ಅಪ್ಪಾಜಿ ಗುರುಕುಲದಲ್ಲಿ ವಿಜ್ಞಾನ ಮತ್ತು ಜನಪದ ವಸ್ತು ಪ್ರದರ್ಶನಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಮೆಚ್ಚುಗೆ

ಅಪ್ಪಾಜಿ ಗುರುಕುಲದಲ್ಲಿ ವಿಜ್ಞಾನ ಮತ್ತು ಜನಪದ ವಸ್ತು ಪ್ರದರ್ಶನಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಮೆಚ್ಚುಗೆ

ಅಪ್ಪಾಜಿ ಗುರುಕುಲದಲ್ಲಿ ವಿಜ್ಞಾನ ಮತ್ತು ಜನಪದ ವಸ್ತು ಪ್ರದರ್ಶನಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಮೆಚ್ಚುಗೆ 

ಕಲಬುರಗಿ: ವಿಜ್ಞಾನ, ಜನಪದ ಕಲೆ-ಸಂಸ್ಕೃತಿಯಿಂದ ಮಕ್ಕಳ ನೈಪುಣ್ಯತೆ ಹೆಚ್ಚಿಸುತ್ತದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.

 ಉದನೂರ ನಗರದ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಮತ್ತು ಜನಪದ ವಸ್ತು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, “ಮಕ್ಕಳ ಸರ್ವತೋಮುಖಾಭಿವೃದ್ಧಿಗೆ ವಿಜ್ಞಾನ ಪ್ರದರ್ಶನ ಮತ್ತು ಜನಪದ ಕಲೆ-ಸಂಸ್ಕೃತಿ ಸಂರಕ್ಷಣೆ ಅತ್ಯಂತ ಮುಖ್ಯ. ಇಂತಹ ಪ್ರದರ್ಶನಗಳು ಮಕ್ಕಳ ನೈಪುಣ್ಯತೆ ಮತ್ತು ಸೃಜನಶೀಲತೆಯನ್ನು ವೃದ್ಧಿಸಿ ಬೆಳಕಿಗೆ ತರುತ್ತವೆ” ಎಂದರು 

 “ಅಪ್ಪಾಜಿ ಶಾಲೆಹಾಗೆ ಎಲ್ಲಾ ಶಾಲೆಗಳು ಅನುಸರಿಸಿದರೆ ಮಾದರಿ ಶಾಲೆಗಳಾಗುತ್ತವೆ ” ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.

 ಶ್ರೀನಿವಾಸ ಸರಡಗಿ ಪರಮಪೂಜ್ಯ ರೇವಣಸಿದ್ದ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ “ಪಠ್ಯೇತರ ಚಟುವಟಿಕೆಗಳು ಮಕ್ಕಳ ಸಮಗ್ರ ಬೆಳವಣಿಗೆಯ ಆಧಾರ. ಇಂತಹ ಚಟುವಟಿಕೆಗಳನ್ನು ಉತ್ತೇಜಿಸುವುದು ಅಪ್ಪಾಜಿ ಗುರುಕುಲ ಶ್ಲಾಘನೀಯ ಕಾರ್ಯ ಮಾಡುತ್ತಿದೆ” ಎಂದು ಹೇಳಿದರು.

ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ ಮಾತನಾಡಿ “ಮಕ್ಕಳು ಕೆಸರು ಮುದ್ದೆಯಿದ್ದಂತೆ" ಗುರುಗಳು ಮತ್ತು ಪಾಲಕರು ರೂಪಿಸುವ ರೀತಿಯೇ ಅವರ ಭವಿಷ್ಯವನ್ನು ಕಟ್ಟಿಕೊಡುತ್ತದೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಸ್ಥಾಪಕ ಕಾರ್ಯದರ್ಶಿ ರಾಜಕುಮಾರ್ ಬಿ. ಉದನೂರ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

-ಆರೋಗ್ಯ ಮತ್ತು ನೇತ್ರ ತಪಾಸಣೆ ಶಿಬಿರ

ಕಾರ್ಯಕ್ರಮದ ಅಂಗವಾಗಿ ಯುನೈಟೆಡ್ ಆಸ್ಪತ್ರೆ ಹಾಗೂ ಶ್ರೀ ಸಿದ್ಧರಾಮೇಶ್ವರ ಕಣ್ಣಿನ ಆಸ್ಪತ್ರೆಗಳ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಮತ್ತು ಕಣ್ಣಿನ ತಪಾಸಣೆ ಶಿಬಿರ ನಡೆಯಿತು. ಈ ಶಿಬಿರದಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿ ತಮ್ಮ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡರು.

ವಿದ್ಯಾರ್ಥಿಗಳ ಪ್ರತಿಭೆಗೆ ಮೆಚ್ಚುಗೆ

ಮಕ್ಕಳು ತಯಾರಿಸಿದ ವಿಜ್ಞಾನ ಮಾದರಿಗಳು, ಜನಪದ ವಸ್ತು ಪ್ರದರ್ಶನ, ವೇಷಭೂಷಣ ಕಾರ್ಯಕ್ರಮಗಳನ್ನು ಪಾಲಕರು ಹಾಗೂ ಅತಿಥಿಗಳು ಕಣ್ತುಂಬಿ ನೋಡುತ್ತಾ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು 9ನೇ ತರಗತಿಯ ವಿದ್ಯಾರ್ಥಿನಿ ಅರ್ಚನಾ ನಿರೂಪಿಸಿದರು. ಪ್ರಾರ್ಥನಾ ಗೀತೆಯನ್ನು ಅಕ್ಷರ ,ಸೌಂದರ್ಯ ಶಾಂಭವಿ ಹಾಡಿದರು. ವಂದನಾರ್ಪಣೆಯನ್ನು ಕು. ಶಂಭಾವಿ** ಸಲ್ಲಿಸಿದರು.

--ಭಾಗವಹಿಸಿದ ಗಣ್ಯರು

ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಶರಣರಾಜ್ ಚಪ್ಪರಬಂದಿ, ಡಾ. ಸಿದ್ದಲಿಂಗ ರೆಡ್ಡಿ, ಡಾ. ವಿಜಯ ಪಾಟೀಲ್, ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಭಾಗಮ್ಮ ರಾಜಕುಮಾರ್ ಸೇರಿದಂತೆ ಶಿಕ್ಷಕಿಯರಾದ ಅಭಿಲಾಶ, ಸಾವಿತ್ರಿ, ಅರ್ಚನಾ, ಭಾಗ್ಯಶ್ರೀ, ಅಶ್ವಿನಿ, ದೀಪಾಲಿ, ಶಾಂತಾ, ಲತಾ, ವೈಷ್ಣವಿ, ರಾಹುಲ್, ಶಶಿಕಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.