ಕೋವಿಡ್-19 ವೆಚ್ಚ ಮರುಪಾವತಿ ಆಗದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಸಿಬ್ಬಂದಿಗಳ ಧರಣಿ

ಕೋವಿಡ್-19 ವೆಚ್ಚ ಮರುಪಾವತಿ ಆಗದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಸಿಬ್ಬಂದಿಗಳ ಧರಣಿ
ಕಲಬುರಗಿ: ಕೋವಿಡ್-19 ಸೋಂಕಿನ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆಗೆ ಖರ್ಚು ಮಾಡಿರುವ ರೂ. 32,40,000 ಮರುಪಾವತಿಯಾಗದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿಗಳು ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ.
ವಿಶ್ವವಿದ್ಯಾಲಯದ ಸಿದ್ಧಪ್ಪ ಎಂ. ದೊಡ್ಡಮನಿ, ಎಐ ದಮುದ್ದಿನ, ಸಿದ್ದಯ್ಯ ಸ್ವಾಮಿ, ರಿಷಿಕುಮಾರ, ಬಸವರಾಜ ಕೆ, ರಾಧಾಕೃಷ್ಣ, ಶ್ರೀದೇವಿ, ಸುವರ್ಣಾ, ಚಂದಮ್ಮ ಬಿರಾದಾರ, ಕೀಶೋರ ಸೇರಿದಂತೆ ಹಲವಾರು ಸಿಬ್ಬಂದಿಗಳು ಈ ಧರಣಿಯಲ್ಲಿ ಭಾಗವಹಿಸಿದ್ದರು.
ಕೋವಿಡ್-19 ಕಾಲದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಭಾರಿ ಮೊತ್ತದ ವೆಚ್ಚ ಮಾಡಿದ್ದರೂ, ಅದನ್ನು ಸರಕಾರ ಅಥವಾ ಸಂಬಂಧಿತ ಪ್ರಾಧಿಕಾರಗಳು ಇನ್ನೂ ಮರುಪಾವತಿ ಮಾಡಿಲ್ಲ. ಈ ಅನ್ಯಾಯಕ್ಕೆ ತಕ್ಷಣ ಪರಿಹಾರ ಒದಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಿಬ್ಬಂದಿಯರು ಮರುಪಾವತಿ ಮತ್ತು ನ್ಯಾಯ ದೊರಕಿಸುವವರೆಗೆ ಧರಣಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ.