ಸಂಸತ್ತಿನಲ್ಲಿ ಕೇಂದ್ರಗೃಹ ಸಚಿವ ಅಮಿತ ಷಾ ಹೇಳಿಕೆಗೆ : ಚಂದ್ರು ಜಂಗಲೆ ಖಂಡನೆ

ಸಂಸತ್ತಿನಲ್ಲಿ  ಕೇಂದ್ರಗೃಹ ಸಚಿವ ಅಮಿತ ಷಾ ಹೇಳಿಕೆಗೆ : ಚಂದ್ರು ಜಂಗಲೆ ಖಂಡನೆ

ಸಂಸತ್ತಿನಲ್ಲಿ ಕೇಂದ್ರಗೃಹ ಸಚಿವ ಅಮಿತ ಷಾ ಹೇಳಿಕೆಗೆ : ಚಂದ್ರು ಜಂಗಲೆ ಖಂಡನೆ

ಆಳಂದ: ಅಮಿತ ಷಾ ರವರು ಸಂಸತ್ತಿನಲ್ಲಿ ಮಾತನಾಡುತ್ತ ಅಂಬೇಡ್ಕರ ಅಂಬೇಡ್ಕರ ಅವರ ಹೆಸರನ್ನು ಬಳಸಿದ್ದಷ್ಟು ದೇವರ ಹೆಸರನ್ನು ಬಳಸಿದರೆ ಏಳು ಜನ್ಮದಲ್ಲಿ ಪುಣ್ಯ ಸಿಗುತಿತ್ತು ಎಂದು ಹೇಳಿದ್ದಾರೆ ಇದು ಖಂಡನೀಯ ಡಾ.ಬಾಬಾಸಾಹೇಬ ಅಂಬೇಡ್ಕರ ಸಂವಿಧಾನ ರಚಿಸದಿದ್ದರೆ ನೀವು ಗುಜರಿ ವ್ಯಾಪಾರಿಗಳಾಗಿ ಕೆಲಸ ಮಾಡುತ್ತಿದ್ದಿರಿ ಮೋದಿ ಚಹಾ ಮಾರ್ತಿದ್ದರು ನೀವು ಬಾಬಾಸಾಹೇಬ್ ಅಂಬೇಡ್ಕರ ಸಂವಿಧಾನದ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಮಂತ್ರಿಗಳಾಗಿ ಆಯ್ಕೆ ಆಗ್ತಿರಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡ್ತಿರಿ ಈಗ ರೀತಿ ಹೇಳಿಕೆ ನೀಡ್ತಿರಿ ಇದು ನಾಚಿಕೆಗೇಡಿನ ಸಂಗತಿ. ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದಿರಿ ಎಂಬುದು ಜನರಿಗೆ ತಿಳಿಸಿದ್ದಿರಿ ನೀವು ಕ್ಷಮೆ ಕೇಳಬೇಕು ಮತ್ತು ರಾಜಿನಾಮೆ ನೀಡಬೇಕು ಡಾ.ಬಾಬಾಸಾಹೇಬ ಅಂಬೇಡ್ಕರ ಮತ್ತು ಸಂವಿಧಾನ ಬಗ್ಗೆ ಹಗುರವಾಗಿ ಮಾತಾಡಿದ್ರೆ ನಮ್ಮ ಸಮುದಾಯ ಉಗ್ರವಾದ ಹೋರಾಟ ಮೂಲಕ ನಿಮಗೆ ಉತ್ತರ ನೀಡುತ್ತೇವೆ ಮತ್ತು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಛಲವಾದಿ ಮಹಾಸಭಾದ ಆಳಂದ ತಾಲ್ಲೂಕಿನ ಅಧ್ಯಕ್ಷ ಚಂದ್ರು ಜಂಗಲೆ ಹೇಳಿದರು.