ಮಹಾದಾಸೋಹಿ ಶರಣಬಸವೇಶ್ವರರ 203ನೇ ಜಾತ್ರಾ ಮಹೋತ್ಸವ: ಭಕ್ತಿಭಾವದಿಂದ ರಥೋತ್ಸವ

ಮಹಾದಾಸೋಹಿ ಶರಣಬಸವೇಶ್ವರರ 203ನೇ ಜಾತ್ರಾ ಮಹೋತ್ಸವ: ಭಕ್ತಿಭಾವದಿಂದ ರಥೋತ್ಸವ

ಮಹಾದಾಸೋಹಿ ಶರಣಬಸವೇಶ್ವರರ 203ನೇ ಜಾತ್ರಾ ಮಹೋತ್ಸವ: ಭಕ್ತಿಭಾವದಿಂದ ರಥೋತ್ಸವ 

ಕಲಬುರಗಿ: ಮಹಾದಾಸೋಹಿ ಶರಣಬಸವೇಶ್ವರರ 203ನೇ ಜಾತ್ರಾ ಮಹೋತ್ಸವ ದ ಅಂಗವಾಗಿ ಬುಧವಾರ ಸಂಜೆ ಅದ್ದೂರಿಯಾಗಿ ರಥೋತ್ಸವ ನಡೆಯಿತು.  

ಭಕ್ತರ ಘೋಷಣೆಗಳು, ದೇವರ ನಾಮಸ್ಮರಣೆ ಮತ್ತು ಭಕ್ತಿ ಪರವಶತೆಯ ನಡುವೆ ಶರಣಬಸವೇಶ್ವರರ ರಥ ಬಿಕ್ಕು ಬಿಕ್ಕುತ್ತಾ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಂಚರಿಸಿತು. ಸಾವಿರಾರು ಭಕ್ತರು ಈ ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳುವ ಮೂಲಕ ಶರಣಬಸವೇಶ್ವರರ ಕೃಪೆಗೆ ಭಾಜನರಾದರು.  

ಈ ಸಂದರ್ಭದಲ್ಲಿ ಶರಣಬಸವೇಶ್ವರ ದೇವಾಲಯದ ಆಡಳಿತ ಮಂಡಳಿ ಸದಸ್ಯರು, ವಿವಿಧ ಗಣ್ಯರು, ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.  

(ಚಿತ್ರ: ಮಂಜುನಾಥ ಜಮಾದಾರ)