ಬಿಜೆಪಿ ಮುಖಂಡ ಅಶೋಕ ಮೋಗದಂಪೂರ್ ಹುಟ್ಟುಹಬ್ಬದ ಪ್ರಯುಕ್ತ, ಗಡಿ ಭಾಗ ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ : ಸ್ವಯಂ ಪ್ರೇರಿತವಾಗಿ 41 ಜನರಿಂದ ರಕ್ತ ಸ್ವೀಕಾರ

ಬಿಜೆಪಿ ಮುಖಂಡ ಅಶೋಕ ಮೋಗದಂಪೂರ್ ಹುಟ್ಟುಹಬ್ಬದ ಪ್ರಯುಕ್ತ, 

ಗಡಿ ಭಾಗ ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ : ಸ್ವಯಂ ಪ್ರೇರಿತವಾಗಿ 41 ಜನರಿಂದ ರಕ್ತ ಸ್ವೀಕಾರ 

ಚಿಂಚೋಳಿ : ತೆಲಂಗಾಣ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯಿತು. ಕುಂಚಾವರಂ ಬಿಜೆಪಿ ಮುಖಂಡ ಅಶೋಕ ಮೋಗದಂಪೂರ್ ಅವರ 47ನೇ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. 

ಶಿಬಿರ ಉದ್ಘಾಟಿಸಿ ತಾಲೂಕ ವೈದ್ಯಾಧಿಕಾರಿ ಡಾ. ಗಫಾರ್ ಅವರು ಮಾತನಾಡಿ, ದಾನದಲ್ಲಿ ಶ್ರೇಷ್ಠದಾನ ರಕ್ತ ದಾನ ವಾಗಿದೆ. ರಕ್ತದಾನದಿಂದ ಇನೋಬ್ಬರ ಜೀವ ಉಳಿಸುವ ಮತ್ತು ಜೀವನ ನೀಡುವ ಕೆಲಸವಾಗಿದೆ. ಆ ಜೀವ ಉಳಿಸುವ ಕೆಲಸ ಅಶೋಕ ಮೋಗದಂಪೂರ ಅವರು ಹುಟ್ಟು ಹಬ್ಬ ಆಚರಿಸುವ ಮೂಲಕ ಮಾಡಿ, ಮಾದರಿ ಆಗಿದ್ದಾರೆ ಎಂದರು.

ಈ ಶಿಬಿರದಲ್ಲಿ ಒಟ್ಟು 41 ಜನ ಅಭಿಮಾನಿಗಳು ಭಾಗವಹಿಸಿ ರಕ್ತದಾನ ಮಾಡಿದರು. 

ಕಲಬುರಗಿ ಜೀಮ್ಸ್ ಆಸ್ಪತ್ರೆಯ ಶಿಬಿರದ ತಂಡ ರಕ್ತ ಸ್ವೀಕರಿಸಿತ್ತು.

ಈ ಸಂದರ್ಭದಲ್ಲಿ ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ. ಬಾಲಾಜಿ ಪಾಟೀಲ್ ಬಿಜೆಪಿ ಮುಖಂಡ ಅಶೋಕ ಮೋಗದಂಪೂರ, ಕುಂಚಾವರಂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಗೋಪಾಲ, ಅಧ್ಯಕ್ಷೆ ಸುಜಾತಾ ರಮೇಶ, ರಿಯಾಜ್, ಅಂತಪ್ಪ, ಗೋವರ್ಧನ್, ನವೀನ್, ಖದೀರ್, ಸಂಗಮೇಶ, ಅಶೋಕ, ಮಹೇಶ, ಪಂಡರಿ ಬ್ಯಾಗರಿ ಅವರು ಸೇರಿದಂತೆ ಇತರರು ಉಪಸ್ಥಿತರಿದ್ದರು.