ಹೊಳೆಸಮುದ್ರ ಗ್ರಾಮ ಸಭೆಯಲ್ಲಿ ಅನುದಾನ ಆಯೋಗದ ಸಾಮಾಜಿಕ ಪರಿಶೋಧನೆ ವಿಷಯ ಮಂಡನೆ:
ಹೊಳೆಸಮುದ್ರ ಗ್ರಾಮ ಸಭೆಯಲ್ಲಿ ಅನುದಾನ ಆಯೋಗದ ಸಾಮಾಜಿಕ ಪರಿಶೋಧನೆ ವಿಷಯ ಮಂಡನೆ:
ಕಮಲನಗರ: ತಾಲೂಕಿನ ಹೊಳೆಸಮುದ್ರ ಗ್ರಾಮದ ರಾಮಮಂದಿರ ದೇವಸ್ಥಾನದಲ್ಲಿ ಜಿಲ್ಲಾ ಪಂಚಾಯತ್ ಬೀದರ್ ತಾಲೂಕಾ ಪಂಚಾಯತ್ ಕಮಲನಗರ್ ಗ್ರಾಮ ಪಂಚಾಯತ್ ಹೊಳೆ ಸಮುದ್ರದಲ್ಲಿ 2024-25ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮದಲ್ಲಿ 2005 ಮತ್ತು 15ನೇ ಹಣಕಾಸು ಅನುದಾನ ಆಯೋಗದ ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ ನಡೆಸಲಾಯಿತು.
ಈ ಸಭೆಯಲ್ಲಿ ತಾಲೂಕಾ ಕಾರ್ಯಕ್ರಮದ ವ್ಯವಸ್ಥಾಪಕರಾದ ಶ್ರೀ ಆನಂದ ಎಸ್ ಎಚ್ ಬಹಳ ಮಾರ್ಮಿಕವಾಗಿ ಮಾತನಾಡಿದರು.
ಗ್ರಾಮ ಸಂಪನ್ಮೂಲ ವ್ಯಕ್ತಿ ಗಳಾದ ಯೋಗೇಶ ಪಾಟೀಲ್.ಶ್ರೀದೇವಿ ಬೀರಾದಾರ.ಸುನೀಲ ವಿಠಲ್ ಶೇಷರಾವ್ ಮೇತ್ರೆ. .ರಂಜನಾ ಬೀರಾದಾರ ದೇವಿಕಾ ರಾಜೇಂದ್ರ ಯೋಜನೆಯ ಹಿನ್ನೆಲೆ. ಉದ್ದೇಶ. ಪ್ರಕಾರ ಗಳು ಈ ಯೋಜನೆಯ ಬಗ್ಗೆ ಗ್ರಾಮ ಸಭೆಗೆ ಬಂದಂತಹ ಊರಿನ ಜನತೆಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಮೇಳು ಕೀಳು ಎಂಬ ಭಾವನೆಗಳನ್ನು ಹೋಗಲಾಡಿಸಿ ಮತ್ತು100 ದಿವಸಗಳ ಕೆಲಸವನ್ನು ತಾವು ಮಾಡಿಕೋಳ್ಳಬಹುದು. ನೀವು ನಿಮ್ಮ ಜೀವನವನ್ನು ಈ ಯೋಜನೆಯಿಂದ ಬೇಕಾಗಿರುವ ರೀತಿಯಲ್ಲಿ ಸದುಪಯೋಗ ಪಡೆದು ಕೊಂಡು ಬದಲಾವಣೆಯನ್ನು ಮಾಡಿಕೋಳ್ಳಿ ಎಂದು ಹೇಳಿದರು.
ಧನದ ಕೊಟ್ಟಿಗೆ.ಕುರಿ ಕೋಳಿ ಕ್ಷೇತ್ರಬದುಕು.ಕೃಷಿ ಹೊಂಡಾ.ಹೋಸ ಭಾವಿ ತೋಟಗಾರಿಕೆ ಇವೆಲ್ಲವು ಕಾಮಗಾರಿಗಳು ನರೇಗಾ ಯೋಜನೆಯಡಿ ಮಾಡಿ ಕೋಳ್ಳಿ ಎಂದೆನುತಾ.ಇದರ ಜೋತೆಗೆ 15 ನೇ ಹಣ ಕಾಸಿನ ಅನುದಾನ ಆಯೋಗದ ಸಾಮಾಜಿಕ ಪರಿಶೋಧನೆಯ ವಿಷಯ ಮಂಡನೆ ಮಾಡಿದರು. 54 ಕಾಮಗಾರಿಗಳು ಆಗಿವೆ.28,41434/- ಹಣ ಪಾವತಿಯಾಗಿದೆ.ಎಂದು ಹೇಳಿದರು.ಮತ್ತು ಕೂಲಿಗಾಗಿ ಖರ್ಚು 4194147/- ಸಾಮಗ್ರಿ 1396577/- ಒಟ್ಟು ಖರ್ಚು 5590724/- ಖರ್ಚುಆಗಿದೆ ಎಂದು ತಿಳಿಸಿದರು. ಜೊತೆಗೆ ಸಭಿಕರ ಎದುರಿಗೆ 149 ಕಾಮಗಾರಿಗಳು ಗ್ರಾಮ ಸಭೆಯಲ್ಲಿ ಓದಿ ಹೇಳಲಾಯಿತು.ಮತ್ತು ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ದೇವದಾಸ ಮುಸ್ಕೆ ಸರ್ ಇವರು ಸಹ ಮಾತಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ನಾಗರಿಕರಾದ ಶ್ರೀ ಗೋರಕ್ ಮಾಣಿಕರಾವ ಕದಂ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಅದೇ ರೀತಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಯೋಗಿತಾ ಮಾರುತಿ ಅಳಂದೆ ಮತ್ತು ಪಿಡಿಓ ನಿರ್ಮಲಾ ಹಾಗೂ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಸದಸ್ಯರು ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಗ್ರಾಮಸ್ಥರು ಸಭೆಯಲ್ಲಿ ಹಾಜರಿದ್ದರು. ಈ ಕಾರ್ಯಕ್ರಮವು ರೂಪರೇಷೆಗಳೊಂದಿಗೆ ಯಶಸ್ವಿಯಾಗಿ ನೆರವೆರಿತು.