ಕಲಬುರ್ಗಿಯ ಕೋಟೆ ಸಂರಕ್ಷಿಸಿ ಹಾಗೂ ಪಾರಂಪರಿಕ ತಾಣವಾಗಿ ಅಭಿವೃದ್ಧಿಪಡಿಸಿ : ಡಾ.ಸುಧಾ ಆರ್. ಹಾಲಕಾಯಿ

ಕಲಬುರ್ಗಿಯ ಕೋಟೆ ಸಂರಕ್ಷಿಸಿ ಹಾಗೂ ಪಾರಂಪರಿಕ ತಾಣವಾಗಿ ಅಭಿವೃದ್ಧಿಪಡಿಸಿ : ಡಾ.ಸುಧಾ ಆರ್. ಹಾಲಕಾಯಿ

ಕಲಬುರ್ಗಿಯ ಕೋಟೆ ಸಂರಕ್ಷಿಸಿ ಹಾಗೂ ಪಾರಂಪರಿಕ ತಾಣವಾಗಿ ಅಭಿವೃದ್ಧಿಪಡಿಸಿ : ಡಾ.ಸುಧಾ ಆರ್. ಹಾಲಕಾಯಿ

ಕಲಬುರಗಿ: ಇವತ್ತು ವಿಶ್ವ ಪ್ರವಾಸೋದ್ಯಮ ದಿನ. ಆದರೆ ಕರ್ನಾಟಕದ ಪ್ರಸ್ತುತ ಸರ್ಕಾರ ಪ್ರವಾಸೋದ್ಯಮಕ್ಕೆ ಅತ್ಯಂತ ಮಹತ್ವವನ್ನು ಕೊಡಬೇಕಾದಂತಹ ಸರ್ಕಾರ, ತನ್ನ ವೋಟ್ ಬ್ಯಾಂಕಿನ ಸಲುವಾಗಿ ನಿರ್ಲಕ್ಷ್ಯ ವಹಿಸುತ್ತಿದೆ. ಮಾಡಿದಂತಹ, ಜಗತ್ತಿನಲ್ಲೇ ಎರಡನೆಯ ಅತ್ಯಂತ ದೊಡ್ಡದಾದ ಮಸೀದಿ-ಜಾಮಿಯಾ ಮಸೀದಿ ಕರ್ನಾಟಕದ ಕಲ್ಬುರ್ಗಿಯಲ್ಲಿ ಇರುವುದು ನಮಗೆ ತಿಳಿದಿದೆ. ಈ ತಾಣವನ್ನು ಯುನೆಸ್ಕೊ ಪಟ್ಟಿಯಲ್ಲಿ ತಾತ್ಕಾಲಿಕವಾಗಿ ಸೇರಿಸಿರುವ ಒಂದು ಐತಿಹಾಸಿಕ ಸಂಗತಿಯನ್ನು ಆದರಣೀಯ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್‌ನಲ್ಲಿ ಪ್ರಸ್ತಾಪಿಸಿದ್ದರು. ಎಂದು ಬಿಜೆಪಿ ಕರ್ನಾಟಕ ರಾಜ್ಯ ವಕ್ತಾರರಾದ ಡಾ. ಸುಧಾ ಆರ್. ಹಾಲಕಾಯಿ ಹೇಳಿದರು.

ಆದರೆ ಆ ಕೋಟೆಯೊಳಗೆ ಅಕ್ರಮವಾಗಿ ನೆಲೆಸಿರುವ 282 ಮನೆಗಳನ್ನು ತೆರವು ಮಾಡಿದರೆ ಸಹಜವಾಗಿಯೇ ಈ ಕೋಟೆ ಯುನೆಸ್ಕೋ ಪಟ್ಟಿಯಲ್ಲಿ ಸೇರುತ್ತದೆ. ಆದರೆ ವೋಟ್ ಬ್ಯಾಂಕ್ ಸಲುವಾಗಿ ಕಾಂಗ್ರೆಸ್ ಸರ್ಕಾರ ತನ್ನ ಕೀಳು ರಾಜಕೀಯವನ್ನು ಮಾಡುತ್ತಿದೆ. ಈ ಕೋಟೆಯೊಳಗೆ ಅನಧಿಕೃತವಾಗಿ ವಾಸ ಮಾಡುತ್ತಿರುವತಂಹ ಮುಸ್ಲಿಮರ ಮನೆಗಳನ್ನು ತನ್ನ ವೋಟ್ ಬ್ಯಾಂಕಿನ ಸಲುವಾಗಿ ಕಾಂಗ್ರೆಸ್ ಸರ್ಕಾರವು ತೆರವು ಮಾಡುತ್ತಿಲ್ಲ. 2019ರಲ್ಲಿ ರಾಜ್ಯ ಹೈಕೋರ್ಟ್ ಬಹಳ ಸ್ಪಷ್ಟವಾಗಿ ಆ ಮನೆಗಳನ್ನು ತೆರವು ಮಾಡಬೇಕೆಂದು ಆದೇಶವನ್ನು ಕೊಟ್ಟಿದ್ದರೂ ಸಹ ಇಲ್ಲಿಯವರೆಗೂ ಸರ್ಕಾರ ಯಾವುದೇ ರೀತಿಯ ಪ್ರಯತ್ನ ಮಾಡದೆ ತನ್ನ ಜಾಣ ಕುರುಡು ನೀತಿಯನ್ನು ಮುಂದುವರಿಸುತ್ತಿರುವುದು ಸರ್ಕಾರದ ನಿರ್ಲಕ್ಷ್ಯದ ಧೋರಣೆಗೆ ಹಿಡಿದ ಕನ್ನಡಿಯಾಗಿದೆ. 

