ಅನಿಲ್ ಗುನ್ನಾಪೂರ ಅವರ ‘ಸರ್ವೆ ನಂಬರ್ 97, ಕಥಾಸಂಕಲನ ಯುವ ಸಾಹಿತಿಗಳಿಗೆ ಮಾದರಿ: ಕೆ.ನೀಲಾ

ಅನಿಲ್ ಗುನ್ನಾಪೂರ ಅವರ ‘ಸರ್ವೆ ನಂಬರ್ 97, ಕಥಾಸಂಕಲನ ಯುವ ಸಾಹಿತಿಗಳಿಗೆ ಮಾದರಿ: ಕೆ.ನೀಲಾ

ಅನಿಲ್ ಗುನ್ನಾಪೂರ ಅವರ ‘ಸರ್ವೆ ನಂಬರ್ 97’ ಕಥಾಸಂಕಲನ ಯುವ ಸಾಹಿತಿಗಳಿಗೆ ಮಾದರಿ : ಕೆ.ನೀಲಾ

ಕಲಬುರಗಿ: ಕಥೆಗಳು ನಮ್ಮ ಪರಿಸರ ಮತ್ತು ಸಮಾಜದ ವಿವಿಧ ವಾಸ್ತವಿಕ ನೆಲೆಗಟ್ಟಿನಲ್ಲಿ ಬರೆಯಲ್ಪಟ್ಟಾಗ ಸೃಜನಶೀಲ ಸಾಹಿತ್ಯ ಹೊರಹೊಮ್ಮಲು ಸಾಧ್ಯ ಎಂದು ಹಿರಿಯ ಸಾಹಿತಿ ಕೆ ನೀಲಾ ಅಭಿಪ್ರಾಯ ಪಟ್ಟರು.

ಸರ್ವೆ ಇಲಾಖೆಯ ಕನ್ನಡ ಸಾಹಿತ್ಯಾಸಕ್ತರ ಬಳಗದ ವತಿಯಿಂದ ಆಯೋಜಿಸಿದ್ದ ಭೂಮಾಪನ ಇಲಾಖೆಯ ಭೂಮಾಪಕ ಅನಿಲ್ ಗುನ್ನಾಪೂರ ಅವರ ‘ಸರ್ವೆ ನಂಬರ್ 97’ ಶೀರ್ಷಿಕೆಯ ಕಥಾ ಸಂಕಲನದ ಎರಡನೇ ಮುದ್ರಣದ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರದಂತಹ ಕೃತ್ಯಗಳು, ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಮಾರ್ಗಗಳನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

 ಸಾಹಿತಿ ಹಾಗೂ ಕರ್ನಾಟಕ ಕೇಂದ್ರೀಯ ವಿದ್ಯಾಲಯದ ಡೀನ್ ಪ್ರೊ ವಿಕ್ರಮ್ ವೀಸಾಜಿ ಪುಸ್ತಕ ಪರಿಚಯಿಸಿ ಮಾತನಾಡಿ, 

 ಸಮಾಜದ ವಿವಿಧ ಸ್ಥರದ ಹಿನ್ನೆಲೆಯಿಂದ ಬಂದಿರುವ ಬರಹಗಾರರು ತಮ್ಮ ಬದುಕಿನಲ್ಲಿ ಕಂಡುಂಡ ಅನುಭವಗಳನ್ನು ಕಥೆಗಳ ರೂಪದಲ್ಲಿ ಸಮಾಜಕ್ಕೆ ಪರಿಚಯಿಸುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಹೊಸ ಶಕೆ ಆರಂಭಿಸಿದ್ದಾರೆ ಎಂದು ನುಡಿದರು.

