ಜನರ ಸಂಕಟಕ್ಕೆ ಸ್ಪಂದಿಸಿ ಎಂದು ಮುಖ್ಯಾಧಿಕಾರಿಗೆ ಬಿಜೆಪಿ ಆಹ್ರಹ

ಜನರ ಸಂಕಟಕ್ಕೆ ಸ್ಪಂದಿಸಿ ಎಂದು ಮುಖ್ಯಾಧಿಕಾರಿಗೆ ಬಿಜೆಪಿ ಆಹ್ರಹ
ವಾಡಿ: ಪಟ್ಟಣದ ಪುರಸಭೆ ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳ ಒದಗಿಸುವಲ್ಲಿ ವಿಫಲವಾಗುತ್ತಿದೆ ಇದನ್ನು ಸರಿಪಡಿಸಿ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮತ್ತು ಮುಖಂಡರು ಆಗ್ರಹಿಸಿದರು.
ಅಭಿವೃದ್ಧಿ ಬಗ್ಗೆ ಕೇಳಿದರೆ ಜನಪ್ರತಿನಿಧಿಗಳಿಲ್ಲದ ಕಾರಣ ಕೋಟ್ಯಾಂತರ ರೂಪಾಯಿ ವಾಪಸ ಹೋಗಿದೆ ಅಂತಿರಾ ಈಗಾದರೆ ಇಲ್ಲಿನ ಜನರ ಸಂಕಟಕ್ಕೆ ಪರಿಹಾರ ಎಂದು ಎಂದರು.
ಕುಡಿಯುವ ನೀರು ಸಹ ಮೂರುನಾಲ್ಕು ದಿನಗಳಿಗೊಮ್ಮೆ,ಅದು ರಾಡಿ ನೀರು, ಮತ್ತೆ ನೀರು ಸರಬರಾಜಾದರೆ ಪೈಪ್ ಗಳ ಸೋರಿಕೆ ಅಕಾಲಿಕ ಮಳೆ ಯಿಂದ ಚರಂಡಿ ನೀರು ರಸ್ತೆ ಹಾಗೂ ಮನೆಯೊಳಗೆ,
ಅಸಮರ್ಪಕ ರಸ್ತೆ ಮತ್ತು ಬಿದಿ ದೀಪಗಳು,ಹಂದಿ ನಾಯಿಗಳ ಕಾಟಗಳಂತ ಸಮಸ್ಯೆಗಳ ಆಗರವಾದ ಪಟ್ಟಣವಾಗಿದೆ.
ಇದನ್ನೆಲ್ಲಾ ಸರಿದೂಗಿಸಲು ಇರುವ ಇಲ್ಲಿನ ಪುರಸಭೆಯಲ್ಲಿ ಕೆಲ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದ ಸಾಮಾನ್ಯ ಸಾರ್ವಜನಿಕ ಸವಲತ್ತುಗಳಿಲ್ಲದೆ ಜನರ ಬದುಕು ದುಸ್ತರವಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ನಾಲ್ಕ ಎಕರೆ ಜಮೀನನ್ನು ಖರೀದಿ ಮಾಡಿ ಸುಮಾರು 8- 10ವರ್ಷಗಳಾಯಿತು ಇನ್ನೂ ಕೂಡಾ ಮಾರುಕಟ್ಟೆ ಸ್ಥಾಪನೆ ಹಾಗಿಲ್ಲ,ದೂಡ್ಡ ನಾಮಫಲಕ ಹಾಕಿದ್ದಾರೆ,ಇದರಿಂದ ಸುತ್ತಲಿನ ಹತ್ತಾರ ಹಳ್ಳಿಯ ರೈತರಿಗೆ ಅನುಕೂಲ ವಾಗುತ್ತದೆ ಇದರ ಬಗ್ಗೆ ತಾವು ಮಾಹಿತಿ ನೀಡಿ ಆದಷ್ಟೂ ಬೇಗ ಪ್ರಾರಂಭಿಸಿ. ಬಡ ಅಂಗವಿಕಲರಿಗಾಗಿನ ತ್ರಿಚಕ್ರ ವಾಹನ, ಬಡ ಮಹಿಳೆಯರಿಗಾಗಿನ ಬಟ್ಟೆ ಹೊಲಿಗೆ ಯಂತ್ರ ಹಾಗೂ ಕಸದ ಬುಟ್ಟಿ ಖರೀದಿಯಲ್ಲಿ ಹಾಗೂ ಡಿಸೇಲ್ ಬಳಕೆಯಲ್ಲಿನ ಅವ್ಯವಹಾರದ ಆರೋಪ ಇರುವುದರಿಂದ ಅದರ ಮಾಹಿತಿ ಕೇಳಿದರು,ಆದಷ್ಟೂ ಬೇಗ ಇಂತಹ ಸಮಸ್ಯೆಗಳಿಗೆ ಸ್ಪಂದಿಸಿ,ಇಲ್ಲದಿದ್ದರೆ ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಪುರಸಭೆ ಮಾಜಿ ಸದಸ್ಯರಾದ ಕಿಶನ್ ಜಾಧವ,ಅಂಬದಾಸ ಜಾಧವ,ಹರಿ ಗಲಾಂಡೆ,ಮುಖಂಡ ಮಲ್ಲಿಕಾರ್ಜುನ ಸಾತಖೇಡ ಇದ್ದರು.