ಜಯನಗರ ಬಡಾವಣೆಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳವಂತೆ ಒತ್ತಾಯಿಸಿ ಶಾಸಕರಿಗೆ ಮನವಿ ಪತ್ರ

ಜಯನಗರ ಬಡಾವಣೆಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳವಂತೆ ಒತ್ತಾಯಿಸಿ ಶಾಸಕರಿಗೆ ಮನವಿ ಪತ್ರ
ಕಲಬುರಗಿ: ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಸೇಡಂ ರಸ್ತೆಯ ಜಯನಗರ ಬಡಾವಣೆಯಲ್ಲಿ ಶಾಸಕರ ಅನುದಾನದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರಿಗೆ (ಶಾಸಕರ ಪರವಾಗಿ ಆಪ್ತ ಕಾರ್ಯದರ್ಶಿ ಶಂಕರ ಮನವಿ ಸ್ವೀಕರಿಸಿದರು)ಮನವಿ ಪತ್ರ ಸಲ್ಲಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಸಲ್ಲಿಸಿದ ಮನವಿಯಲ್ಲಿ ಜಯನಗರ ಶಿವಮಂದಿರ ಆವರಣದಲ್ಲಿ ನೂತನವಾಗಿ ಸಾರ್ವಜನಿಕ ಗ್ರಂಥಾಲಯ ನಿರ್ಮಾಣ, ಇದೇ ಆವರಣದಲ್ಲಿ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರು ಪೂರೈಸಲು ಹೊಸ ಕೊಳವೆ ಬಾವಿ ಕೊರೆಸುವಂತೆ, ಹಳೆಯದಾದ ಸಾರ್ವಜನಿಕ ಉದ್ಯಾನವನ ನವಿರಣಕ್ಕೆ ಅನುದಾನ ಮಂಜೂರು ಮಾಡುವಂತೆ ಮತ್ತು ಜಯನಗರ ಬಡಾವಣೆಯಲ್ಲಿ ಸರಿಯಾದ ಬೀದಿ ದೀಪ ಅಳವಡಿಸುವುದು ಸೇರಿದಂತೆ ಅನೇಕ ಮೂಲಭೂತ ಸೌಕರ್ಯ ಒದಗಿಸುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಈ ಮೊದಲು ಶಾಸಕರ ಗಮನಕ್ಕೆ ತರಲಾಗಿತ್ತು.ಆಶ್ವಾಸನೆ ಕೊಟ್ಟಿದ್ದರು.ಆದರೆ ಯಾವ ಅಭಿವೃದ್ಧಿ ಯೋಜನೆಗಳನ್ನು ಇಲ್ಲಿವರೆಗೆ ಜಾರಿಗೆ ತಂದಿಲ್ಲ.ಕೂಡಲೇ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವಂತೆ ಶಾಸಕರಿಗೆ ಒತ್ತಾಯಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ತಿಳಿಸಿದರು.
ಟ್ರಸ್ಟ್ ಉಪಾಧ್ಯಕ್ಷ ವೀರೇಶ ದಂಡೋತಿ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ, ಸಂಘಟನಾ ಕಾರ್ಯದರ್ಶಿ ಬಂಡಪ್ಪ ಕೇಸೂರ, ಕೋಶಾಧ್ಯಕ್ಷ ಬಸವರಾಜ ಮಾಗಿ, ಸಿದ್ಧಲಿಂಗ ಗುಬ್ಬಿ, ವೀರಪ್ಪ ಹುಡುಗಿ,ನಾಗರಾಜ ಖೂಬಾ,ಮಲ್ಲಯ್ಯ ಸ್ವಾಮಿ ಗಂಗಾಧರಮಠ,ಶ್ರವಣಕುಮಾರ ಸೇರಿದಂತೆ ಇತರರು ಇದ್ದರು.