ಕಲಬುರ್ಗಿಯಲ್ಲಿ ಐತಿಹಾಸಿಕ ಕವಿಗೊಷ್ಠಿ

ಕಲಬುರ್ಗಿಯಲ್ಲಿ ಐತಿಹಾಸಿಕ ಕವಿಗೊಷ್ಠಿ

ಕಲಬುರ್ಗಿಯಲ್ಲಿ ಐತಿಹಾಸಿಕ ಕವಿಗೊಷ್ಠಿ

ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ ರಾಜ್ಯ ಘಟಕ ಕಲಬುರ್ಗಿ ವತಿಯಿಂದ, ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ನಡೆದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ 107 ಕವಿಗಳು ಭಾಗವಹಿಸಿ ತಮ್ಮ ಕವನ ವಚನ ಮಾಡಿದರು. ಕಾರ್ಯಕ್ರಮವು ವಿಜೃಂಭಣೆಯಿಂದ ಅಚ್ಚುಕಟ್ಟಾಗಿ ಅದ್ಭುತವಾಗಿ ಮೂಡಿ ಬಂತು. ಉದ್ಘಾಟಕರಾಗಿ ಡಾ. ಸುರೇಶ್ ಎಲ್ ಶರ್ಮ ಅಧೀಕ್ಷಕ ಅಭಿಯಂತರರು ಲೋಕೋಪಯೋಗಿ ಇಲಾಖೆ ವೃತ್ತ ಕಲಬುರಗಿ, ಡಾ. ಶರಣಬಸಪ್ಪ ಕ್ಯಾತನಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಕಲಬುರಗಿ, ಅಮರೇಶ್ವರ ಬಿ ಚಿಂಚನಸೂರ್, ಉದ್ದಿಮೆದಾರರು, ಅಧ್ಯಕ್ಷರು ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆ ಚಿತ್ತಾಪುರ, ನಾಗಮೂರ್ತಿ ಕೆ ಎಸ್ ಸಹಾಯಕ ಕಾರ್ಯಪಾಲಕ ನಿಯಂತರ ಪಂ. ಇಂ. ಉಪ ವಿಭಾಗ ಜೇವರ್ಗಿ, ಸಂಜೀವ್ ಟಿ ಮಾಲೆ ಅಧ್ಯಕ್ಷರು ಕೆ ಎಸ್ ಎಸ್ ಡಿ ಕಲಬುರಗಿ, ಹಿರಿಯ ಕವಿಗಳು ಪ್ರಕಾಶಕರು ಆಳಂದ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಧರ್ಮಣ್ಣ ಎಚ್ ಧನ್ನಿ ಕವಿಗೋಷ್ಠಿಯ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದ ನೇತೃತ್ವವನ್ನು ಸಂಸ್ಥಾಪಕರಾಧ್ಯಕ್ಷರಾದ ಗುರಪಾದ ಕೋಗನೂರು ರವರು ವಹಿಸಿದ್ದರು, ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ ಕರೆಡ್ಡಿ, ಕೋಶಾಧ್ಯಕ್ಷರು, ಝಾಕಿರ್, ಹುಸೇನ್ ಕುಪನೂರ, ಸಹಕಾರದರ್ಶಿ ಮೈಲಾರಲಿಂಗ ರಾಜೇಂದ್ರ ಕೊರಬಾ. ಹಾಗೂ SKUPS ನ ರಾಜ್ಯ, ಜಿಲ್ಲಾ, ತಾಲೂಕಿನ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 

ರವಿಕುಮಾರ್ ಹೂಗಾರ್ ಅವರು. ನಿರೂಪಿಸಿದರು ವೆಂಕಟರೆಡ್ಡಿ ಸ್ವಾಗತಿಸಿದರು ಜಾಕಿರ್ ಹುಸೇನ್ ವಂದಿಸಿದರು.