ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಜನಪರ ಕಾರ್ಯ ನಡೆಸುತ್ತಿದೆ: ಪ್ರಭು ಚವ್ಹಾಣ ಅಭಿಮತ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಜನಪರ ಕಾರ್ಯ ನಡೆಸುತ್ತಿದೆ: ಪ್ರಭು ಚವ್ಹಾಣ  ಅಭಿಮತ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಜನಪರ ಕಾರ್ಯ ನಡೆಸುತ್ತಿದೆ: ಪ್ರಭು ಚವ್ಹಾಣ ಅಭಿಮತ

ಕಮಲನಗರ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅನೇಕ ಜನೋಪಕಾರಿ ಕಾರ್ಯಗಳು ಜರುಗುತ್ತಿವೆ. ಪೂಜ್ಯ ಡಾ. ವಿರೇಂದ್ರ ಹೆಗ್ಗಡೆಯವರು ಮಹಿಳೆಯರ ಸ್ವಾವಲಂಭಿ ಬದುಕು ಸೇರಿದಂತೆ ಇನ್ನಿತರ ಹಲವಾರು ಜನಪರ ಯೋಜನೆಗಳನ್ನು ಹಮ್ಮಿಕೊಂಡು ಜನರ ಮನೆ ಬಾಗಿಲಿಗೆ ಮುಟ್ಟಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಶಾಸಕ ಪ್ರಭು ಚವ್ಹಾಣ್ ನುಡಿದರು. 

ತಾಲ್ಲೂಕಿನ ಠಾಣಾಕುಶನೂರು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ರವಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಔರಾದ್ ತಾಲೂಕು ವತಿಯಿಂದ ಏರ್ಪಡಿಸಿದ ಮಹಿಳಾ ವಿಚಾರಗೋಷ್ಠಿ ಹಾಗೂ ಪೂಜಾ ಕಾರ್ಯಕ್ರಮಕ್ಕೆ ಜ್ಯೋತಿ ಪ್ರಜ್ವಲಿಸಿ ಉದ್ಘಾಟನೆ ಮಾಡಿ ಮಾತನಾಡಿ ಅವರು, ರಾಜ್ಯ ಸರಕಾರ ಒಂದು ಬೃಹತ್ ಸರಕಾರವಾದರೇ ಶ್ರೀ ಕ್ಷೇತ್ರ ಧರ್ಮಸ್ಥಳವೊಂದು ಮಿನಿ ಸರಕಾರದಂತೆ ಜನಪರ ಕಾರ್ಯ ನಡೆಸುತ್ತಿದೆ. ಇಂತಹ ಕಾರ್ಯಕ್ರಮಗಳಿಂದ ರಾಜ್ಯದ ಜನತೆಯ ಆಷಯಗಳು ಈಡೇರಿಸಲು ನೇರವಾಗುತ್ತಿದೆ. ಜನಪರ ಕಲ್ಯಾಣಕ್ಕೆ ಈ ಯೋಜನೆ ಉತ್ತಮ ವೇದಿಕೆಯಾಗಿದೆ ಎಲ್ಲರು ಈ ಯೋಜನೆಯ ಸದುಪಯೋಗಪಡೆದುಕೊಳ್ಳುವಂತೆ ಕರೆ ನೀಡಿದರು. 

ಸಂಸ್ಥೆಯ ಜಿಲ್ಲಾ ನಿರ್ದೇಶಕ ಪ್ರವೀಣ್‌ಕುಮಾರ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬ್ಯಾಂಕಿನ ಬಿ.ಸಿ ಟ್ರಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದೆ. ಯೋಜನೆಯ ಮೂಲಕ ಸ್ವಸಹಾಯ ಸಂಘಗಳನ್ನು ರಚನೆ ಮಾಡಿ ಸಂಘಗಳ ನಿರ್ವಹಣೆಯ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿ ಸಂಘಗಳಿಗೆ ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನಿಂದ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಿದೆ ಎಂದು ತಿಳಿಸಿದರು. 

ದುರ್ಬಲ ವರ್ಗದ ಮಹಿಳೆಯರಲ್ಲಿ ಕುಟುಂಬ ನಿರ್ವಹಣೆ ಜಾಣ್ಮೆ, ಹಣಕಾಸು ವ್ಯವಹಾರ ಜ್ಞಾನ, ಮಕ್ಕಳ ಶಿಕ್ಷಣ, ಪೌಷ್ಟಿಕ ಆಹಾರ, ಸ್ವ ಉದ್ಯೋಗ, ನಾಗರಿಕ ಸೌಲಭ್ಯಗಳ ಬಳಕೆ, ಮುಂತಾದ ಗುರಿಗಳನ್ನಿರಿಸಿಕೊಂಡು ಯೋಜನೆಯು ಪ್ರಾರಂಭಿಸಿದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಶ್ರೀ ಮತಿ ಹೇಮಾವತಿ ವಿ. ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಇಂದು ಜನಪ್ರೀಯ ಕಾರ್ಯಕ್ರಮದ ರೂಪುರೇಷ ಪಡೆದು ಬೆಳೆದು ಬಂದಿದೆ ಎಂದು ತಿಳಿಸಿದರು.

