ಸಂಗೀತ, ನೃತ್ಯ ಮನಸೆಳೆಯುವ ಶೈಲಿಯಾಗಿದೆ ಡಾ ಶರ್ಮಾ
ಸಂಗೀತ, ನೃತ್ಯ ಮನಸೆಳೆಯುವ ಶೈಲಿಯಾಗಿದೆ ಡಾ ಶರ್ಮಾ
ಕಲಬುರಗಿ : ಸಾಂಸ್ಕೃತಿಕ ನೃತ್ಯವು ಪರಂಪರೆಯ ಪ್ರತಿಬಿಂಬವಾಗಿ, ಶಿಸ್ತು ಮತ್ತು ಅಭಿವ್ಯಕ್ತಿಯ ಕಲೆಯಾಗಿ. ಸುಗಮ ಸಂಗೀತವು ಸಂಗೀತ ಪ್ರೇಮಿಗಳಿಗೆ ರಸದೌತಣ ನೀಡುವಂತಹ, ಹೃದಯಸ್ಪರ್ಶಿ ಮನಸೆಳೆಯುವ ಶೈಲಿಯಾಗಿದೆ ಎಂದು ಅಧೀಕ್ಷಕರು ಅಭಿಯಂತರರು ಲೋಕೋಪಯೋಗಿ ಇಲಾಖೆ ಡಾ: ಸುರೇಶ್ ಎಲ್ ಶರ್ಮಾ ಹೇಳಿದರು
ಇಂದು ನಗರದ ಪತ್ತಿಕಾ ಭವನದಲ್ಲಿ ಗುಲ್ಬರ್ಗ ಡ್ಯಾನ್ಸ್ ಸಂಘದ ವತಿಯಿಂದ ಸಾಂಸ್ಕೃತಿಕ ನೃತ್ಯ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಜರಗಿತು.
ರವಿಚಂದ್ರ ಗುತ್ತೇದಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು . ಸಂಸ್ಥೆಯ ಅಧ್ಯಕ್ಷ ಅಕ್ಷಯ್ ಕುಮಾರ್ ಅವರು ಕಾರ್ಯಕ್ರಮ ನಿರ್ವಹಿಸಿದರು.
ಮುಖ್ಯ ಅತಿಥಿಗಳಾಗಿ ಸ್ಥಳೀಯ ಮುಖಂಡರು ಆಗಮಿಸಿದರು. ಕಾರ್ಯಮದಲ್ಲಿ ಪುಟಾಣಿ ಮಕ್ಕಳ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು ನಂತರ ಜಿಲ್ಲೆಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರಗಿತು
ಹಾಗೂ ಸಮಾಜ ಸೇವಕರನ್ನು ಸನ್ಮಾನಿಸಿ ಗೌರವಿಸಲಾಯಿತು.