ಪ್ರಚಾರ ವಿಲ್ಲದೆ ಬಡವರ ನೋವಿಗೆ ಸ್ಪಂದಿಸಿದ ಪುನೀತ್ :..

ಪ್ರಚಾರ ವಿಲ್ಲದೆ ಬಡವರ ನೋವಿಗೆ ಸ್ಪಂದಿಸಿದ ಪುನೀತ್ :..

|ಪುನಿತ್ ರಾಜಕುಮಾರ 50ನೇ ಹುಟ್ಟು ಹಬ್ಬ ಆಚರಣೆ|

ಪ್ರಚಾರ ವಿಲ್ಲದೆ ಬಡವರ ನೋವಿಗೆ ಸ್ಪಂದಿಸಿದ ಪುನೀತ್ :.. 

ಶಹಾಬಾದ : - ನಟ ದಿವಂಗತ ಪುನೀತ್‌ ರಾಜಕುಮಾರ್‌ ರವರ 50ನೇ ಹುಟ್ಟು ಹಬ್ಬದ ಪ್ರಯುಕ್ತ ನಗರದ ಚುನ್ನಾಬಟ್ಟಿ ಯುವ ಅಭಿಮಾನಿಗಳ ವತಿಯಿಂದ ಅನ್ನ ದಾಸೋಹ ಸೇರಿದಂತೆ ವಿವಿಧ ಸ್ಮರಣೀಯ ಕಾರ್ಯಕ್ರಮಗಳು ನಡೆದವು.

ನಗರದ ಬಸ್ ನಿಲ್ದಾಣದ ಹತ್ತಿರ ದೊಡ್ಡ ಕಟ್ ಔಟ್ ಹಾಕಿ, ಮಾಲಾರ್ಪಣೆ ಜೊತೆ ಹಾಲಿನ ಅಭಿಷೇಕ ಮಾಡಿ, ಕೇಕ್ ಕತ್ತರಿಸಿ, ಅನ್ನಸಂತರ್ಪಣೆ ಮಾಡಿದರು. 

ಪುನಿತ್ ರಾಜಕುಮಾರ ರವರ ಅಭಿಮಾನಿ ಲಕ್ಷ್ಮಿಕಾಂತ ಬಳಿಚಕ್ರ ಮಾತನಾಡಿ, ಯಾವುದೇ ಪ್ರಚಾರ ಇಲ್ಲದೆ ಸಾವಿರಾರು ಕುಟುಂಬಗಳ ನೋವಿಗೆ ಸ್ಪಂದಿಸಿದ್ದರು, ತಮ್ಮ ದುಡಿಮೆಯ ಪಾಲನ್ನು ಸಮಾಜ ಸೇವೆಗೆ ಮೀಸಲಿಡುವ ಮೂಲಕ ಮರಣದ ನಂತರವೂ ಜೀವಂತವಾಗಿದ್ದಾರೆ ಎಂದು ಸ್ಮರಿಸಿದರು.

ಸಾವಿನ ನಂತರ ಅವರು ಮಾಡಿದ ಸೇವೆಯ ಬಗ್ಗೆ ಎಲ್ಲರಿಗೂ ತಿಳಿಯಿತು, ಪುನೀತ್‌ ಬದುಕಿದ ರೀತಿ ಇಂದಿನ ಯುವಕರಿಗೆ ಸ್ಫೂರ್ತಿ ಹಾಗೆ ಮಾದರಿ ಆಗಬೇಕಾಗಿದೆ, ಅವರ ಹಾದಿಯಲ್ಲಿ ಸಾಗುವ ಮೂಲಕ ಯುವಕರು ಸಮಾಜಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಬೇಕು ಎಂದರು. 

ನಗರದ ಎಲ್ಲೆಡೆ ಪುನೀತ್‌ ಅವರು ನಟಿಸಿದ ಚಿತ್ರಗಳ ಬಗ್ಗೆ ಹಾಗೂ ಸಾಮಾಜಿಕ ಕಾರ್ಯಗಳನ್ನು ಮೆಲುಕು ಹಾಕಲಾಯಿತು, ಪ್ರಮುಖ ವೃತ್ತಗಳಲ್ಲಿ ಪುನೀತ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕೇಕ್‌ ಕತ್ತರಿಸುವ ಮೂಲಕ ಪುನಿತ್ ಅಭಿಮಾನಿಗಳು ಖುಷಿಪಟ್ಟರು.

ಈ ಸಂಧರ್ಭದಲ್ಲಿ ಶಿವನಾಗ ದುಪಲ್ಲಿ, ರವಿ ತಾತಳಗೇರಿ, ಬಸವರಾಜ ತುಮಕೂರ, ಶ್ರೀಕಾಂತ ಹಿರೇನೂರ, ಸಿದ್ದಾರ್ಥ ಸಜ್ಜನ, ಸೇರಿದಂತೆ ನೂರಾರು ಯುವಕರು ಉಪಸ್ಥಿತರಿದ್ದರು.