ನಿಸ್ವಾರ್ಥ ಸಾಮಾಜಿಕ ಸೇವೆಯೇ ನಮ್ಮ ಪಕ್ಷದ ಕಾರ್ಯಕರ್ತರ ಗುಣ: ಬಿ ವೈ ವಿಜಯೇಂದ್ರ
ನಿಸ್ವಾರ್ಥ ಸಾಮಾಜಿಕ ಸೇವೆಯೇ ನಮ್ಮ ಪಕ್ಷದ ಕಾರ್ಯಕರ್ತರ ಗುಣ:
ಬಿ ವೈ ವಿಜಯೇಂದ್ರ
ವಾಡಿ: ಬೆಂಗಳೂರಿನಿಂದ ಹಾಸನ್ ಎಕ್ಸ್‌ಪ್ರೆಸ್ ಮೂಲಕ ಕಲಬುರಗಿಯಲ್ಲಿ ಜರುಗುತ್ತಿರುವ
ವಕ್ಷ್ ಬೋರ್ಡ್ ವಿರುದ್ಧದ ಬೃಹತ್ ಜನಾಂದೋಲನಕ್ಕೆ ತೆರಳುತ್ತಿದ್ದ, ಬಿ ವೈ ವಿಜಯೇಂದ್ರ ಅವರನ್ನು ವಾಡಿ ರೈಲ್ವೆ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು.
ಈ ವೇಳೆಬಿ ವೈ ವಿಜಯೇಂದ್ರ ಅವರು
ಪಕ್ಷ ನಿಷ್ಠೆ, ಪರಿಶ್ರಮದಿಂದ ನಮ್ಮ ಪಕ್ಷದಲ್ಲಿ ಉನ್ನತ ಸ್ಥಾನಕ್ಕೆ ಬರಬಹುದು,ಒಬ್ಬ ಸಾಮಾನ್ಯ ಕಾರ್ಯಕರ್ತನು ಕೂಡ ಉನ್ನತ ಹುದ್ದೆ ಹೊಂದಲು ನಮ್ಮಲ್ಲಿ
ಅವಕಾಶವಿದೆ ಎಂದರು.
ನಿಸ್ವಾರ್ಥ ಸಾಮಾಜಿಕ ಸೇವೆಯೇ ನಮ್ಮ ಪಕ್ಷದ ಕಾರ್ಯಕರ್ತರ ಗುಣವಾಗಿದೆ. ಪಕ್ಷ ನಿಷ್ಠೆ, ಪರಿಶ್ರಮದೊಂದಿಗೆ ನಾಯಕತ್ವ ಸ್ವಭಾವ ಬೆಳೆಸಿಕೊಂಡರೆ ಪಕ್ಷ ದಲ್ಲಿ ಉನ್ನತ ಸ್ಥಾನ ಪಡೆಯಬಹುದು.
ನಿಮ್ಮಂತ ಕಾರ್ಯಕರ್ತರಲ್ಲಿನ ಪಕ್ಷದ ಒಲವು ಹೀಗೆ ಮುಂದುವರಿಯಲಿ, ಶ್ರದ್ದೆ, ಪಕ್ಷ ನಿಷ್ಠೆಯಿಂದ ಕೆಲಸ ಮಾಡಿ ಸಂಘಟನೆಯಲ್ಲಿ ಸಕ್ರಿಯವಾಗಿರಿ,ಪಕ್ಷ ಎಲ್ಲಾ ಗಮಿಸುತ್ತದೆ ಎಂದು ಹೇಳಿದರು.
ಈ ಸಂಧರ್ಬದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ ಬೆಣ್ಣೂರ,ವಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ, ಪ್ರಧಾನ ಕಾರ್ಯದರ್ಶಿ
ರವಿ ನಾಯಕ,ಎಸ್ ಸಿ ಮೂರ್ಚಾ ಅಧ್ಯಕ್ಷ
ದೌಲತರಾವ ಚಿತ್ತಾಪುರಕರ್,
ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ,ಹಾಗೂ ಆನಂದ ಇಂಗಳಗಿ ಸೇರಿದಂತೆ ಇತರರು ಇದ್ದರು.