ಗಮನ ಸೆಳೆದ ಆಟೋ ಚಾಲಕರ ಕನ್ನಡ ರಾಜ್ಯೋತ್ಸವ ರ‍್ಯಾಲಿ

ಗಮನ ಸೆಳೆದ ಆಟೋ ಚಾಲಕರ ಕನ್ನಡ ರಾಜ್ಯೋತ್ಸವ ರ‍್ಯಾಲಿ

ಗಮನ ಸೆಳೆದ ಆಟೋ ಚಾಲಕರ ಕನ್ನಡ ರಾಜ್ಯೋತ್ಸವ ರ‍್ಯಾಲಿ 

ಆಳಂದ: ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿನ ಆಟೋ ಚಾಲಕರ ಸಂಘದ ಆಶ್ರಯದಲ್ಲಿ ಶನಿವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. 

ಸಂಘದ ಅಧ್ಯಕ್ಷ ಮಲ್ಲು ಅಷ್ಟಗಿ ಹಾಗೂ ಉಪಾಧ್ಯಕ್ಷ ರಾಜು ವಗ್ಗೆ ನೇತೃತ್ವದಲ್ಲಿ ಈ ವಿಶೇಷ ಸಂದರ್ಭದಲ್ಲಿ ನಾಡು ನುಡಿ ಹಾಗೂ ಕನ್ನಡ ಭಾಷೆಯ ಬಗ್ಗೆ ಪ್ರಗತಿ ಮತ್ತು ಅಭಿಮಾನ ವ್ಯಕ್ತಪಸಿದರು. 

ಶ್ರೀರಾಮಮಾರುಕಟ್ಟೆ, ಬಸ್ ನಿಲ್ದಾಣ, ರಜ್ವಿರೋಡ ಹಾಗೂ ಪ್ರಮುಖ ರಸ್ತೆಗಳ ಮಾರ್ಗವಾಗಿÀ ಆಟೋಗಳಿಗೆ ಕನ್ನಡ ಭಾವುಕಟ್ಟು ಹಾಕಿ ಸಾಲು ಸಾಲಾಗಿ ಆಟೋಗಳ ರ್ಯಾಲಿ ನಡೆಸಿ ಸಾರ್ವಜನಿಕ ಗಮನ ಸೆಳೆದರು. 

ಕನ್ನಡ ನಾಡು ನೆಚ್ಚಿನ ಧಾರ್ಮಿಕ ಉತ್ಸವದಂತೆ, ಶ್ರೀರಾಮ ಮಾರುಕಟ್ಟೆ ಬಳಿಯ ನಾಡದೇವಿ ಭುವನೇಶ್ವರ ದೇವಿಯ ಭಾವಚಿತ್ರಕ್ಕೆ ಆರಂಭದಲ್ಲಿ ಪೂಜೆ ಸಲ್ಲಿಸುವ ಮೂಲಕ ಭಕ್ತಿಯೊಂದಿಗೆ ಭಾಷಾ ಸಾಂಸ್ಕೃತಿಕ ಪರಂಪರೆಯ ಗೌರವ ವ್ಯಕ್ತಪಡಿಸಿದರು.

ಬಳಿಕ, ಆಟೋ ಚಾಲಕರ ಸಂಘದ ಸದಸ್ಯರು ಸಾರ್ವಜನಿಕರಿಗೆ ಸಿಹಿ ಹಂಚಿ ಹಾಲು ಕುಡಿಸಿದರು. ಈ ಮೂಲಕ ಆಟೋ ಚಾಲಕರು ತಮ್ಮ ಪರಸ್ಪರ ಸ್ನೇಹ ಮತ್ತು ಸಹಕಾರವನ್ನು ಹಂಚಲು ಉತ್ಸವವನ್ನೇ ಮಾದರಿಯಾಗಿಯೇ ಆಚರಿಸಿದರು. 

ಈ ಸಂಭ್ರಮದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಮಲ್ಲು ಅಷ್ಟಗಿ, ಉಪಾಧ್ಯಕ್ಷ ರಾಜು ವಗ್ಗೆ, ನಾಗರಾಜ ಉಮರ್ಗಿ, ಗುಂಡು ತಡಕಲ್, ಮಹೇಶ್ ಮುದಗಲ್ಲೆ, ಖಾಲಿದ್ ದರೋಗ, ಶರರಣಪ್ಪ ಗೊಳೇ, ಅಂಬ್ರೆಷ್ ಉಳ್ಳೆ, ಆನಂದ್ ದೊಡ್ಮನ್ನಿ ಸೇರಿದಂತೆ ಇತರ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.