  ‘ವೃತ್ತಿಯಲ್ಲಿ ಭೂಮಾಪಕರಾಗಿರುವ ಅನಿಲ್ ಗುನ್ನಾಪೂರ ಅವರು ಕಥೆಗಳಲ್ಲಿಯ ಎಲ್ಲ ಬಗೆಯ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅದರಲ್ಲೂ ಅವರ, ಸರ್ವೆ ನಂಬರ್ - 97, ಲಿಂಗಾಯತ ಖಾನಾವಳಿ ಹಾಗೂ ಕಸ್ತೂರಿ ಕ್ಯಾಂಟೀನ್ ಕಥೆಗಳು ಹೊಸ ಹೊಳಹುಗಳನ್ನು ನೀಡುತ್ತವೆ’ ಎಂದು ಹೇಳಿದರು. 

ಲೇಖಕಿ ಡಾ.ಸಂಧ್ಯಾ ಹೋನಗುಂಟಿಕರ್ ಮಾತನಾಡಿ, ‘ಯಾವುದೇ ಒಂದು ಪ್ರಸಂಗದ ಎಳವೆಯಿಂದಲೇ ಇಡೀ ಕಥೆ ಸಿದ್ಧವಾಗುತ್ತದೆ. ಕಥೆ ತನ್ನನ್ನು ತಾನು ವಿಮರ್ಶಿಸಿಕೊಂಡಾಗ ಅದು ಓದುಗರನ್ನು ತಲುಪಲು ಯಶಸ್ವಿಯಾಗುತ್ತದೆ ಎಂದು ನುಡಿದರು.

 ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಭೂಮಾಪನ ಇಲಾಖೆಯ ಉಪನಿರ್ದೇಶಕ ಮಹೇಶ ಸನ್ನತಿ, ಕಲಬುರಗಿ ತಾಲೂಕಿನ ಸಹಾಯಕ ನಿರ್ದೇಶಕ ವೀರಣ್ಣ ಗಣಜಲಖೇಡ, ಪತ್ರಕರ್ತ ಭವಾನಿ ಸಿಂಗ್ ಠಾಕೂರ್, ಸೇರಿದಂತೆ ಹಲವರು ಮಾತನಾಡಿದರು.

ಚಿತ್ತಾಪುರ ತಾಲೂಕಿನ ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ ಚಂದ್ರ ವಿದ್ಯಾಸಾಗರ ಕಾರ್ಯಕ್ರಮ ಹಾಗೂ ಕೃತಿಯ ೨ ನೇ ಮುದ್ರಣದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ, ಕಥೆಗಾರ ಮಂಜುನಾಥ ನವಲಕಲ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ಕೃಷಿ ಶ್ರೀ ಪ್ರಶಸ್ತಿ ಪುರಸ್ಕೃತ ಲೇಖಕ ಪ್ರೊ ಯಶವಂತರಾಯ ಅಷ್ಠಗಿ, ಹಿರಿಯ ಸಾಹಿತಿ ಡಾ ಕೆ ಗಿರಿಮಲ್ಲ, ಚಲನಚಿತ್ರ ನಟ ಅಶೋಕ್ ಕಾಳೆ, ಕವಿ ಎಚ್ ಎಸ್ ಬರಗಾಲಿ, ಶ್ರೀಕಾಂತ್ ಪಾಟೀಲ್ ತಿಳಗೂಳ, ಶಿವರಾಜ ತಿವಾರಿ, ಮಹೇಶ್ ಹೂಗಾರ, ನಿಜಲಿಂಗ ನಿಗಾಡಿ, ವಿಜಯಲಕ್ಷ್ಮಿ ಪಾಟೀಲ್, ನೌಕರ ಸಂಘದ ಸೇವಾ ಪ್ರಶಸ್ತಿ ಪುರಸ್ಕೃತ ಖಾಜಾ ಬಂದೇ ನವಾಜ್, ವಿನೋದ ಗೋಳಾ, ರೇವಣಸಿದ್ದಪ್ಪ ಪಾಟೀಲ್ ತಿಮ್ಮನಾಯಕ, ಸಂಗೀತಾ ಪಾಟೀಲ್, ಆಂಜನೇಯ, ಸೋಮನಾಥ್ ಮಂಗಾಣೆ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.