ಸುಂಬಡ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಬಿಳ್ಕೊಡುಗೆ ಸಮಾರಂಭ..

ಸುಂಬಡ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ  ಬಿಳ್ಕೊಡುಗೆ ಸಮಾರಂಭ..

ಸುಂಬಡ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಬಿಳ್ಕೊಡುಗೆ ಸಮಾರಂಭ..

ಯಡ್ರಾಮಿ ತಾಲೂಕಿನ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಸುಂಬಡದ್ದಲ್ಲಿ 10ನೇ ತರಗತಿ ಶಾಲಾ ಮಕ್ಕಳ ಬೀಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಮಡಿವಾಳಪ್ಪ ದುದ್ದಣಗಿ ಅವರು ಮುಖ್ಯ ಅತಿಥಿ ಸ್ಥಾನವನ್ನು ವಹಿಸಿಕೊಂಡಿದ್ದರು ಅದೇ ರೀತಿಯಾಗಿ ಇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಹಾಗೂ ವಿದ್ಯಾರ್ಥಿನಿಯರಿಂದ ಭರತನಾಟ್ಯ ಕಾರ್ಯಕ್ರಮವು ವಿಶೇಷವಾಗಿ ಜರುಗಿತು ಅದೇ ರೀತಿಯಾಗಿ ಶಾಲಾ ವಿದ್ಯಾರ್ಥಿನಿಯರಿಂದ ಕರಾಟೆ ಆತ್ಮ ರಕ್ಷಣಾ ಜಾಗೃತಿ ಕಾರ್ಯಕ್ರಮವು ಜರುಗಿತು ಹಾಗೂ ಇ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಮಡಿವಾಳಪ್ಪ ದುದ್ದಣಗಿ ಗುರೂಜಿ ಅವರು ವಿದ್ಯಾರ್ಥಿಗಳ ಕುರಿತು ಮಾತನಾಡಿದರು ಪ್ರತಿಯೊಬ್ಬರೂ ಜೀವನದಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಞೆಯನ್ನು ಅಳವಡಿಸಿಕೊಳ್ಳಬೇಕು ಇದರಿಂದ ಮುಂದೆ ಯಶಸ್ವಿ ವ್ಯಕ್ತಿಗಳಾಗಲು ದೇಶದ ಉನ್ನತ ಕೊಡುಗೆ ನೀಡಬೇಕಾದರೆ ನಿರಂತರ ಪ್ರಯತ್ನದಿಂದ ನಮ್ಮ ಜೀವನದಲ್ಲಿ ಯಶಸ್ವಿ ಸಾಧಿಸಬಹುದು ಉನ್ನತ ಮಟ್ಟದ ಸಾಧಕರಾಗಬಹುದು ಆದ್ದರಿಂದ ಪ್ರತಿಯೊಬ್ಬರೂ ಸಮಯ ಪ್ರಜ್ಞೆ ಮತ್ತು ಶಿಸ್ತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು ಹಾಗೂ ಈ ಕಾರ್ಯಕ್ರಮದಲ್ಲಿ ಮಹದೇವಪ್ಪ ಶಿಕ್ಷಕರು ಹಾಗೂ ಪರಮೇಶ್ವರ್ ಸಹ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ವಿಭಾಗದ ದೈಹಿಕ ಶಿಕ್ಷಕರು ಸಂತೋಷ್ ಮಡೆದಾರ ಅವರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು ಅದೇ ರೀತಿಯಾಗಿ ನವಶಾದ ಭಾಷಾ ಗುರುಗಳೂ ಭಾಗವಹಿಸಿದ್ದರು ಮತ್ತು ಸಹ ಶಿಕ್ಷಕರಾದ ಸಿದ್ದಪ್ಪ ಸರ್ ಅವರು ಉಪಸ್ಥಿತರಿದ್ದರು ಅದೇ ರೀತಿಯಾಗಿ ಬಸವರಾಜ್ ಗುರುಗಳು ಮಾಶಾಳ ಮತ್ತು ಶಾಲೆಯ ನಿಲಯ ಪಾಲಕರಾದ ಅರವಿಂದ್ ದೇಸಾಯಿ ಅವರು ಭಾಗವಹಿಸಿದ್ದರು ಹಾಗೂ ರಾಜಶೇಖರ್ ಕುನ್ನೂರ್ ಪ್ರಥಮ ದರ್ಜೆಯ ಸಹಾಯಕರು ಮತ್ತು ಟೊಪು ಚೌಹಾಣ ಸಹ ಶಿಕ್ಷಕರು ಮತ್ತು ಚಿತ್ರಕಲಾ ಶಿಕ್ಷಕರಾದ ಶ್ರೀರಾಮಚಂದ್ರ ಗುರೂಜಿ ಅವರು ಮತ್ತು ಭಗವಂತರಾಯ ಸಹಶಿಕ್ಷಕರು ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಅದ್ದೂರಿಯಿಂದ ಭಾಗವಹಿಸಿದ್ದರು ಅದೇ ರೀತಿಯಾಗಿ ಜೆನ್ನ ಶಿಟೂರಿಯೊ ಕರಾಟೆ ಅಸೋಸಿಯೇಷನ್ ತಾಲೂಕ ಅಧ್ಯಕ್ಷರಾದ ಜೆಟ್ಟಪ್ಪ ಎಸ್ ಪೂಜಾರಿ ಹಾಗೂ ಕರಾಟೆ ಶಿಕ್ಷಕರಾದ ಸೆನಸೈ ಶಾಂತಪ್ಪ ಮಾಸ್ತರ ಎಂ ದೇವರಮನಿ ಶಿಕ್ಷಕರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು