ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಕುಡಿಯುವ ನೀರಿನ ವ್ಯವಸ್ಥೆ

ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಕುಡಿಯುವ ನೀರಿನ ವ್ಯವಸ್ಥೆ

ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಕುಡಿಯುವ ನೀರಿನ ವ್ಯವಸ್ಥೆ

ಕಲಬುರಗಿ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರು ಹಾಗೂ ಸಮಾಜ ಸೇವಕ ಆನಂದ ವಾರಿಕಅವರ ನೇತೃತ್ವದಲ್ಲಿ ಶ್ರೀ ಶರಣಬಸವೇಶ್ವರರ 203ನೇ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು.  

ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳಿಗೆ ತಂಪಾದ ನೀರು ಪೂರೈಸಿ ಸೇವಾಭಾವನೆ ಮೆರೆದರು. ಈ ಕಾರ್ಯದಲ್ಲಿ **ಶಿವಕುಮಾರ ಬಾಳಿ, ಮಹೇಶ ಪಾಣೆಗಾಂವ, ವಿದ್ಯಾಸಾಗರ ಹಾಬಾಳ, ಅನೀಲ ಗೋಗಿ, ಅಂಬರೀಷ್ ಇಟಗಾ, ಪ್ರಕಾಶ ಹುಣಸಿಗೇರಾ, ಮಹಾಂತೇಶ ಚಾವಣಿಕರ, ಗುಂಡು ಅಣಕಲ, ಸುನೀಲ ಗೋಗಿ, ಕಿರಣಕುಮಾರ್ ಚಿಕಲಿಕರ ಸೇರಿದಂತೆ ಅನೇಕರು ತಮ್ಮ ಸೇವೆ ನೀಡಿದರು.  

ಭಕ್ತಾದಿಗಳಿಗೆ ತಂಪಾದ ಕುಡಿಯುವ ನೀರು ಪೂರೈಸುವ ಸಾಮಾಜಿಕ ಸೇವೆ ಕುರಿತಾಗಿ ಭಕ್ತರು ಹಾಗೂ ಜಾತ್ರಾರ್ಥಿಗಳು ಅಭಿನಂದನೆ ವ್ಯಕ್ತಪಡಿಸಿದರು.