯನ್ನು ಕೊಂಡಾಡಿ, ಪ್ರಕೃತಿ ಯು ಪೂಜನೀಯವಾಗಿದೆ ಎಂದು ತಿಳಿಸಿದರು. ವಿಜಯಕುಮಾರ ಪಾಟೀಲ್ ಸ್ವಾಗತಿಸಿದರು. ಪ್ರೇಮಲತಾ ಪಾಟೀಲರು ಕೊನೆಯಲ್ಲಿ ವಂದಿಸಿದರು. ಬಾಬು ನೀಲಾಪನೋರ್, ಸಂಗೀತ, ಪ್ರಭಾವತಿ, ಅಂಜಲಿ, ನೀಲಾoಬಿಕಾ, ಉತ್ತಿಮ ಮುಂತಾದವರು ಉಪಸ್ಥಿತರಿದ್ದರು. ವರದಿ: ಮಛಂದ್ರನಾಥ ಕಾಂಬ್ಳೆ ಬೀದರ್