ಯತ್ನಾಳ್ ವಿರುದ್ಧ ಕ್ರಮಕ್ಕೆ ಲಿಂಗಾಯತ ಮಹಾಸಭ ಆಗ್ರಹ.

ಯತ್ನಾಳ್ ವಿರುದ್ಧ ಕ್ರಮಕ್ಕೆ ಲಿಂಗಾಯತ ಮಹಾಸಭ ಆಗ್ರಹ.

ಯತ್ನಾಳ್ ವಿರುದ್ಧ ಕ್ರಮಕ್ಕೆ ಲಿಂಗಾಯತ ಮಹಾಸಭ ಆಗ್ರಹ.

 ಅಫಜಲಪುರ:ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವ ಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಶಾಸಕ ಬಸಣ್ಣಗೌಡ ಪಾಟೀಲ ಯತ್ನಾಳ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಬಸಣ್ಣ ಗುಣಾರಿ ಆಗ್ರಹಿಸಿದ್ದಾರೆ.

ಇತ್ತೀಚೆಗೆ ಬೀದರನಲ್ಲಿ ನಡೆದ ಬಿಜೆಪಿ ಕಾರ್ಯ ಕ್ರಮ ವೊಂದರಲ್ಲಿ ವಿಶ್ವ ಗುರು ಬಸವಣ್ಣನವರು ಹೊಳಗೆ ಹಾರಿ ಪ್ರಾಣ ಬಿಟ್ಟರು ಎಂದು ಹೇಳಿಕೆ ನೀಡಿದ್ದಾರೆ, ಇದು ಅತ್ಯಂತ ಖಂಡನರ್ಹವಾಗಿದೆ ಕೂಡಲೆ ಬೇಷರತ್ತಾಗಿ ಕ್ಷಮೆಯಾಚಿಸಬೇಕು. ಅಣ್ಣ ಬಸವಣ್ಣನವರು ಹೊಳಗೆ ಹಾರಿಲ್ಲ, ಜ್ಞಾನದ ಹೊಳೆಹರಿಸಿದ್ದಾರೆ. ಹರಕು ಬಾಯಿ ಯತ್ನಾಳ ನಾಲಿಗೆ ಹರಿಬಿಡುವ ಮೂಲಕ ಅವರ ವ್ಯಕ್ತಿತ್ವ ತೋರಿಸಿದ್ದಾರೆ. ಕ್ಛಮೆ ಕೆಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುವುದು. ಎಂದು ಅಫಜಲಪೂರ ಜಾಗತಿಕ ಲಿಂಗಾಯತ ಮಹಾಸಭಾ ಅದ್ಯಕ್ಷ ಬಸಣ್ಣ ಎಂ ಗುಣಾರಿ ಆಗ್ರಹಿಸಿದ್ದಾರೆ.