14 ಕ್ಕೆ ಶ್ರೀಮತಿ ಮಲ್ಲಮ್ಮಎಸ್.ಕಾಳಗಿ ಅವರ ನಾಲ್ಕು ಕೃತಿಗಳ ಲೋಕಾರ್ಪಣೆ
14 ಕ್ಕೆ ಶ್ರೀಮತಿ ಮಲ್ಲಮ್ಮಎಸ್.ಕಾಳಗಿ ಅವರ ನಾಲ್ಕು ಕೃತಿಗಳ ಲೋಕಾರ್ಪಣೆ
ಕಲಬುರಗಿ:ಮಹಾಗಾಂವನ ಬಸವಪ್ರಭು ಪ್ರಕಾಶನ ವತಿಯಿಂದ ಶ್ರೀಮತಿ ಮಲ್ಲಮ್ಮ ಶಿವರಾಜ ಕಾಳಗಿ ಅವರು ರಚಿಸಿರುವ ಗುಬ್ಬಿ ಕಟ್ಟಿದ ಗೂಡು,ಶ್ರೀ ಗುರುಲಿಂಗ ಶಿವಾಚಾರ್ಯರ ಸಮಗ್ರ ಕಾವ್ಯ,ಲಾಲ್ ಬಹದ್ದೂರ್ ಶಾಸ್ತ್ರಿ, ಗೊತ್ತಿಲ್ಲದ ದಿನಾಂಕ, ಸೇರಿದಂತೆ 4 ಪುಸ್ತಕಗಳ ಲೋಕಾರ್ಪಣೆ ಸಮಾರಂಭ ದಿನಾಂಕ 14.12.2025 ರಂದು ಸಾಯಂಕಾಲ 4.15 ಕ್ಕೆ ಮುಕ್ತoಪುರನ ಎಸ್. ಎಸ್.ರಾಜಾಪುರ ಬಿಲ್ಡಿಂಗನಲ್ಲಿ ಜರಗಲಿದ್ದು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಳ್ಳಿಮಠ ಸಂಸ್ಥಾನದ ಪೂಜ್ಯಶ್ರೀ ವಿರುಪಾಕ್ಷ ದೇವರು ವಹಿಸಲಿದ್ದು ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಅಪ್ಪಾರಾವ ಅಕ್ಕೋಣಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದ ಪ್ರಕಾಶಕರಾದ ಡಾ. ಬಸವರಾಜ ಕೊನೇಕ್ ಅವರು ನಾಲ್ಕು ಪುಸ್ತಕಗಳ ಲೋಕಾರ್ಪಣೆ ಮಾಡಲಿದ್ದು, ಡಾ. ಕಾವ್ಯಶ್ರೀ ಮಾಹಾಗಾoವಕರ, ಡಾ. ಸಂಗನಗೌಡ ಹಿರೇಗೌಡರು ಕೃತಿ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚೇತನ ಯೂಥ್ ಫೋರಮನ ಕಾರ್ಯದರ್ಶಿಗಳಾದ ಶ್ರೀ ದಿನೇಶ ಪಾಟೀಲ, ಶ್ರೀ ಅಮರನಾಥ ಜಿ.ತಡಕಲ್,ಶ್ರೀ ಶಿವರಾಜ ಕಾಳಗ,ಶ್ರೀ ಕಿರಣ ಪಾಟೀಲ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಉದ್ಯಮಿಗಳಾದ ಶ್ರೀ ಸಿದ್ದಣ್ಣ ರಾಜಪುರರವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಶ್ರೀವಿಜಯ ಕುಮಾರ ಪಾಟೀಲ ತೆಗಲತಿಪ್ಪಿ,ಬಿ.ಎಚ್ ನೀರ ಗುಡಿ, ಡಾ. ತೀರ್ಥಕುಮಾರ ಬೆಳಕೋಟಾ, ಶ್ರೀಮತಿ ಶಿವಲೀಲಾ ಕಲಗುರ್ಕಿ,ಶ್ರೀ ಅಣವೀರ ಕಾಳಗಿ, ಶ್ರೀಮತಿ ಅನುಸೂಯ ಕಲ್ಮಠ ಶ್ರೀಮತಿ ಚಂದ್ರಭಾಗ ಸೋಮರಾಜ ಅವರನ್ನು ಗೌರವಿಸಲಿದ್ದು,ಇದೆ ಸಂದರ್ಭದಲ್ಲಿ ಎಸ್.ಎಸ್. ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸೃಷ್ಟಿ ಮಲ್ಲಿನಾಥ, ಪ್ರೀತಿ ಬಸವರಾಜ, ಸೃಷ್ಟಿ ಸುನಿಲ, ಸೃಷ್ಟಿ ನಾಗೇಶ, ನಾಗವೇಣಿ ಶರಣಬಸಪ್ಪ ಅವರನ್ನು ಸನ್ಮಾನಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಡಾ. ಶರಣಬಸಪ್ಪ ವಡ್ಡನಕೇರಿ ಅವರು ತಿಳಿಸಿದ್ದಾರೆ.
