ಕಾರು ಜೀಪ್ ಡಿಕ್ಕಿ ನಾಲ್ವರು ಕೃಷಿ ಕಾರ್ಮಿಕ ಮಹಿಳೆಯರ ಸ್ಥಿತಿ ಗಂಭೀರ.

ಕಾರು ಜೀಪ್  ಡಿಕ್ಕಿ  ನಾಲ್ವರು ಕೃಷಿ ಕಾರ್ಮಿಕ ಮಹಿಳೆಯರ ಸ್ಥಿತಿ ಗಂಭೀರ.

ಕಾರು ಜೀಪ್ ಡಿಕ್ಕಿ ನಾಲ್ವರು ಕೃಷಿ ಕಾರ್ಮಿಕ ಮಹಿಳೆಯರ ಸ್ಥಿತಿ ಗಂಭೀರ.

ಆಳ0ದ: ಸ್ಥಳೀಯ ಪೊಲೀಸ್ ಠಾಣೆಯ ವ್ಯಾಪ್ತಿಯ ಉಮರಗಾ ಹೆದ್ದಾರಿ ಮಾರ್ಗದ ತೆಲಾಕು ಮತ್ತು ಚಿತಲಿ ಗ್ರಾಮದ ನಡುವೆ ಭಾನುವಾರ ಸಂಜೆ ಕಾರು ಮತ್ತು ಕಮಾಂಡರ್ ಜೀಪ್ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಜೀಪ್‌ನಲ್ಲಿದ್ದ ಆರು ಕೃಷಿ ಕಾರ್ಮಿಕ ಮಹಿಳೆಯರ ಗಂಭೀರವಾಗಿ ಗಾಯಗೊಂಡು ಘಟನೆ ನಡೆದಿದೆ. 

ಸರುಬಾಯಿ ಗಿಡ್ಡಪ್ಪ ಕುಶಾಳಕರ್ (35), ಶೋಭಾ ತಿಮ್ಮಣಣಾ ದಂಡಗುಲೆ (35), ಈರಮ್ಮಾ ಮಾರುತಿ ದಂಡಗುಲೆ (42), ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದು ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. 

ಅಲ್ಲದೆ, ತಿಮ್ಮವ್ವ ರಾಜು ದಂಡಗುಲೆ (40) ಎಂಬುವರು ಬಲಗಾಲು ತೊಡೆಯವರೆಗೆ ಕಡಿಗೊಂಡಿದೆ. ಸರುಬಾಯಿ ಹಣಮಂತ ದಂಡಗುಲೆ (37) ಇವರ ಟೊಂಕ ಮುರಿದಿದೆ ಇವರೆಯಲ್ಲರನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. 

ಅಲ್ಲದೆ, ಇನ್ನಿಬ್ಬರಾದ ಮಹಾದೇವಿ ಲಕ್ಷö್ಮಣ ಕುಸಾಳಕರ್ (30), ಭಾಗಮ್ಮ ಶಂಕರ ದಂಡಗುಲೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ನೀಡಿ ಮನೆಗೆ ಬಿಡುಗಡೆಗೊಳಿಸಲಾಗಿದೆ. 

ಈ ಎಲ್ಲ ಕೃಷಿ ಕಾರ್ಮಿಕ ಗಾಯಾಳು ಮಹಿಳೆಯರು ಆಳಂದ ಧನಗರ ಗಲ್ಲಿಯ ನಿವಾಸಿಗಳಾಗಿದ್ದು, ಸಾಲೇಗಾಂವ ಗ್ರಾಮಕ್ಕೆ ಭಾನುವಾರ ಕೃಷಿ ಕೆಲಸಕ್ಕೆ ಜೋಳ ಕೋಯಿಲು ಹೋಗಿ ಬರುವಾಗ ಘಟನೆ ನಡೆದಿದೆ. 

ಗಾಯಾಳುಗಳನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿದ್ದ, ಜೀವನ್ಮರಣದ ನಡುವೆ ಗಾಯಾಳುಗಳು ಹೋರಾಡುತ್ತಿರುವ ಘಟನೆ ವರದಿಯಾಗಿದೆ. 

ಚಲಿಸುತ್ತಿದ್ದ ಜೀಪ್‌ನ ಹಿಂಬದಿಯ ಟೈಯರ್ ಸ್ಫೂಟಗೊಂಡು ಚಾಲಕನ ನಿಯಂತ್ರಣ ತಪ್ಪಿದ್ದು, ಎದುರುಮುಖವಾಗಿ ಬಂದ ಕಾರಿಗೆ ಹಠಾತಾಗಿ ಮುಖಾ ಮುಖಿ ಡಿಕ್ಕಿಯಾಗಿ ಜೀಪ್ ಪಲ್ಟಿ ಹೊಡೆದು ಅಪಘಾತ ಸಂಭವಿಸಿದೆ, ಪಲ್ಟಿ ಹೊಡೆದ ಜೀಪ್‌ನು ಮೇಲೆತ್ತುವಲ್ಲಿ ಸ್ಥಳೀಯರು ಸಕಾಲಕ್ಕೆ ದಾವಿಸಿ ಹೆಚ್ಚಿನ ಅನಾಹುತವನ್ನು ತಡೆದು ತಕ್ಷಣಕ್ಕೆ ಗಾಯಾಳುಗಳನ್ನು ಸಾಗಿಸಲು ತುರ್ತು ವಾಹನ ಕರೆಯಿಸಿ ಮಾನವೀತೆ ಮೆರೆದಿದ್ದಾರೆ. 

ಹೆದ್ದಾರಿಯ ಮಾರ್ಗದ ಸಾಲೇಗಾಂವ ಗ್ರಾಮದಿಂದ ಆಳಂದಕ್ಕೆ ಸಂಜೆ ಕೃಷಿ ಕೆಲಸ ಮುಗಿಸಿಕೊಂಡು ಜೀಪ್‌ನಲ್ಲಿ ಬರುತ್ತಿದ್ದಾಗ ಎದುರಿಗೆ ಬಂದ ಕಾರು ಮುಖಾ ಮುಖಿ ಡಿಕ್ಕಿ ಹೊಡೆದು ಜೀಪ್ ಮತ್ತು ಕಾರು ಜಖಂಗೊ0ಡಿದ್ದು, ಜೀಪಿನಲ್ಲಿದ್ದ 8 ಕೃಷಿ ಕಾರ್ಮಿಕ ಮಹಿಳೆಯರ ಪೈಕಿ ಇಬ್ಬರು ಸುರಕ್ಷಿತವಾಗಿ ಇನ್ನೂ 6 ಮಹಿಳೆಯರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗಾಯಾಳುಗಳ ಕುಟುಂಬಸ್ಥರು ಹೇಳಿಕೊಂಡಿದ್ದಾರೆ. 

ಘಟನಾ ಸ್ಥಳಕ್ಕೆ ದಾವಿಸಿದ ಹೆದ್ದಾರಿ ಪ್ರಯಾಣಿಕರು ಮತ್ತು ತೆಲಾಕುಣಿ ಗ್ರಾಮದವರ ನೆರವಿನಿಂದ ಹಾಗೂ 112 ತುರ್ತು ಪೊಲೀಸ್‌ರ ಸಹಾಯದಿಂದ ಸ್ಥಳೀಯ ಸಾರ್ವನಿಜಕ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿತ್ತಾದರು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. 

ವರದಿ ಡಾ. ಅವಿನಾಶ S ದೇವನೂರ ಆಳಂದ