ಕಳೆದ ಎರಡು ವರ್ಷಗಳಿಂದ ಕರ್ನಾಟಕ ರಾಜ್ಯ ಸರ್ಕಾರ ಒಳಗಡೆ ರಾಜ್ಯ ಸರ್ಕಾರದ ಮೊದಲ ನೀತಿಯ ತುಷ್ಟೀಕರಣ ಅದು ಎಂತಹುದೇ ಹಿಂಸಾಚಾರವಾಗಲಿ, ಭಯೋತ್ಪಾದನೆ ಆಗಲಿ, ಸಂಪನ್ಮೂಲ ಹಚಿಕೆಯ ವಿಷಯವಾಗಲಿ- ಪ್ರತಿಯೊಂದರಲ್ಲೂ ಕೂಡ ಒಂದು ಸಮುದಾಯವನ್ನು ಓಲೈಕೆ ಮಾಡುವ ದಿಶೆಯಲ್ಲಿ ಈ ರಾಜ್ಯ ಸರ್ಕಾರ ನಿರತವಾಗಿರುವುದು ನಮಗೆ ಕಂಡುಬರುವAತಹ ವಿಷಯ. 

ಇಂತಹ ವಿಶ್ವ ಮಾನ್ಯತೆ ಪಡೆಯುವಂತಹ ಅವಕಾಶ ಭಾರತಕ್ಕೆ ಲಭ್ಯವಾಗಿದ್ದರೂ ಕೂಡ ಕರ್ನಾಟಕ ಸರ್ಕಾರ ಅನಾದರ ಧೋರಣೆಯಿಂದ ಕಲ್ಬುರ್ಗಿ ಒಳಗಿನ ಈ ಒಂದು ಐತಿಹಾಸಿಕ ಕೋಟೆಯನ್ನು ಪ್ರಧಾನಿ ಮೋದಿಯವರು ತಮ್ಮ ಮನ್ ಕೀ ಬಾತ್ ನಲ್ಲಿ ವಿಶ್ವ ಪ್ರಖ್ಯಾತಿ ಮಾಡಿರುವಂತಹ ಈ ಸ್ಥಳವನ್ನು ತಕ್ಷಣ ಜಿಲ್ಲಾಡಳಿತ ರಾಜ್ಯ ಸರ್ಕಾರ ತನ್ನ ವೋಟ್ ಬ್ಯಾಂಕಿನ ನೀತಿಯನ್ನು ಬದಿಗಿಟ್ಟು, ಅನಧಿಕೃತವಾಗಿ ವಾಸ ಮಾಡುವವರನ್ನು ಕೂಡಲೇ ತೆರವುಗೊಳಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ. ಕೋಟೆಯನ್ನು ಸಂರಕ್ಷಣೆ ಮಾಡಿ ಅದನ್ನು ಸುಂದರಗೊಳಿಸಿ ಕಲ್ಯಾಣ ಕರ್ನಾಟಕಕ್ಕೆ ಒಂದು ಕಿರೀಟ ಪ್ರಾಯ ಮಾಡುವಂತಹ ಪ್ರಯತ್ನವನ್ನು ಮಾಡಬೇಕು.

ತನ್ಮೂಲಕ ದೇಶದ ಹಂಪಿ ಮತ್ತು ಬೇರೆ ಬೇರೆ ಪ್ರದೇಶಗಳ ಪ್ರವಾಸೋದ್ಯಮ ತಾಣಗಳಿಗೆ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಕೆಲಸವನ್ನು ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು. ಆ ಮೂಲಕ ವ್ಯಾಪಾರಸ್ಥರಿಗೂ ಅನುಕೂಲ ಪ್ರವಾಸಿಗರಿಗೂ ಅನುಕೂಲವಾಗಿ ಉದ್ಯೋಗಗಳ ಸೃಷ್ಟಿಯಾಗುತ್ತದೆ.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅನಾದರವನ್ನು ಬಿಟ್ಟು ತಕ್ಷಣ ಅಲ್ಲಿ ಅನಧಿಕೃತ ವಾಸ ಮಾಡುತ್ತಿರುವವರಿಗೆ ಬೇರೆ ಕಡೆ ಪುನರ್ವಸತಿ ಮಾಡಿ ಪ್ರವಾಸೋದ್ಯಮಗಳನ್ನು ಬೆಳವಣಿಗೆ ಮಾಡಿ ಕಲ್ಯಾಣ ಕರ್ನಾಟಕ್ಕೆ ಕೊಡುಗೆಯನ್ನಾಗಿ ನೀಡಬೇಕಾಗಿ ಹಾಲಕಾಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.