ಜನ್ಮದಿನ ಸಮಾಜಕ್ಕೆ ಮಾದರಿಯಾಗಲಿ : ಗಿರಿರಾಜ ಯಳಿಮೇಲಿ

ಜನ್ಮದಿನ ಸಮಾಜಕ್ಕೆ ಮಾದರಿಯಾಗಲಿ : ಗಿರಿರಾಜ  ಯಳಿಮೇಲಿ

ಜನ್ಮದಿನ ಸಮಾಜಕ್ಕೆ ಮಾದರಿಯಾಗಲಿ : ಗಿರಿರಾಜ ಯಳಿಮೇಲಿ  ಅನಿಸಿಕೆ

ಕಲಬುರಗಿ, ಆಗಸ್ಟ್ : 8 ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ ಆದರೆ ಇದರ ನಡುವೆ ನಮ್ಮ ಬದುಕು ಇನ್ನೊಬ್ಬರಿಗೆ ಮಾದರಿಯಾಗಲಿ ಅವರು ಸಮಾಜಕ್ಕೆ ನೀಡುವ ಕೊಡುಗೆಯು ವ್ಯಕ್ತಿಯ ನಿಜವಾದ ಮೌಲ್ಯವನ್ನು ನಿರ್ಧರಿಸುತ್ತದೆ ಎಂದು ಸಮಾಜ ಸೇವಕ ಗಿರಿರಾಜ ಯಳಿಮೇಲಿ ಹೇಳಿದರು.

ನಗರದ ಸಪ್ತಗಿರಿ ಹೋಟೆಲ್‌ನಲ್ಲಿ ಇಂದು ಸಂಜೆ ಕಸಾಪ ಪದಾಧಿಕಾರಿಗಳಾದ ಶರಣರಾಜ್ ಛಪ್ಪರಬಂದಿ ಹಾಗೂ ಕಲ್ಯಾಣರಾವ್ ಶೀಲವಂತ ಅವರ ಜನ್ಮದಿನೋತ್ಸವ ಮತ್ತು ಮಲ್ಲಿಕಾರ್ಜುನ ಡೊಣ್ಣುರ್ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದ ಪ್ರಯುಕ್ತ ನಾಲ್ಕು ಚಕ್ರ ತಂಡದ ಮುಖ್ಯಸ್ಥೆ ಮಾಲಾ ಕಣ್ಣಿ ನೇತೃತ್ವದಲ್ಲಿ ಏರ್ಪಡಿಸಿದ್ದ 'ಅಭಿನಂದನಾ ಸಮಾರಂಭ' ವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅತಿಥಿಗಳು, “ಜನ್ಮದಿನವನ್ನು ಕೇವಲ ಆಚರಣೆಗಾಗಿ ಮಾತ್ರವಲ್ಲ, ಸಮಾಜಮುಖಿ ಚಟುವಟಿಕೆಗಳ ಮೂಲಕ ಇತರರಿಗೆ ಸಹಾಯ ಮಾಡಲು ಪ್ರಯತ್ನಿಸಬೇಕು” ಎಂದು ನುಡಿದರು. ಡಾಕ್ಟರೇಟ್ ಪದವಿ ಪಡೆದ ಮಲ್ಲಿಕಾರ್ಜುನ ಡೊಣ್ಣುರ್ ಅವರ ಪರಿಶ್ರಮ, ಹಾಗೂ ಸಾಧನೆಗಳನ್ನು ಪ್ರಶಂಸಿಸಿದರು. 

ಅಭಿನಂದಿತರಾದ ಶರಣರಾಜ್ ಛಪ್ಪರಬಂದಿ, ಕಲ್ಯಾಣರಾವ್ ಶೀಲವಂತ ಹಾಗೂ ಮಲ್ಲಿಕಾರ್ಜುನ ಡೊಣ್ಣುರ್ ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಶಾಲು ಹೊದಿಸಿ ಹೂಗುಚ್ಚ ನೀಡುವ ಮೂಲಕ ಗೌರವಿಸಿ ಶುಭ ಹಾರೈಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು, ಪತ್ರಕರ್ತ ಶರಣಗೌಡ ಪಾಟೀಲ ಪಾಳಾ , ಸಿದ್ದಲಿಂಗ ಮಲಶೆಟ್ಟಿ, ಜವಳಿ ಮತ್ತು ಕಾರ್ಯಕ್ರಮದ ರೂವಾರಿ ಮಾಲಾ ಕಣ್ಣಿ ಅವರು ಮಾತನಾಡಿದರು,

ರಾಜುಗೌಡ ನಾಗನಳ್ಳಿ, ಪ್ರಕಾಶ್ ಪಾಟೀಲ, ಕಲ್ಯಾಣರಾವ ಶೀಲವಂತ, ಚರಣರಾಜ ಚಪ್ಪರಬಂದಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಈ ವೇಳೆ ಬಸವಂತರಾಯ ಕೋಳಕೂರ, ಅಣವೀರ ಪಾಟೀಲ ಜಗತ್, ವಿಜಯಲಕ್ಷ್ಮಿ ಹಿರೇಮಠ, ಶೀಲಾ ಕಲಬುರಗಿ, ಸ್ವಾತಿ ಮಾಹಾಗಾಂವ, ಸವಿತಾ ನಾಶಿ,ಅಂಬುಜಾ ಅವರು ಕವನ ವಾಚನ ಮಾಡಿದರು.  ಮುಖಂಡ ವಿಶ್ವನಾಥ್ ಗೌನಳ್ಳಿ ನಿರೂಪಿಸಿದರು.