   ಕಾರ್ಯಕ್ರಮದಲ್ಲಿ ಬೀದರ್ ಕರ್ನಾಟಕ ಬಿ ಇ ಡಿ ಕಾಲೇಜು ಉಪನ್ಯಾಸಕಿ ವಿದ್ಯಾವತಿ ಬಸವರಾಜ ಬಲ್ಲೂರ್ ವಿಶೇಷ ಉಪನ್ಯಾಸ ನೀಡಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿ, ಮಹಿಳೆಯೆಂದರೇ ಗುಡಿ ಇಲ್ಲದ ದೇವರ ರೂಪುದವಳಾಗಿದ್ದು, ಗೋವಿನ ತರಹ ತ್ಯಾಗಮಯಿ ಹೆಣ್ಣೇ ಈ ಮಹಾತಾಯಿ. ಮಾರ್ಚ್ ೮ ಮಾತ್ರ ಮಾತ್ರ ಮಹಿಳೆಯರು ನೆನೆಪಾಗುವುದು ನಿಲ್ಲಬೇಕು. ಸದಾಕಾಲ ಅವರಿಗಾಗಿ ಶ್ರಮಿಸಬೇಕು.  

ಮಹಿಳೆಯರಲ್ಲಿ ಬೌದ್ಧಿಕ ರಾಜಕೀಯ ಸಾಮಾಜಿಕ ಆರ್ಥಿಕ ಬಲವನ್ನು ಹೆಚ್ಚಳವಾದಾಗ ಮಾತ್ರ ಮಹಿಳಾ ಸಬಲೀಕರಣ ಸಶಕ್ತತೆಗೆ ಬಲ ಬರುತ್ತದೆ. ಸದಾಕಾಲ ಮಹಿಳೆಯರು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ತಮ್ಮ ಆತ್ಮೀಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು . ಯಾವಾಗಲೂ ಧನಾತ್ಮಕ ಭಾವನೆಯನ್ನು ಹೊಂದಬೇಕು. ಸಂವಿಧಾನವು ಮಹಿಳೆಯರೆಲ್ಲರಿಗೂ ಸಮಾನತೆ ಹಕ್ಕು ನೀಡಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಭಾಗವಹಿಸಲು ಸಹಕಾರ, ಪ್ರೇರಣೆ ನೀಡುತ್ತಿದೆ . ಪ್ರತಿಯೊಬ್ಬರು ಹೆಣ್ಣು ಮಗುವಿನ ಮಗುವಿನ ಬ್ರುಣ ಹತ್ಯೆ, ಲಿಂಗ ಭೇದ, ಮಹಿಳೆಯರ ಆರೋಗ್ಯ ಮತ್ತು ಸಾಕ್ಷರತೆ ಬಗ್ಗೆ ಎಲ್ಲರು ಕೈಜೋಡಿಸಬೇಕು. ಮಹಿಳೆಯರು ಧ್ವನಿ ಇಲ್ಲದವರಿಗೆ ಧಣಿಯಾಗಿ ಅವರ ಹಿಂದೆ ನಿಲ್ಲಬೇಕು. ಸಮಾಜದಲ್ಲಿ ಮಾನವ ಹಕ್ಕುಗಳು ಮತ್ತು ತಾರತಮ್ಯವನ್ನು ಗೌರವಿಸುವುದು ಮತ್ತು ಬೆಂಬಲಿಸುವುದು ಎಲ್ಲರೂ ಕಲಿಯಬೇಕು. ಮಹಿಳೆಯರನ್ನು ಸಬಲೀಕರಣ ಗೊಳಿಸುವ ಉದ್ಯಮ ಅಭಿವೃದ್ಧಿ ಇನ್ನಿತರ ಪೂರೈಕೆ ಸರಪಳಿಗಳನ್ನು ಜಾರಿಗೊಳಿಸಬೇಕು ಎಂದರು. 

ಸ್ಥಳೀಯ ವೀರಕ್ತಮಠದ ಪರಮ ಪೂಜ್ಯ ಶ್ರೀ ಮ.ನಿ.ಪ್ರ. ಸಿದ್ಧಲಿಂಗ ಮಹಾಸ್ವಾಮಿಜಿಗಳು ದಿವ್ಯಸಾನಿದ್ಯವಹಿಸಿ ಆಶೀರ್ವಚನ ನೀಡಿದರು.

