ಸಮರ್ಪಿತ ಸೇವೆಗೆ ಗೌರವ' - ಚಿನ್ನದ ಪದಕಕ್ಕೆ ವಿಶ್ವನಾಥ್ ಮುದರೆಡ್ಡಿ ಆಯ್ಕೆ

ಸಮರ್ಪಿತ ಸೇವೆಗೆ ಗೌರವ' - ಚಿನ್ನದ ಪದಕಕ್ಕೆ ವಿಶ್ವನಾಥ್ ಮುದರೆಡ್ಡಿ ಆಯ್ಕೆ

ಯಡ್ರಾಮಿ: 2024-25ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಯಡ್ರಾಮಿ ಪೊಲೀಸ್ ಠಾಣಾ ಅಧಿಕಾರಿ ವಿಶ್ವನಾಥ್ ಮುದರೆಡ್ಡಿ ಆಯ್ಕೆಯಾಗಿರುವುದು ಸ್ಥಳೀಯ ಜನತೆಗೆ ಹೆಮ್ಮೆ ಮತ್ತು ಸಂತಸದ ಕ್ಷಣವಾಗಿದೆ.

'ಸಮರ್ಪಿತ ಸೇವೆಗೆ ಗೌರವ' - ಚಿನ್ನದ ಪದಕಕ್ಕೆ ವಿಶ್ವನಾಥ್ ಮುದರೆಡ್ಡಿ ಆಯ್ಕೆ

ಸಿಂಗಂ ಎಂದೇ ಖ್ಯಾತಿ ಪಡೆದ ವಿಶ್ವನಾಥ್ ಮುದರೆಡ್ಡಿ, ತಮ್ಮ ಕರ್ತವ್ಯನಿಷ್ಟೆ, ಜನಸೇವೆ ಮತ್ತು ಅಪರಾಧ ನಿರ್ವಹಣೆಯಲ್ಲಿ ಮೆರೆದ ಪ್ರತಿಭೆಗಾಗಿ ಈ ಗೌರವಕ್ಕೆ ಭಾಜನರಾಗಿದ್ದಾರೆ.

ಯಡ್ರಾಮಿ ತಾಲೂಕಿನ ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕೀಯ ನಾಯಕರಿಂದ ವಿಶ್ವನಾಥ್ ಮುದರೆಡ್ಡಿ ಅವರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಜನಸಾಮಾನ್ಯರ ಕುಂದುಕೊರತೆಗಳಿಗೆ ಸ್ಪಂದಿಸುವ, ತಕ್ಷಣದ ಕಾರ್ಯಾಚರಣೆ ನಡೆಸುವ ಮತ್ತು ಶಿಸ್ತಿನೊಂದಿಗೆ ಕೆಲಸ ನಿರ್ವಹಿಸುವ ಅವರ ಶೈಲಿ ಜನಮಾನಸದಲ್ಲಿ ಪ್ರಭಾವ ಬೀರುತ್ತಿದೆ.

ಪೊಲೀಸ್ ಇಲಾಖೆಯ ಸೇವೆಯಲ್ಲಿ ಅವಿರತ ಶ್ರಮ ಪಡುತ್ತಿರುವ ಮುದರೆಡ್ಡಿ, ತಮ್ಮ ಕಠಿಣ ಪರಿಶ್ರಮ ಮತ್ತು ಸತ್ಯನಿಷ್ಠೆಯ ಫಲವಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಮುಖ್ಯಮಂತ್ರಿಗಳ ಚಿನ್ನದ ಪದಕವು ರಾಜ್ಯದ ಉನ್ನತ ಪ್ರಶಸ್ತಿಗಳಲ್ಲಿ ಒಂದಾಗಿದ್ದು, ಇದು ಅವರ ಪ್ರತಿಭೆ ಮತ್ತು ಸಮರ್ಪಣೆಯನ್ನು ಗುರುತಿಸುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಮುದರೆಡ್ಡಿ ಅವರ ಸಾಧನೆಗೆ ಶ್ಲಾಘನೆಗಳ ಸುರಿಮಳೆ ಕಾಣಸಿಗುತ್ತಿದ್ದು, ಅವರ ಮುಂದಿನ ಕರ್ತವ್ಯಗಳಲ್ಲಿ ಯಶಸ್ಸು ಲಭಿಸಲೆಂದು ಜನರು ಶುಭ ಹಾರೈಸುತ್ತಿದ್ದಾರೆ.

ವರದಿ ಜಟ್ಟೆಪ್ಪ ಪೂಜಾರಿ