ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿಯ ಮಜದೂರ ಸೆಲ್‌ನ್ ರಾಜ್ಯಾಧ್ಯಕ್ಷರಾಗಿ ರಾಜು ಎಸ್ ಲೆಂಗಟಿ ನೇಮಕ
ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿಯ ಮಜದೂರ ಸೆಲ್‌ನ್ ರಾಜ್ಯಾಧ್ಯಕ್ಷರಾಗಿ ರಾಜು ಎಸ್ ಲೆಂಗಟಿ ನೇಮಕ
ಕಲಬುರಗಿ: ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿಯ ಮಜದೂರ ಸೆಲ್‌ನ್ ರಾಜ್ಯಾಧ್ಯಕ್ಷರಾಗಿ ಕಲಬುರಗಿ ದಲಿತ ಮುಖಂಡ ರಾಜು ಎಸ್ ಲೆಂಗಟಿ ಅವರನ್ನು ನೇಮಕ ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸುಭಾಷ್ ಬಿಹಾರಿ ಅವರು ಆದೇಶ ಹೊರಡಿಸಿದ್ದಾರೆ.
ಈ ಕುರಿತು ಅಧಿಕೃತ ಆದೇಶ ಪತ್ರ ನೀಡಿದ ಸುಭಾಷ್ ಬಿಹಾರಿ ಅವರು, ರಾಜು ಎಸ್ ಲೆಂಗಟಿ ಅವರನ್ನು ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿಯ ಮಜದೂರ ಸೆಲ್‌ನ್ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಶ್ರದ್ಧೆಯಿಂದ ಜನಸೇವೆಯ ಜೊತಗೆ ಕರ್ನಾಟಕ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಲು ಶ್ರಮಿಸುವರೆಂಭ ಭರವಸೆ ಇದೆ ಎಂದು ಉಲ್ಲೇಖಿಸಿದ್ದಾರೆ.
ರಾಜು ಲೆಂಗಟಿ ಅವರು ಈ ಹಿಂದೆ ದಲಿತ ಸಂಘಟನೆಯೊAದ ವಿವಿಧ ಹುದ್ದೆಗಳಲ್ಲಿ ಸಮರ್ಥವಾಗಿ ನಿಭಾಯಿಸಿ, ಶೋಷಿತರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಅವರನ್ನು ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿಯ ಮಜದೂರ ಸೆಲ್‌ನ್ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.