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಾಯ ಪಡೆದು ಸ್ವಾವಲಂಬಿ ಬದುಕು ಸಾಗಿಸುತ್ತಿರುವ ಕಾರ್ಯಕ್ರಮದಲ್ಲಿ ೧೫ ಜನ ಮಹಿಳಾ ಸಾಧಕಿಯರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಮಹಿಳಾ ಸಂಘದ ಸದಸ್ಯರಿಂದ ನೃತ್ಯ, ಕೋಲಾಟ ಸೇರಿದಂತೆ ಇನ್ನಿತರ ಮನರಂಜನಾ ಕಾರ್ಯಕ್ರಮಗಳು ಜರುಗಿದವು.

ಮಸ್ತ್ ಊಟ

ಕಾರ್ಯಕ್ರಮಕ್ಕೆ ಆಗಮಿಸಿದ ಔರಾದ್, ಕಮಲನಗರ ತಾಲೂಕಿನ ನೂರಾರು ಸಂಘದ ಮಹಿಳೆಯರಿಗೆ ಹುಗ್ಗಿ, ಪಾಯಸ, ಅನ್ನ ಸಾಂಬಾರುವಿನ ಪ್ರಸಾದ ವ್ಯವಸ್ಥೆ ಮಾಡಲಾಯಿತು. 

ಕೋಟ್ :ಪ್ರಭು ಚವ್ಹಾಣ್ ಶಾಸಕ ಔರಾದ್

೨೦೨೬-೨೭ನೇ ಸಾಲಿನಲ್ಲಿ ನಮ್ಮ ಔರಾದ್ ತಾಲೂಕಿನ ಯಾವುದೇ ಸ್ಥಳದಲ್ಲಾದರೂ ಸಹ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಪೀಠಾಧಿಪತಿ ಪರಮ ಪೂಜ್ಯ ಡಾ. ವಿರೇಂದ್ರ ಹೆಗ್ಗಡೆಯವರಿಗೆ ಕರೆಸಿಕೊಂಡು ಬೃಹತ್ ಮಹಿಳಾ ಕಾರ್ಯಕ್ರಮ ಆಯೋಜನೆ ಮಾಡಿ, ಪೂಜ್ಯರ ಆಶೀರ್ವಚನ ಎಲ್ಲರಿಗೆ ದೊರೆಯುವಂತೆ ಯೋಜನೆ ರೂಪಿಸಿಕೊಳ್ಳಲಾಗುವುದು. ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಅಧಿಕಾರಿಗಳು ಇದಕ್ಕೆ ಕೈಜೋಡಿಸಬೇಕು. ಈ ಕಾರ್ಯಕ್ರಮದ ರೂಪುರೇಷ ತಯ್ಯಾರಿಸಿ ನನಗೆ ನೀಡಬೇಕು. ಇದಕ್ಕೆ ಎಷ್ಟೇ ಹಣ ಖರ್ಚಾದರೂ ಸಹ ನಾನು ಸಹಕಾರ ನೀಡುವೆ. 

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಕಾಶಿನಾಥ ಜೀರ್ಗೆ, ಜಿಲ್ಲಾ ಜನ ಜಾಗೃತಿ ಉಪಾಧ್ಯಕ್ಷ ಡಾ. ಶಾಲಿವಾನ್ ಉದಗಿರೆ, ಜಿಲ್ಲಾ ಜನ ಜಾಗೃತಿ ಸದಸ್ಯ ಮಲ್ಲಪ್ಪ ಗೌಡಾ, ಶಿವರಾಜ್ ಅಲಮಾಜೆ, ರಾಮಶೆಟ್ಟಿ ಪನ್ನಾಳೆ, ಕೇರಬಾ ಪವಾರ್, ಉಮಾಕಾಂತ ಪಾಟೀಲ, ಮಲ್ಲಿಕಾರ್ಜುನ, ಅನೀಲ್ ದಾವಣಿ, ಲೋಕೇಶ ಭಾಲ್ಕೆ, ಬಸವರಾಜ್, ಲಕ್ಷಿö್ಮಕಾಂತ, ಸಂಗೀತಾ, ಉಮೇಶ ಗೌಡಾ, ಇತರರಿದ್ದರು. 

ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಗೌಡ ಸ್ವಾಗತಿಸಿ ವಂದಿಸಿದರು. ವಿಲಾಸ ಪೂಜಾರಿ ನಿರೂಪಣೆ ಮಾಡಿದರು.